ಶೋಭಿತಾ-ಚೈತನ್ಯ ಕಲ್ಯಾಣ..!ಇಲ್ಲಿವೆ ನೋಡಿ ಜೋಡಿಯ ನಿಶ್ಚಿತಾರ್ಥದ ಮೋಡಿ ಮಾಡುವ ಫೋಟೋಸ್‌

Thu, 08 Aug 2024-2:58 pm,

ನಾಗಚೈತನ್ಯ ಹಾಗೂ ಶೋಭಿತಾ ಅವರ ಡೇಟಿಂಗ್‌ ರೂಮರ್ಸ್‌ಗೆ ಕೊನೆಗೂ ತೆರೆ ಬಿದ್ದಿದೆ. ಗುರುವಾರ ಈ ಜೋಡಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಾಗ ಚೈತನ್ಯಾ ಅವರ ತಂದೆ ಈ ಇಬ್ಬರು ಜೋಡಿಯ ಎಂಗೇಜ್‌ಮೆಂಟ್‌ ಫೋಟೋಗಳನ್ನು ಅಧಿಕೃತವಾಗಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಯಂಗ್ ಹೀರೋ ಅಕ್ಕಿನೇನಿ ನಾಗ ಚೈತನ್ಯ ಅವರ ನಿಶ್ಚಿತಾರ್ಥ ಗುರವಾರ ಬೆಳಗ್ಗೆ 9.42ಕ್ಕೆ ಅದ್ದೂರಿಯಾಗಿ ನೆರವೇರಿದೆ. ನಾಗಾರ್ಜುನ ಅವರ ಮನೆಯಲ್ಲಿಯೇ ನಿಶ್ಚಿತಾರ್ಥವನ್ನು ಆಯೋಜಿಸಲಾಗಿದ್ದು ಸಿಂಪಲ್‌ ಆಗಿ ಕುಟುಂಬದವರ ಸಮ್ಮುಕದಲ್ಲಿ ನಿಶ್ಚಿತಾರ್ಥ ನೆರವೇರಿದೆ.  

ಈ ಜೋಡಿ ಸುಮಾರು ದಿನಗಳಿಂದ ಡೇಟ್‌ ಮಾಡುತ್ತಿದ್ದಾರೆ ಎನ್ನುವ ರೂಮರ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಇದೀಗ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಂತೆ ಈ ಜೋಡಿ ನಿಶ್ಚಿತಾರ್ಥದ ಮಾಡಿಕೊಂಡಿದ್ದಾರೆ.  

ಈ ಜೋಡಿ ಮುಂದೊಮ್ಮೆ ಈಜಿಪ್ಟ್‌ನಲ್ಲಿ ವಿಹಾರ ಮಾಡುತ್ತಿದ್ದ ಫೋಟೋಸ್‌ ಈ ಮುಂಚೆ ವೈರಲ್‌ ಆಗಿದ್ದವು, ನಂತರ ಉರಿಯುತ್ತಿರುವ ಬೆಂಕಿಗೆ ಸೀಮೆ ಎಣ್ಣೆ ಸುರಿದಂತೆ ರೆಸ್ಟೋರೆಂಟ್‌ನಲ್ಲಿ ಚೆಫ್‌ ಒಬ್ಬರು ನಾಗ ಚೈತನ್ಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ರು, ಆ ಫೋಟೋದಲ್ಲಿ ನಾಗಚೈತನ್ಯ ಅವರ ಹಿಂಬದಿಯಲ್ಲಿ ಶೋಭಿತಾ ಮುಖವನ್ನು ಮರೆಮಾಚಿ ಕೂತಿರುವುದು ಕಂಡುಬಂತು.  

ಇದಷ್ಟೆ ಅಲ್ಲದೆ ಇತ್ತೀಚೆಗೆ ಈ ಜೋಡಿಗಳು ಪ್ರತ್ಯೇಕವಾಗಿ ಫೋಟೋಗಳನ್ನು ಹಂಚಿಕೊಂಡಿದ್ದರು, ಇಬ್ಬರು ಪೋಟೊ ಒಂದೇ ಸ್ಥಳದಲ್ಲಿ ತೆಗೆಯಲಾಗಿತ್ತು. ಈ ಎರಡು ಫೋಟೊಸ್‌ಗೆ ಲಿಂಕ್‌ ಮಾಡಿ ಅಭಿಮಾನಿಗಳು ಇವರಿಬ್ಬರು ಡೇಟ್‌ ಮಾಡಿತ್ತಿರುವುದು ಫಿಕ್ಸ್‌ ಎಂದಿದ್ದರು. ಎನೇ ಅಗಲಿ ಇದೀಗ ಈ ಜೋಡಿ ಒಂದಾಗಿರುವುದರ ಮೂಲಕ ಅಭಿಮಾನಿಗಳ ಖುಷಿಗೆ ಪರಿವೇ ಇಲ್ಲದಂತಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link