ಒಗ್ಗರಣೆಗೆ ಬಳಸುವ ಈ ಪುಟ್ಟ ಕಾಳು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ... ಆದರೆ ಬಳಸುವ ವಿಧಾನ ಈ ರೀತಿ ಇರಬೇಕು!

Sat, 15 Jun 2024-11:14 am,

ಕೂದಲು ಬಿಳಿಯಾಗಲು ಹಲವು ಕಾರಣಗಳಿವೆ. ಮಾಲಿನ್ಯ, ಒತ್ತಡದ ಜೀವನಶೈಲು, ನಾವು ಸೇವಿಸುವ ಆಹಾರ ಅಥವಾ ಕೆಲವೊಮ್ಮೆ ಅನುವಂಶಿಕವಾಗಿಯೂ ಬಿಳಿ ಕೂದಲು ಕಾಣಿಸಲು ಆರಂಭವಾಗುತ್ತದೆ. 

ಸಾಸಿವೆ ಕಾಳು ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ಸಹಾಯಕವಾಗಿದೆ. ಸಾಸಿವೆ ಕೂದಲಿಗೆ ಬೇರುಗಳಿಂದ ಪೋಷಣೆಯನ್ನು ನೀಡಿ ಕೂದಲು ಉದುರುವಿಕೆ, ಕೂದಲು ಹಾನಿ ಮತ್ತು ತಲೆಹೊಟ್ಟು ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.  

ಸಾಸಿವೆ ಬೀಜಗಳು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತವೆ. ವಿಟಮಿನ್ ಎ ಸಾಸಿವೆ ಕಾಳುಗಳಲ್ಲಿ ಕಂಡುಬರುತ್ತದೆ. ಇದು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ. 

ಪ್ರೋಟೀನ್, ಕ್ಯಾಲ್ಸಿಯಂ, ಒಮೆಗಾ-3 ಮತ್ತು ವಿಟಮಿನ್ ಇ ನಂತಹ ಪ್ರಮುಖ ಪೋಷಕಾಂಶಗಳು ಸಾಸಿವೆ ಕಾಳುಗಳಲ್ಲಿ ಕಂಡುಬರುತ್ತವೆ. ಬಿಳಿ ಕೂದಲು ಕಪ್ಪು ಬಣ್ಣವನ್ನು ಮರಳಿ ಪಡೆಯಲು ಇವು ಸಹಕಾರಿಯಾಗಿವೆ. 

ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ನೆತ್ತಿಯ ಮೇಲೆ ಮಸಾಜ್ ಮಾಡಿ. ಇದು ಬೇರುಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುವುದರಿಂದ ಬಿಳಿ ಕೂದಲು ಕ್ರಮೇಣ ಕಪ್ಪಾಗುತ್ತವೆ. 

ನೀವು ಸಾಸಿವೆ ಕಾಳಿನ ಹೇರ್‌ ಪ್ಯಾಕ್‌ ಕೂಡ ಹಾಕಬಹುದು. ಮೊದಲು ಸಾಸಿವೆಯನ್ನು ರುಬ್ಬಿ ಒಣಗಿಸಿ, ಇದರ ಪುಡಿ ತಯಾರಿಸಿಕೊಳ್ಳಿ. 

ಈಗ ಒಂದು ಶುದ್ಧವಾದ ಪಾತ್ರೆಯನ್ನು ತೆಗೆದುಕೊಂಡು ಒಂದು ಚಮಚ ಸಾಸಿವೆ ಪುಡಿ ಹಾಕಿ. ಇದಕ್ಕೆ ಒಂದು ಮೊಟ್ಟೆ ಸೇರಿಸಿ, ತೆಂಗಿನೆಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಬೆರೆಸಿ ಹೇರ್ ಮಾಸ್ಕ್  ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ.

ಸಾಸಿವೆ ಹೇರ್‌ ಮಾಸ್ಕ್‌ ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಲು ಸಹಕಾರಿಯಾಗಿದೆ. ಇದು ಕೂದಲಿಗೆ ಹೊಳಪನ್ನು ಸಹ ನೀಡುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee Kannada News ಇದಕ್ಕೆ ಹೊಣೆಯಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link