MS Dhoni: ಎಂಎಸ್ ಧೋನಿ ಇನ್’ಸ್ಟಾಗ್ರಾಂನಲ್ಲಿ ಫಾಲೋ ಮಾಡೋದು ಈ 4 ಜನರನ್ನು ಮಾತ್ರ… ಅವರು ಯಾರಂದ್ರೆ..!

Wed, 08 Mar 2023-3:47 pm,

ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ, ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳ ಪ್ರೊಫೈಲ್‌ಗಳನ್ನು ನೀವು ಫಾಲೋ ಮಾಡೋದು ಸರ್ವೇ ಸಾಮಾನ್ಯ. ಸಾಮಾಜಿಕ ಮಾಧ್ಯಮ ಪ್ಲಾಟ್‌’ಫಾರ್ಮ್‌’ಗಳಲ್ಲಿ ಪಬ್ಲಿಕ್ ಫಿಗರ್’ಗಳ ಜೊತೆ ಅಭಿಮಾನಿಗಳು ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ.

ಸೆಲೆಬ್ರಿಟಿಗಳು ಖಂಡಿತವಾಗಿಯೂ ಲಕ್ಷಾಂತರ ಫಾಲೋವರ್ಸ್’ಗಳನ್ನು ಹೊಂದಿದ್ದಾರೆ. ಆದರೆ ಅಂತಹ ಸೆಲೆಬ್ರಿಟಿಗಳು ಬೇರೆಯವರನ್ನು ಎಷ್ಟು ಫಾಲೋವ್ ಮಾಡ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ? ಇಂದು ನಾವು ಟೀಂ ಇಂಡಿಯಾದ ಸೂಪರ್ ಸ್ಟಾರ್ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಅವರ ಬಗ್ಗೆ ಮಾತನಾಡಲಿದ್ದೇವೆ.

ಇವರು ತಮ್ಮ ಇನ್’ಸ್ಟಾಗ್ರಾಂನಲ್ಲಿ ಫಾಲೋ ಮಾಡೋದು ಕೇವಲ 4 ಜನರನ್ನು. ಆ ನಾಲ್ವರು ಯಾರು ಎಂದು ನಿಮಗೆ ಮಾಹಿತಿ ನೀಡಲಿದ್ದೇವೆ.

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇನ್‌ಸ್ಟಾಗ್ರಾಮ್’ನಲ್ಲಿ ಹೆಚ್ಚು ಆಕ್ಟೀವ್ ಆಗಿಲ್ಲ. ಆದರೆ ಪ್ರತಿ ಬಾರಿಯೂ ಕೆಲವು ಫೋಟೋಗಳು ಮತ್ತು ವೀಡಿಯೊಗಳೊಂದಿಗೆ ಹಂಚಿಕೊಂಡಾಗ ಅಭಿಮಾನಿಗಳು ಸಖತ್ ಖುಷಿಪಡುತ್ತಾರೆ.  ಜೂನ್ 2014 ರಲ್ಲಿ ಹಂಚಿಕೊಂಡ ಅವರ ಮೊದಲ ಇನ್‌ಸ್ಟಾಗ್ರಾಮ್ ಪೋಸ್ಟ್‌ನಿಂದ ಹಿಡಿದು, ಇಲ್ಲಿವರೆಗೆ ಕೇವಲ 108 ಪೋಸ್ಟ್‌ಗಳನ್ನು ಮಾತ್ರ ಶೇರ್ ಮಾಡಿದ್ದಾರೆ.

40 ಮಿಲಿಯನ್ ಫಾಲೋವರ್ಸ್’ಗಳನ್ನು ಹೊಂದಿರುವ ಧೋನಿ ಈ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಕೇವಲ 4 ಪ್ರೊಫೈಲ್‌ಗಳನ್ನು ಫಾಲೋ ಮಾಡುತ್ತಾರೆ. ಅವರಲ್ಲಿ ಮೊದಲ ಹೆಸರು ಸಾಕ್ಷಿ ಸಿಂಗ್ ಧೋನಿ. ಭಾರತ ಕ್ರಿಕೆಟ್ ತಂಡ ತಂಗಿದ್ದ ಕೋಲ್ಕತ್ತಾದ ತಾಜ್ ಬೆಂಗಾಲ್‌ನಲ್ಲಿ ಧೋನಿಯನ್ನು ಭೇಟಿಯಾದಾಗ ಸಾಕ್ಷಿ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿನಿಯಾಗಿದ್ದರು. ಸಾಕ್ಷಿಯ ಆಗಿನ ಮ್ಯಾನೇಜರ್ ಅವಳನ್ನು ಕ್ರಿಕೆಟಿಗನಿಗೆ ಪರಿಚಯಿಸಿದರು. ಅವರನ್ನು ಕಂಡ ಕ್ಷಣವೇ ಧೋನಿ ಫಿದಾ ಆಗಿದ್ದರಂತೆ. ಸುಶಾಂತ್ ಸಿಂಗ್ ರಜಪೂತ್ ಮುಖ್ಯ ಪಾತ್ರದಲ್ಲಿ ನಟಿಸಿದ ಎಂಎಸ್ ಧೋನಿ ಸಿನಿಮಾದಲ್ಲಿ ಇವರಿಬ್ಬರ ಪ್ರೇಮಕಥೆಯನ್ನು ಸುಂದರವಾಗಿ ಚಿತ್ರಿಸಲಾಗಿದೆ.

ಎಂಎಸ್ ಧೋನಿ ಕೂಡ ತಮ್ಮ 8 ವರ್ಷದ ಮಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಾರೆ. ಈ ಚಿಕ್ಕ ಮಂಚ್ಕಿನ್ ಪ್ರೊಫೈಲ್ ಅನ್ನು ಸಾಕ್ಷಿ ಮತ್ತು ಧೋನಿ ಸ್ವತಃ ನಿರ್ವಹಿಸುತ್ತಾರೆ. 2 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್’ಗಳನ್ನು ಜಿವಾ ಹೊಂದಿದ್ದಾರೆ.

ಭಾರತೀಯ ಚಿತ್ರರಂಗದ ಶಾಹೆನ್‌’ಶಾ, ಅಮಿತಾಬ್ ಬಚ್ಚನ್ ಅವರನ್ನು ಎಂಎಸ್ ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಾರೆ. ಇವರೊಬ್ಬರನ್ನು ಬಿಟ್ಟರೆ ಬೇರೆ ಯಾವುದೇ ಚಲನಚಿತ್ರ ವ್ಯಕ್ತಿಗಳನ್ನು ಧೋನಿ ಫಾಲೋ ಮಾಡುತ್ತಿಲ್ಲ. ಬಿಗ್ ಬಿ ಆಗಾಗ ಎಂಎಸ್ ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ. ಅಮಿತಾಭ್ ಬಚ್ಚನ್ ಒಮ್ಮೆ ತಮ್ಮ ಬ್ಲಾಗ್‌’ನಲ್ಲಿ ಧೋನಿ ಅವರನ್ನು ಭೇಟಿ ಮಾಡಿದ ಕ್ಷಣದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಧೋನಿ ಫಾಲೋ ಮಾಡುವ 4 ನೇ ಪ್ರೊಫೈಲ್ ವ್ಯಕ್ತಿಯಲ್ಲ. ಆದರೆ ರಾಂಚಿಯಲ್ಲಿರುವ ಅವರ ಕೃಷಿ ಫಾರ್ಮ್. ಇದು ಈಜಾ ಫಾರ್ಮ್ಸ್‌ನ ಅಧಿಕೃತ ಖಾತೆಯಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link