ಹಾರ್ದಿಕ್ ಪಾಂಡ್ಯಗೂ ಮುನ್ನ ಈ ನಟನ ಜೊತೆ ಲಿವಿನ್ ರಿಲೇಶನ್ ನಲ್ಲಿದ್ದರು ನತಾಶಾ!ರಿಯಾಲಿಟಿ ಶೋ ನಲ್ಲಿಯೂ ಇವರಿಬ್ಬರು ಮೂಡಿಸಿದ್ದರು ಸಂಚಲನ!

Mon, 22 Jul 2024-11:03 am,

ವಿಚ್ಛೇದನದ ಕುರಿತು ಪೋಸ್ಟ್ ಹಂಚಿಕೊಳ್ಳುವ ಮೂಲಕ, ಹಾರ್ದಿಕ್ ಮತ್ತು ನತಾಷಾ 4 ವರ್ಷಗಳ ಸಂಬಂಧಕ್ಕೆ ತೆರೆ ಎಳೆದಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.  

ಹಾರ್ದಿಕ್ ಪಾಂಡ್ಯ ಮತ್ತು ನತಾಷಾ ಒಂದು ಬಾರಿಯಲ್ಲ ಬರೋಬ್ಬರಿ ನಾಲ್ಕು ಬಾರಿ ವಿವಾಹವಾಗಿದ್ದರು.ಆದರೆ, ಇದೀಗ ಈ ಸಂಬಂಧ ಮುರಿದು ಬಿದ್ದಿದ್ದು,  ನತಾಶಾ ತನ್ನ ಮಗ ಅಗಾಸ್ಥ್ಯಾ ಜೊತೆ ಸೆರ್ಬಿಯಾಕ್ಕೆ ತೆರಳಿದ್ದಾರೆ.

ಹಾರ್ದಿಕ್ ಗೂ ಮುನ್ನ ನತಾಷಾ ಈ ಖ್ಯಾತ ನಟನ ಜೊತೆ ಸಂಬಂಧದಲ್ಲಿದ್ದರು.ಇವರಿಬ್ಬರೂ ನಚ್ ಬಲಿಯೇ ಎನ್ನುವ ಡಾನ್ಸ್ ರಿಯಾಲಿಟಿ ಶೋನಲ್ಲಿ ಕೂಡಾ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದರು.    

2014 ರಿಂದ  ನತಾಷಾ ಮತ್ತು ಹಿಂದಿ ಕಿರು ತೆರೆ ನಟ ಅಲಿ ಗೋನಿ  ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಲಿವಿನ್ ರಿಲೇಶನ್ ನಲ್ಲಿ ಕೂಡಾ ಇದ್ದರು.ಆದರೆ ಇವರಿಬ್ಬರ ಪ್ರೀತಿ ಹೆಚ್ಚು ಕಾಲ ಉಳಿಯಲಿಲ್ಲ

ಇನ್ನು ತಾವು ಯಾಕೆ ಬೇರೆಯಾಗಬೇಕಾಯಿತು ಎನ್ನುವ ವಿಚಾರವನ್ನು ಕೂಡಾ ನಟ ಅಲಿ ಗೊನಿ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು.   

ಇಬ್ಬರೂ ವಿಭಿನ್ನ ಸಂಸ್ಕೃತಿ ಹೊಂದಿದ್ದು, ಪರಸ್ಪರ ಹಿಂದಾನಿಕೆ ಸಾಧ್ಯವಿಲ್ಲ ಎನ್ನುವ ಸತ್ಯ ಲಿವಿನ್ ನಲ್ಲಿ ಇರುವಾಗ ಗೊತ್ತಾಯಿತಂತೆ. ಅಲ್ಲದೆ,  ಭಾರತೀಯ ಹುಡುಗಿಯನ್ನೇ ಮದುವೆಯಾಗುವುದಾಗಿ ಅಲಿ ಗೋನಿ ನಿರ್ಧರಿಸಿದರಂತೆ.     

ZEENEWS TRENDING STORIES

By continuing to use the site, you agree to the use of cookies. You can find out more by Tapping this link