Rare Two Headed Cobra:ಭಾರತದ ಈ ರಾಜ್ಯದಲ್ಲಿ ದೊರೆತಿದೆ ಅಪರೂಪದ ಎರಡು ತಲೆಗಳ ನಾಗರ ಹಾವು

Rare Two Headed Cobra: ಉತ್ತರಾಖಂಡದ (Uttarakhand) ಡೆಹ್ರಾಡೂನ್ (Dehradun) ಜಿಲ್ಲೆಯ ಕಲ್ಸಿ ಅರಣ್ಯದಲ್ಲಿ ಅಪರೂಪದ ಎರಡು ತಲೆಯ ನಾಗರಹಾವು ಪತ್ತೆಯಾಗಿದೆ.  ಎರಡು ತಲೆಗಳುಳ್ಳ ಈ ನಾಗರಹಾವಿನ (Cobra) ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ (Viral Rare Two Headed Cobra) ಆಗುತ್ತಿವೆ. 

Rare Two Headed Cobra: ಉತ್ತರಾಖಂಡದ (Uttarakhand) ಡೆಹ್ರಾಡೂನ್ (Dehradun) ಜಿಲ್ಲೆಯ ಕಲ್ಸಿ ಅರಣ್ಯದಲ್ಲಿ ಅಪರೂಪದ ಎರಡು ತಲೆಯ ನಾಗರಹಾವು ಪತ್ತೆಯಾಗಿದೆ.  ಎರಡು ತಲೆಗಳುಳ್ಳ ಈ ನಾಗರಹಾವಿನ (Cobra) ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ (Viral Rare Two Headed Cobra) ಆಗುತ್ತಿವೆ. ನೋಡಲು ಈ ನಾಗರಹಾವು (Cobra) ತುಂಬಾ ಆಪಾಯಕಾರಿ ಕಾಣಿಸುತ್ತಿದೆ.  ಇದರ ಉದ್ದ ಸುಮಾರು 1.5 ಅಡಿ.. ಕಲ್ಸಿ ಕಾಡಿನ ಕಾರ್ಮಿಕರು ಈ ಡಬಲ್ ಹೆಡೆಡ್ ನಾಗರಹಾವನ್ನು ರಕ್ಷಿಸಿದ್ದಾರೆ.

 

ಇದನ್ನೂ ಓದಿ-Partition Horrors Remembrance Day: ಆಗಸ್ಟ್ 14ನ್ನು ಇನ್ಮುಂದೆ 'ವಿಭಜನೆಯ ಕರಾಳ ನೆನಪಿನ ದಿನ' ಎಂದು ಆಚರಿಸಲಾಗುವುದು, ಪ್ರಧಾನಿ ಮೋದಿ ಘೋಷಣೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

1. ಎರಡು ತಲೆಗಳ ನಾಗರ ಹಾವು ನೋಡಿದವರು ಆಶ್ಚರ್ಯಚಕಿತರಾಗಿದ್ದಾರೆ - ಹಿಂದುಸ್ತಾನ್ ಟೈಮ್ಸ್ ನಲ್ಲಿ ಪ್ರಕಾಗೊಂಡ ವರದಿಯೊಂದರ ಪ್ರಕಾರ, ಎರಡು ತಲೆ ಹೊಂದಿರುವ ಈ ಅಪರೂಪದ ನಾಗರ ಹಾವನ್ನು ಹಿಡಿದಿರುವ ಆದಿಲ್ ಮಿರ್ಜಾ, ಕಳೆದ 15 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಇದುವರೆಗೆ ಇಂತಹ ಅಪರೂಪದ ಜಂತುವನ್ನು ನೋಡಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

2 /5

2. ಎರಡು ತಲೆ ಇರುವ ನಾಗರ ಹಾವನ್ನು ರಕ್ಷಿಸಲಾಗಿದೆ - ಈ ಕುರಿತು ಹೇಳಿರುವ ಅರಣ್ಯ ಇಲಾಖೆ ಸಿಬ್ಬಂಧಿಗಳು, ಕಾಲ್ಸಿ ಅರಣ್ಯ ಪ್ರದೇಶದ ಹತ್ತಿರ ಬರುವ ವಿಕಾಸ್ ನಗರ್ ಇಂಡಸ್ಟ್ರಿಯಲ್ ಏರಿಯಾ ಬಳಿ ಕೋಬ್ರಾ ಇರುವ ಮಾಹಿತಿ ಲಭಿಸಿತ್ತು. ನಾಗರ ಹಾವನ್ನು ರಕ್ಷಿಸಲು ಅವರು ಹೋದಾಗ ಅದು ಎರಡು ತಲೆಗಳನ್ನು ಹೊಂದಿರುವುದು ಅವರ ಗಮನಕ್ಕೆ ಬಂದಿದೆ ಎಂದಿದ್ದಾರೆ.

3 /5

3. ಈ ಎರಡು ತಲೆ ಇರುವ ನಾಗರ ಹಾವಿನ ಉದ್ದ ಎಷ್ಟು - ಈ ಕುರಿತು ಮುಂದೆ ಮಾತನಾಡಿರುವ ಅರಣ್ಯ ಇಲಾಖೆ ಸಿಬ್ಬಂದಿ, ಈ ಎರಡು ತಲೆಗಳ ನಗರ ಹಾವು ಸುಮಾರು 1.5 ಅಡಿ ಉದ್ದವವಾಗಿದ್ದು, ಅದರ ಆಯಸ್ಸು ಎರಡು ವಾರಕ್ಕಿಂತ ಕಡಿಮೆಯಾಗಿದೆ ಎಂದಿದ್ದಾರೆ.

4 /5

4. ವೈಲ್ಡ್ ಲೈಫ್ ತಜ್ಞರು ಹೇಳುವುದೇನು - ಎರಡು ತಲೆಗಳ ಹಾವಿನ ಕುರಿತು ಮಾತನಾಡಿರುವ ವೈಲ್ಡ್ ಲೈಫ್ ತಜ್ಞರಾಗಿರುವ ವಿಪುಲ್ ಮೌರ್ಯಾ, ಇದೊಂದು ಅಪರೂಪದ ಜೀವಿಯಾಗಿದ್ದು, ಮ್ಯೂಟೆಶನ್ ಕಾರಣ ಈ ರೀತಿ ಸಂಭವಿಸುತ್ತದೆ. ಈ ರೀತಿಯ ಹಾವುಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎಂದು ಅವರು ಹೇಳಿದ್ದಾರೆ.

5 /5

5. ಈ ಕಾರಣದಿಂದ ಬಿಲ್ಸದಿಂದ ಹಾವುಗಳು ಹೊರಬರುತ್ತಿವೆ - ಈ ಕುರಿತು ಮುಂದುವರೆದು ಮಾತನಾಡಿರುವ ಅವರು, ಸದ್ಯ ಮಳೆಗಾಲದ ಋತು ಆರಂಭಗೊಂಡಿದೆ. ಈ ಕಾರಣದಿಂದ ಬಿಲದಲ್ಲಿ ವಾಸಿಸುವ ಹಾವು ಸೇರಿದಂತೆ ಇತರೆ ಪ್ರಾಣಿಗಳು ತಮ್ಮ ಬಿಲಗಳಿಂದ ಹೊರಬರುತ್ತಿವೆ ಎಂದು ಹೇಳಿದ್ದಾರೆ.