Most Grand Slam Winner: ಅತಿಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ಟಾಪ್ 5 ಆಟಗಾರರು
ಸರ್ಬಿಯಾದ ಶ್ರೇಷ್ಠ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅತಿಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ನಂ.1 ಆಟಗಾರನೆಂಬ ದಾಖಲೆ ನಿರ್ಮಿಸಿದ್ದಾರೆ. 10 ಆಸ್ಟ್ರೇಲಿಯನ್ ಓಪನ್, 3 ಫ್ರೆಂಚ್ ಓಪನ್, 3 ಯುಎಸ್ ಓಪನ್ ಮತ್ತು 7 ವಿಂಬಲ್ಡನ್ ಸೇರಿದಂತೆ ಒಟ್ಟು 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪುರುಷರ ಟೆನಿಸ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ ಎನಿಸಿಕೊಂಡಿರುವ ಸ್ಪ್ಯಾನಿಷ್ ಟೆನಿಸ್ ಸ್ಟಾರ್ ರಾಫೆಲ್ ನಡಾಲ್ ಅವರು 14 ಫ್ರೆಂಚ್ ಓಪನ್, 4 ಯುಎಸ್ ಓಪನ್, 2 ಆಸ್ಟ್ರೇಲಿಯನ್ ಮತ್ತು 2 ವಿಂಬಲ್ಡನ್ ಸೇರಿದಂತೆ ಒಟ್ಟು 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಟೆನ್ನಿಸ್ ಆಟಕ್ಕೆ ನಿವೃತ್ತಿ ಘೋಷಿಸಿದ ಸ್ವಿಟ್ಜರ್ಲ್ಯಾಂಡ್ ತಾರೆ ರೋಜರ್ ಫೆಡರರ್ 8 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ. 6 ಆಸ್ಟ್ರೇಲಿಯನ್ ಓಪನ್, 5 ಯುಎಸ್ ಓಪನ್ ಮತ್ತು 1 ಫ್ರೆಂಚ್ ಓಪನ್ ಸೇರಿದಂತೆ ಒಟ್ಟು 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಲೆಜೆಂಡರಿ ಟೆನಿಸ್ ಆಟಗಾರ ಪೀಟ್ ಸಾಂಪ್ರಾಸ್ ಅಮೆರಿಕದ ಮಾಜಿ ವಿಶ್ವದ ನಂ. 1 ಟೆನಿಸ್ ಆಟಗಾರ. ಇವರು 7 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದು, 5 ಯುಎಸ್ ಓಪನ್ ಮತ್ತು 2 ಆಸ್ಟ್ರೇಲಿಯನ್ ಓಪನ್ ಸೇರಿದಂತೆ ಒಟ್ಟು 14 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಟೆನಿಸ್ ಆಟಗಾರ ರಾಯ್ ಎಮರ್ಸನ್ 6 ಆಸ್ಟ್ರೇಲಿಯನ್ ಓಪನ್, 2 ವಿಂಬಲ್ಡನ್, 2 ಫ್ರೆಂಚ್ ಓಪನ್ ಮತ್ತು 2 ಯುಎಸ್ ಓಪನ್ ಸೇರಿದಂತೆ ಒಟ್ಟು 12 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.