ಸಾಸಿವೆ ಎಣ್ಣೆಯನ್ನು ಹೀಗೆ ಬಳಸಿದ್ರೆ ಎರಡೇ ನಿಮಿಷಕ್ಕೆ ಕಪ್ಪಾಗುತ್ತೆ ಬಿಳಿ ಕೂದಲು...!
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಾಸಿವೆ ಎಣ್ಣೆ ಸರಳ ಪರಿಹಾರವಾಗಿದೆ.
ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಎ, ಇ ಮತ್ತು ಅಮೈನೋ ಆಮ್ಲಗಳಂತಹ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಬಿಳಿ ಕೂದಲನ್ನು ಕಪ್ಪಾಗಿಸುವ ಜೊತೆಗೆ ಕೂದಲ ಬೆಳವಣಿಗೆಗೂ ಪ್ರಯೋಜನಕಾರಿ ಆಗಿದೆ.
ಸಾಸಿವೆ ಎಣ್ಣೆಯಲ್ಲಿ ಕೆಲವು ಪದಾರ್ಥಗಳನ್ನು ಬೆರೆಸಿ ಹಚ್ಚುವುದರಿಂದ ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.
ಒಂದು ಬಾಣಲೆಯಲ್ಲಿ ಕಾಲು ಬಟ್ಟಲು ಸಾಸಿವೆ ಎಣ್ಣೆ, ಒಂದು ಸ್ಪೂನ್ ಅರಿಶಿನ, 1 ಸ್ಪೂನ್ ಕಾಲೋಂಜಿ, 1 ಸ್ಪೂನ್ ಕಾಫಿಪುಡಿ ಹಾಕಿ ಚೆನ್ನಾಗಿ ಬೆರೆಸಿ, 1 ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಮಿಶ್ರಣ ಮಾಡಿ.
ಮಿಶ್ರಣ ಮಾಡಿ ಚೆನ್ನಾಗಿ ಕಾಯಿಸಿದ ಸಾಸಿವೆ ಎಣ್ಣೆಯನ್ನು ತಣ್ಣಗಾದ ಬಳಿಕ ಒಂದು ಜಾಲರಿ ಸಹಾಯದಿಂದ ಶೋಧಿಸಿ ಕೂದಲಿಗೆ ಹಚ್ಚಿ ತಲೆಗೆ ಸ್ನಾನ ಮಾಡಿ.
ಬಿಳಿ ಕೂದಲಿಗೆ ಸಾಸಿವೆ ಎಣ್ಣೆಯನ್ನು ಈ ರೀತಿ ಬಳಸುವುದರಿಂದ ಕೂದಲು ಕಪ್ಪಾಗಿ ದಷ್ಟಪುಷ್ಟವಾಗಿ ಉದ್ದವಾಗಿ ಬೆಳೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.