ಮನೆ ಯಜಮಾನನ ಆಯಸ್ಸು, ಐಶ್ವರ್ಯವನ್ನು ಕಾಪಾಡಬೇಕಾದರೆ ಈ ದಿನ ತುಳಸಿಯನ್ನು ಮುಟ್ಟಲೇ ಬಾರದು!ಪೂಜೆಯ ಭರದಲ್ಲಿ ಈ ತಪ್ಪು ಮಾಡದಿರಿ
ಧಾರ್ಮಿಕ ಗ್ರಂಥಗಳ ಪ್ರಕಾರ, ವಿಷ್ಣುವಿಗೆ ತುಳಸಿ ಬಹಳ ಪ್ರಿಯವಾದುದು. ಇದೇ ಕಾರಣಕ್ಕೆ ವಿಷ್ಣುವಿನ ಪೂಜೆಯಲ್ಲಿ ತುಳಸಿಯನ್ನು ಬಳಸಬೇಕು. ವಿಷ್ಣುವಿಗೆ ನೈವೇದ್ಯ ಅರ್ಪಿಸುವಾಗಲೂ ತುಳಸಿ ದಳವನ್ನು ಸೇರಿಸಬೇಕು ಎಂದು ಹೇಳಲಾಗುತ್ತದೆ.
ಅನೇಕ ಬಾರಿ ನಾವು ತಿಳಿದೋ ಅಥವಾ ತಿಳಿಯದೆಯೋ ತುಳಸಿಗೆ ಸಂಬಂಧಿಸಿದ ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತೇವೆ.ತುಳಸಿ ಎಲೆಗಳನ್ನು ಕೀಳಲು ಕೆಲವು ವಿಶೇಷ ನಿಯಮಗಳನ್ನು ಪುರಾಣಗಳಲ್ಲಿ ತಿಳಿಸಲಾಗಿದೆ.
ಏಕಾದಶಿಯ ದಿನದಂದು ತಪ್ಪಿಯೂ ತುಳಸಿ ಎಲೆಗಳನ್ನು ಕೀಳಬಾರದು. ಏಕಾದಶಿಯ ಪೂಜೆಗೆ ತುಳಸಿ ಖಂಡಿತವಾಗಿಯೂ ಬೇಕು.ಆದರೆ ಏಕಾದಶಿಯಂದು ತುಳಸಿ ಎಲೆ ಕೀಳುವುದು ತಪ್ಪು.
ಭಾನುವಾರ, ಚಂದ್ರ ಮತ್ತು ಸೂರ್ಯಗ್ರಹಣದ ದಿನದಂದು ತುಳಸಿ ಎಲೆಗಳನ್ನು ಕೀಳಬಾರದು.ಭಾನುವಾರದಂದು ತುಳಸಿಗೆ ನೀರನ್ನು ಅರ್ಪಿಸಬಾರದು, ಅದನ್ನು ಮುಟ್ಟಲೂ ಬಾರದು.
ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಬಾರದು. ಯಾವ ಸಂದರ್ಭದಲ್ಲಿಯೇ ಆಗಲಿ ತುಳಸಿ ಎಲೆ ಕೀಳುವಾಗ ಮೊದಲು ತುಳಸಿಗೆ ನಮಸ್ಕರಿಸಬೇಕು.
ತುಳಸಿ ಎಲೆ ಕೀಳುವಾಗ ಅದಕ್ಕೆ ಉಗುರು ತಾಗಿಸಿ ತೆಗೆಯಬಾರದು. ಬೆರಳುಗಳ ಸಹಾಯದಿಂದ ಮಾತ್ರ ತುಳಸಿ ಎಲೆಗಳನ್ನು ಕೀಳಬೇಕು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS KANNADA ಇದನ್ನು ಖಚಿತಪಡಿಸುವುದಿಲ್ಲ