ನೆನಪಿರಲಿ ! ಕೇವಲ ಈರುಳ್ಳಿ ರಸ ಅಲ್ಲ, ಅದರ ಜೊತೆ ಈ ಎಣ್ಣೆ ಬೆರೆಸಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು!

Tue, 23 Apr 2024-9:58 am,

ಕೂದಲು ಉದುರುವುದನ್ನು ತಡೆಯಲು ತಲೆಹೊಟ್ಟು ಹೋಗಲಾಡಿಸಲು ಮತ್ತು ಬಿಳಿ ಕೂದಲಿನ ಸಮಸ್ಯೆ ಪರಿಹರಿಸಿಕೊಳ್ಳಲು ಈರುಳ್ಳಿ ರಸವನ್ನು ಬಳಸಲಾಗುತ್ತದೆ. ಆದ್ರೆ ಈರುಳ್ಳಿ ಜೊತೆಗೆ ಎಣ್ಣೆಯನ್ನು ಬೆರೆಸಿದಾಗ ಮಾತ್ರ ನಾವಿ ನೀರೀಕ್ಷಿಸಿದ ಫಲಿತಾಂಶ ಸಿಗುತ್ತದೆ. 

ಈರುಳ್ಳಿ ರಸದಲ್ಲಿ ಹೇರಳವಾಗಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.ಇದರಲ್ಲಿರುವ ಸಲ್ಫರ್ ಕೂದಲು ಉದುರುವುದನ್ನು ತಡೆದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ.  

 ಬಿಳಿ ಕೂದಲು ಕಪ್ಪಾಗಲು,ತೆಂಗಿನ ಎಣ್ಣೆಯೊಂದಿಗೆ ಈರುಳ್ಳಿ ರಸವನ್ನು ಬೆರೆಸಿ ಹಚ್ಚಬೇಕು. ಅದಕ್ಕಾಗಿ, ಎರಡೂ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಬೇಕು. ಅರ್ಧ ಘಂಟೆಯ ನಂತರ, ಸೌಮ್ಯವಾದ ಶಾಂಪೂ ಬಳಸಿ  ಕೂದಲನ್ನು ತೊಳೆಯಬಹುದು. ಹೀಗೆ ಮಾಡುತ್ತಾ ಬಂದರೆ ಬಿಳಿ ಕೂದಲು ಖಂಡಿತವಾಗಿಯೂ ಕಪ್ಪಾಗಲು ಶುರುವಾಗುತ್ತದೆ.

 ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬೇಕಾದರೆ  ನೆಲ್ಲಿ ಕಾಯಿ ರಸವನ್ನು ಈರುಳ್ಳಿ ರಸದೊಂದಿಗೆ ಮಿಶ್ರಣ ಮಾಡಬೇಕು. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಎರಡು ಚಮಚ ಈರುಳ್ಳಿ ರಸ ಮತ್ತು ಎರಡು ಚಮಚ ನೆಲ್ಲಿಕಾಯಿ ರಸವನ್ನು ತೆಗೆದುಕೊಳ್ಳಿ. ಈಗ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು 1-2 ಗಂಟೆಗಳ ಕಾಲ ಬಿಡಿ.ನಂತರ ಮೈಲ್ಡ್ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.

ಕೂದಲು ಕಪ್ಪಾಗಲು ಈರುಳ್ಳಿ ರಸವನ್ನು ಅಲೋವೆರಾದೊಂದಿಗೆ ಬೆರೆಸಿ ಹಚ್ಚಬಹುದು. ಇದಕ್ಕಾಗಿ ಅಲೋವೆರಾ ಜೆಲ್ ಮತ್ತು ಈರುಳ್ಳಿ ರಸವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ.ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಮತ್ತು 2 ರಿಂದ 3 ಗಂಟೆಗಳ ಕಾಲ ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. 

ಬಿಳಿ ಕೂದಲನ್ನು ಕಪ್ಪಾಗಿಸಲು ಈರುಳ್ಳಿ ರಸವನ್ನು ಬಳಸಬಹುದು. ಆದಾಗ್ಯೂ, ನೀವು ಈ ಯಾವುದೇ ಪದಾರ್ಥಗಳಿಗೆ ಅಲರ್ಜಿಯನ್ನು ಹೊಂದಿದ್ದರೆ ಅದನ್ನು ಬಳಸದಂತೆ ಎಚ್ಚರಿಕೆ ವಹಿಸಿ.(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link