BBK 10: ತನಿಷಾ ಬೆನ್ನಲ್ಲೇ ಬಿಗ್ ಬಾಸ್ ಮನೆಯಿಂದ ಎಲಿಮಿನೆಟ್ ಆಗುತ್ತಿರುವ ಮತ್ತೊಬ್ಬ ಸ್ಪರ್ಧಿ ಇವರೇ! ಭಗ್ನವಾಯಿತು ಫೈನಲ್ ತಲುಪುವ ಕನಸು

Fri, 19 Jan 2024-1:38 pm,

ವರ್ತೂರು ಸಂತೋಷ್ ಬಂಧನ, ತನಿಶಾ ವಿರುದ್ದದ ಎಫ್‌ಐಆರ್, ಟಾಸ್ಕ್ ನಿಂದಾಗಿ ಡ್ರೋನ್ ಪ್ರತಾಪ್-ಸಂಗೀತಾ ಕಣ್ಣಿಗೆ ಆದ ಗಾಯ, ಹೀಗೆ ಹತ್ತು ಹಲವು ವಿಚಾರಗಳಿಂದಾಗಿ   ಈ ಬಾರಿಯ ಬಿಗ್ ಬಾಸ್ ಆರಂಭದಿಂದಲೂ ಹೈ ಲೈಟ್ ಆಗಿದೆ.   

ಇನ್ನೇನು ಕೆಲವೇ ದಿನಗಳಲ್ಲಿ ಕಾರ್ಯಕ್ರಮದ ಫೈನಲ್ ನಡೆಯಲಿದೆ. ಸಂಗೀತಾ ಈಗಾಗಲೇ ಟಿಕೆಟ್ ಟು ಫಿನಾಲೆ ಗೆದ್ದಿದ್ದು, ಫೈನಲ್ ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.  ಡ್ರೋನ್ ಪ್ರತಾಪ್ ಎಲಿಮಿನೇಷನ್‌ನಿಂದ ಪಾರಾಗಿದ್ದರೆ.   

ಈ  ನಡುವೆ, ನಿನ್ನೆಯಷ್ಟೇ ಮಿಡ್ ವೀಕ್ ಎಲಿಮಿನೇಶನ್ ನಲ್ಲಿ ತನಿಷಾ ಕುಪ್ಪಂದ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ತನಿಷಾ ಎಲಿಮಿನೇಶನ್ ನನತ್ರ ಮನೆಯಲ್ಲಿ ಈಗ ಏಳು ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.   

ಇನ್ನು ಮನೆಯಲ್ಲಿ ಬಾಕಿ ಉಳಿದಿರುವುದು ನಮ್ರತಾ ಗೌಡ, ವಿನಯ್ ಗೌಡ, ಕಾರ್ತಿಕ್ ಮಹೇಶ್, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್. ಈ ಪೈಕಿ ಮತ್ತೊಬ್ಬ ಸದಸ್ಯೆ ಬಿಗ್ ಮನೆ ಬಿಟ್ಟು ಹೊರ ಬರುತ್ತಾರೆ ಎಂದು ಹೇಳಲಾಗುತ್ತಿದೆ.   

ಹೌದು ತನಿಷಾ ಹಿಂದೆಯೇ ನಮ್ರತಾ ಗೌಡ ಕೂಡಾ ಎಲಿಮಿನೆಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಈ ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿರುವ ಸ್ಪರ್ಧಿ ನಮ್ರತಾ ಗೌಡ ಎಂದು ಹೇಳಲಾಗುತ್ತಿದೆ. 

ಇನ್ನು ಈ ಬಾರಿ ಮೊದಲಿನಿಂದಲೂ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡು ಅತ್ಯಧಿಕ ಟ್ರೆಂಡಿಂಗ್ ನಲ್ಲಿರುವ ಕಾರ್ತಿಕ್, ಸಂಗೀತಾ, ಪ್ರತಾಪ್, ಇವರಲ್ಲಿ ಒಬ್ಬರು ಗೆಲ್ಲುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link