Most Centuries: ಆಸ್ಟ್ರೇಲಿಯಾ ಪರ ಅತಿಹೆಚ್ಚು ಟೆಸ್ಟ್ ಶತಕ ಗಳಿಸಿದ ಟಾಪ್ 5 ಆಟಗಾರರು!

Fri, 30 Jun 2023-8:20 pm,

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ ಪರ ಅತಿ ಹೆಚ್ಚುಟೆಸ್ಟ್ ಕ್ರಿಕೆಟ್ ಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 2 ದಶಕಗಳ ವೃತ್ತಿಜೀವನದಲ್ಲಿ ಪಾಟಿಂಗ್ 287 ಪಂದ್ಯಗಳಿಂದ 41 ಶತಕಗಳನ್ನು ಗಳಿಸಿದರು.

ಸ್ಟೀವ್ ಸ್ಮಿತ್ ಅವರು ಸ್ಟೀವ್ ವಾ ಅವರ 32 ಟೆಸ್ಟ್ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ತಮ್ಮ 99ನೇ ಟೆಸ್ಟ್‌ ಪಂದ್ಯಗಳ 174ನೇ ಇನ್ನಿಂಗ್ಸ್‌ನಲ್ಲಿ ಸ್ಮಿತ್‌ ವೇಗವಾಗಿ 32ನೇ ಟೆಸ್ಟ್ ಶತಕ ಗಳಿಸಿದ ಸಾಧನೆ ಮಾಡಿದ್ದಾರೆ.

ಸ್ಟೀವ್ ವಾ 260 ಇನ್ನಿಂಗ್ಸ್‌ಗಳಲ್ಲಿ 32 ಶತಕ ಗಳಿಸಿದ್ದಾರೆ. 1985 ಮತ್ತು 2004ರ ನಡುವೆ 168 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆ ಸಮಯದಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್‌ನ "ಸುವರ್ಣ ಯುಗ"ಕ್ಕೆ ವಾ ಕೊಡುಗೆ ಪ್ರಮುಖವಾಗಿತ್ತು.

15 ವರ್ಷಗಳ ವೃತ್ತಿಜೀವನದಲ್ಲಿ ಮ್ಯಾಥ್ಯೂ ಹೇಡನ್ 103 ಪಂದ್ಯಗಳ 184 ಇನ್ನಿಂಗ್ಸ್‍ಗಳಲ್ಲಿ 31 ಶತಕಗಳನ್ನು ಗಳಿಸಿದರು. ಇವರು ಸಹ ಆಸ್ಟ್ರೇಲಿಯಾದ "ಸುವರ್ಣ ಯುಗ"ಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಹೇಡನ್ ಅತ್ಯುತ್ತಮ ಟೆಸ್ಟ್ ಕ್ರಿಕೆಟ್ ಆರಂಭಿಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್ ಪೈಕಿ ಗರಿಷ್ಠ ವೈಯಕ್ತಿಕ ಸ್ಕೋರ್‌(380)ನ ದಾಖಲೆಯನ್ನು ಸಹ ಹೊಂದಿದ್ದಾರೆ.

ಡೊನಾಲ್ಡ್ ಬ್ರಾಡ್‌ಮನ್ ಎಂಬ ಹೆಸರು ಪ್ರತಿಯೊಬ್ಬ ಕ್ರಿಕೆಟ್ ಉತ್ಸಾಹಿಗೂ ಪರಿಚಿತ. ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಗುರುತಿಸಲ್ಪಟ್ಟಿರುವ ಬ್ರಾಡ್ಮನ್, ಟೆಸ್ಟ್ ಕ್ರಿಕೆಟ್‍ನಲ್ಲಿ 99.94ರ ಸರಾಸರಿಯಲ್ಲಿ ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಬ್ರಾಡ್‌ಮನ್ ತಮ್ಮ 20 ವರ್ಷಗಳ ವೃತ್ತಿಜೀವನದ ಉದ್ದಕ್ಕೂ 29 ಶತಕಗಳನ್ನು ಗಳಿಸಿದರು. ಈ ದಾಖಲೆ ಮಾಡಲು ಅವರಿಗೆ ಕೇವಲ 80 ಇನ್ನಿಂಗ್ಸ್‌ಗಳು ಬೇಕಾಗಿದ್ದವು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link