ಮನೆಯ ಈ ದಿಕ್ಕಿನಲ್ಲಿ ನೀರು ತುಂಬಿದ ಮಡಿಕೆ ಇಟ್ಟರೆ, ಸಾಲದಿಂದ ಮುಕ್ತಿ, ಹೆಚ್ಚುತ್ತೆ ಬ್ಯಾಂಕ್ ಬ್ಯಾಲೆನ್ಸ್
ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಾಗಿದ್ದರೆ ಒಂದು ಮಣ್ಣಿನ ಮಡಕೆಯಲ್ಲಿಟ್ಟ ನೀರು ರಾತ್ರೋರಾತ್ರಿ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.
ಅನಾದಿ ಕಾಲದಿಂದಲೂ ಮಣ್ಣಿನ ಮಡಕೆಯಲ್ಲಿ ನೀರಿಟ್ಟು ಕುಡಿಯುವುದು ವಾಡಿಕೆ. ಈ ತಂತ್ರಜ್ಞಾನ ಯುಗದಲ್ಲೂ ಸಹ ಇದು ಮುಂದುವರೆದಿದೆ.
ಮಣ್ಣಿನ ಮಡಕೆಯಲ್ಲಿಟ್ಟು ಕುಡಿಯುವ ನೀರು ತುಂಬಾ ರುಚಿಕರವಾಗಿರುತ್ತದೆ. ಅಷ್ಟೇ ಅಲ್ಲ, ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
ವಾಸ್ತು ಪ್ರಕಾರವೂ ಮಣ್ಣಿನ ಮಡಕೆಗೆ ಬಹಳ ಪ್ರಾಮುಖ್ಯತೆ ಇದೆ. ಆದರೆ, ಇದನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟಾಗ ಮಾತ್ರ ಇದರ ಧನಾತ್ಮಕ ಫಲ ದೊರೆಯುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆ ಅಥವಾ ಕಚೇರಿಯಲ್ಲಿ ಮಣ್ಣಿನ ಮಡಕೆ ಇಡಲು ಉತ್ತರ ದಿಕ್ಕು ತುಂಬಾ ಸೂಕ್ತ.
ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕು ಬೆಂಕಿ, ಗಾಳಿ, ಭೂಮಿ, ಆಕಾಶ, ನೀರು ಎಂಬ ಪಂಚಭೂತಗಳಿಗೆ ಸಂಬಂಧಿಸಿದ ದಿಕ್ಕು.
ಮನೆಯ ಉತ್ತರ ದಿಕ್ಕಿನಲ್ಲಿ ಸದಾ ನೀರು ತುಂಬಿದ ಮಡಿಕೆ ಇಡುವುದರಿಂದ ಅಂತಹ ಮನೆಯಲ್ಲಿ ಕಲಹ ಕಡಿಮೆಯಾಗಿ, ಸಾಲಬಾಧೆಯಿಂದ ಮುಕ್ತಿ ದೊರೆಯುತ್ತದೆ. ಅಷ್ಟೇ ಅಲ್ಲ, ಲಕ್ಷ್ಮೀ ಕೃಪೆಯಿಂದ ಹಣಕ್ಕೆ ಎಂದಿಗೂ ಕೊರತೆ ಆಗುವುದಿಲ್ಲ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.