Mystery of Romania: ಆಕಾರಗಳನ್ನು ಬದಲಿಸುವ ಕಲ್ಲುಗಳು, ಇದು ವಿಚಿತ್ರವಾದರೂ ಸತ್ಯ!
ಈ ನಿಗೂಢ ಪ್ರದೇಶದಲ್ಲಿ ಕೇವಲ ಒಂದೆರಡಲ್ಲ, ಇಲ್ಲಿ ಆಕಾರ ಬದಲಿಸುವಂತಹ ಸಾವಿರಾರು ಕಲ್ಲುಗಳನ್ನು ಕಾಣಬಹುದು. ಇಲ್ಲಿನ ಕಲ್ಲುಗಳ ಆಕಾರ (Mystery Stones) ಎಷ್ಟು ವೇಗವಾಗಿ ಬದಲಾಗುತ್ತದೆ ಎಂದರೆ, ಹಲವು ಬಾರಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೂ ಅದರ ಅನುಭವವಾಗುತ್ತದೆಯಂತೆ.
ಸ್ಥಳೀಯ ಜನರಿಗೆ ಸಹ, ಇಲ್ಲಿ ಕಲ್ಲುಗಳು ಅಕಾರವನ್ನು ಬದಲಾಯಿಸುವುದು ಯಾವುದೇ ಒಂದು ರಹಸ್ಯಕ್ಕಿಂತ (Mystery) ಕಡಿಮೆಯಿಲ್ಲ. ಟ್ರಾವೆಲ್ ಸೈಟ್ ಇತಿಹಾಸದ ಪ್ರಕಾರ, ಇಲ್ಲಿನ ಸ್ಥಳೀಯ ಜನರು ತಮ್ಮ ಬಾಲ್ಯದಿಂದಲೂ ಈ ಪವಾಡವನ್ನು (Miracle) ನೋಡುತ್ತಿದ್ದಾರೆ.
ರೊಮೇನಿಯಾಕ್ಕೆ (Romania) ಬರುವ ಪ್ರವಾಸಿಗರು ಈ ಸ್ಥಳವನ್ನು ನೋಡಲು ಆಕರ್ಷಿತರಾಗುತ್ತಾರೆ. ಈ ಗ್ರಾಮವು ಸಾಕಷ್ಟು ಪ್ರಸಿದ್ಧವಾಗಿದೆ.
ಇದನ್ನೂ ಓದಿ- Eating Habits: ಆಹಾರ ಸೇವಿಸುವಾಗ ಎಂದಿಗೂ ಈ ತಪ್ಪನ್ನು ಮಾಡಬೇಡಿ
ಭೂವಿಜ್ಞಾನಿಗಳು ಈ ಕಲ್ಲುಗಳ ಬಗ್ಗೆ ಅನೇಕ ಸಂಶೋಧನೆ ಮಾಡಿದ್ದಾರೆ, ಆದರೆ ಅವುಗಳ ಹೆಚ್ಚುತ್ತಿರುವ ಗಾತ್ರವು (Stone Size) ಇನ್ನೂ ಬಗೆಹರಿಯದ ಒಗಟಾಗಿ ಉಳಿದಿದೆ.
(ಚಿತ್ರ ಕೃಪೆ: itinari)
ಈ ಹಳ್ಳಿಯ ಜನರು ಕಲ್ಲುಗಳು ನೀರಿನ ಸಂಪರ್ಕಕ್ಕೆ ಬಂದ ನಂತರವೇ ಅವುಗಳ ಗಾತ್ರ ನಿರಂತರವಾಗಿ ಬದಲಾಗುತ್ತಿದೆ ಎಂದು ಹೇಳುತ್ತಾರೆ.
ಇದನ್ನೂ ಓದಿ- Numerology: ಈ ದಿನಾಂಕಗಳಲ್ಲಿ ಜನಿಸಿದ ಜನರಿಗೆ ಅದೃಷ್ಟ, ಮುಂದಿನ 15 ದಿನಗಳು ಬಹಳ ಶುಭಕರ
ಕೆಲವು ವಿಜ್ಞಾನಿಗಳು ಮಳೆಗಾಲದಲ್ಲಿ ಈ ಕಲ್ಲುಗಳು ಹೆಚ್ಚು ದೊಡ್ಡದಾಗುತ್ತವೆ ಎಂದು ನಂಬುತ್ತಾರೆ. ಇಲ್ಲಿನ ನೀರಿನಿಂದಾಗಿ ಇದು ಸಂಭವಿಸಬಹುದು ಎಂದು ಅವರು ಹೇಳುತ್ತಾರೆ. ಸಂಶೋಧಕರ ಪ್ರಕಾರ, ಕಲ್ಲುಗಳಲ್ಲಿ ಇರುವ ಖನಿಜ ಉಪ್ಪಿನ ಪ್ರಮಾಣವು ನೀರಿನಿಂದ ವೇಗವಾಗಿ ಹೆಚ್ಚಾಗುತ್ತಿತ್ತು. ಆದಾಗ್ಯೂ, ಇದಕ್ಕೆ ಯಾವುದೇ ಪುರಾವೆ ಇನ್ನೂ ಕಂಡುಬಂದಿಲ್ಲ.
(ಚಿತ್ರಕೃಪೆ: ಸಾಮಾಜಿಕ ಮಾಧ್ಯಮ)