Mrunal Thakur: ಅಪ್ಪ-ಅಮ್ಮಗೆ ಇಷ್ಟವಿಲ್ಲ ಅಂತ ಗೊತ್ತಿದ್ರೂ ಅಂತಹ ಸೀನ್‌ನಲ್ಲಿ ನಟಿಸಿದ ಮೃಣಾಲ್‌..! ಕೊನೆಗೆ ಆಗಿದ್ದೇನು..?

Sun, 28 Apr 2024-10:52 pm,

ಮೃಣಾಲ್‌ ಸಿನಿಮಾಗಳಲ್ಲಿ ಇಂಟಿಮೇಟ್ ಸೀನ್‌ಗಳಲ್ಲಿ ನಟಿಸುವುದು ಅವರ ಅಪ್ಪ ಅಮ್ಮನಿಗೆ ಇಷ್ಟವಿರಲಿಲ್ಲ. ಇದರಿಂದಾಗಿ ಅವರು ಅನೇಕ ಸಿನಿಮಾಗಳ ಆಫರ್‌ಗಳನ್ನು ಕಳೆದುಕೊಳ್ಳಬೇಕಾಯಿತು ಅಂತ ಹೇಳಿಕೊಂಡಿದ್ದಾರೆ.  

ಸಿನಿಮಾ ಅಂದ್ಮೇಲೆ ಸ್ವಲ್ಪಾನಾದ್ರು ರೊಮ್ಯಾನ್ಸ್, ಕಿಸ್ಸಿಂಗ್ ಸೀನ್, ಹಾಟ್ ದೃಶ್ಯಾವಳಿಗಳು ಈಗಂತೂ ಸರ್ವೇಸಾಮಾನ್ಯ. ನಟಿಯರು ಸಹ ಈ ಪಾತ್ರಗಳಲ್ಲಿ ನಟಿಸಲು ರೆಡಿಯಾಗಿರಬೇಕು.  

ಚಿತ್ರಗಳಲ್ಲಿ ಇಂತಹ ಹಸಿಬಿಸಿ ದೃಶ್ಯಗಳಲ್ಲಿ ನಟಿಸಬೇಕು ಎನ್ನುವ ಕಾರಣಕ್ಕಾಗಿಯೇ ಅನೇಕ ನಟಿಯರು ತಮಗೆ ಬಂದ ಆಫರ್‌ಗಳನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ನಟಿ ಮೃಣಾಲ್ ಠಾಕೂರ್ ಸಹ ಹೊರತಾಗಿಲ್ಲ  

ಇಂಟಿಮೇಟ್ ಸೀನ್‌ಗಳಲ್ಲಿ ನಟಿಸದಿದ್ದರೆ ಆಫರ್‌ಗಳ ಬರಲ್ಲ ಅಂತ ತಿಳಿದು ಕೊನೆಗೆ ಒಂದು ದಿನ ಮೃಣಾಲ್‌ ತಮ್ಮ ತಂದೆತಾಯಿಯನ್ನು ಕೂರಿಸಿಕೊಂಡು ವಿವರಿಸಿ ಒಪ್ಪಿಸಿದ್ದರಂತೆ  

ಕುಂಕುಮ ಭಾಗ್ಯ ಧಾರಾವಾಹಿ ಮೂಲಕ ಮೃಣಾಲ್‌ ನಟನಾ ವೃತ್ತಿ ಪ್ರಾರಂಭಿಸಿದರು. 2014 ರಲ್ಲಿ ಹೆಲೋ ನಂದನ್‌ ಎಂಬ ಮರಾಠಿ ಸಿನಿಮಾದ ಮೂಲಕ ಬಿಗ್‌ ಸ್ಕ್ರೀನ್‌ ಎಂಟ್ರಿ ಕೊಟ್ಟರು.  

ಸೀತಾ ರಾಮಂ ಸಿನಿಮಾದ ಮೂಲಕ ಸೌತ್‌ ಸಿನಿರಂಗದಲ್ಲಿ ಸಖತ್‌ ಫೇಮಸ್‌ ನಟಿ ಇತ್ತೀಚಿಗೆ ವಿಜಯ್ ದೇವರಕೊಂಡ ಜೊತೆ ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link