Much Awaited South Movies: ಸೌತ್ ಅಬ್ಬರಕ್ಕೆ ಬಾಲಿವುಡ್ ಬಾಕ್ಸ್ ಆಫೀಸ್ ಮತ್ತೆ ಅಲ್ಲೋಲಕಲ್ಲೋಲ!
2021ರಲ್ಲಿ ಬಿಡುಗಡೆಯಾದ ಅಲ್ಲು ಅರ್ಜುನ್ ಅಭಿನಯದ ಪುಷ್ಪ-1(Pushpa: The Rise) ಬಾಲಿವುಡ್ ಬಾಕ್ಸ್ ಆಫೀಸ್‍ನ್ನು ಅಲುಗಾಡಿಸಿತು. ಇದೀಗ ಪುಷ್ಪ - 2ರ ಅಬ್ಬರಕ್ಕೆ ಬಾಲಿವುಡ್ ಮಂದಿ ಹೆದರಿದ್ದಾರೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಬಹುದು. ಈ ಚಿತ್ರ ಬಿಡುಗಡೆಗೂ ಮುನ್ನವೇ ಹಿಟ್ ಅಂತಾ ಘೋಷಿಸಲಾಗಿದೆ.
ಸ್ಟಾರ್ ನಟ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಈ ಚಿತ್ರವು ಡಿಸೆಂಬರ್ 22ರಂದು ಬಿಡುಗಡೆಯಾಗಲದ್ದು, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ‘ಡಂಕಿ’ಯೊಂದಿಗೆ ಫೈಟ್ ಮಾಡಲಿದೆ. ಉಭಯ ಚಿತ್ರಗಳ ನಡುವೆ ಪ್ರಚಂಡ ಪೈಪೋಟಿ ನಡೆಯಲಿದ್ದು, ಯಾರು ಗೆಲ್ಲುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ರಾಮ್ ಚರಣ್ ಅಭಿನಯದ ಈ ಚಿತ್ರಕ್ಕೆ ಮೊದಲು RC 15 ಶೀರ್ಷಿಕೆ ಇಡಲಾಗಿತ್ತು. ಆದರೆ ಇದೀಗ ‘ಗೇಮ್ ಚೇಂಜರ್’ ಎಂದು ಹೆಸರು ಬದಲಾಯಿಸಲಾಗಿದೆ. ಕಿಯಾರಾ ಅಡ್ವಾಣಿ ಮತ್ತು ರಾಮ್ ಚರಣ್ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ನಿರ್ದೇಶಕ ಶಂಕರ್ ನಿರ್ದೇಶನದ ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಜೂನಿಯರ್ NTR ದೊಡ್ಡ ದೊಡ್ಡ ಸಿನಿಮಾಗಳ ಮೂಲಕ ಮಿಂಚಲು ಸಜ್ಜಾಗಿದ್ದಾರೆ. ಈ ಪೈಕಿ ಅವರ NTR 31 ಕೂಡ ಒಂದು. ಈ ಚಿತ್ರದಲ್ಲಿ ಕಮಲ್ ಹಾಸನ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ಚಿತ್ರವು ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಈ ಬಹುವೆಚ್ಚದ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ.
‘ದೇವರ’ ಚಿತ್ರದ ಅದ್ಭುತ ಪಾತ್ರವರ್ಗದ ಫಸ್ಟ್ ಲುಕ್ ರಿವೀಲ್ ಆಗಿದೆ. ಜೂನಿಯರ್ ಎನ್‌ಟಿಆರ್ ಅವರ ಈ ಚಿತ್ರದ ಮೂಲಕ ಜಾನ್ವಿ ಕಪೂರ್ ದಕ್ಷಿಣಕ್ಕೆ ಕಾಲಿಡಲಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಸಂಚಲನ ಮೂಡಿಸಿದ್ದು, ಈಗ ಅದರ ಟೀಸರ್ ಮತ್ತು ಟ್ರೈಲರ್ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.