ಬಿಳಿ ಕೂದಲನ್ನು ಕಪ್ಪಗಾಗಿಸಲು ಇಲ್ಲಿದೆ ಸುಲಭ ʼಉಪಾಯʼ; ಈ ಮನೆಮದ್ದುಗಳನ್ನ ಟ್ರೈ ಮಾಡಿ ನೋಡಿ
ಒಣಗಿದ ನೆಲ್ಲಿಕಾಯಿಯನ್ನು ಕೊಬ್ಬರಿ ಎಣ್ಣೆಯ ಜೊತೆ ಕುದಿಸಿ, ಅದು ತಣ್ಣಗಾದ ಮೇಲೆ ಅದನ್ನು ತಲೆಗೆ ಹಚ್ಚಬೇಕು. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದಲ್ಲಿ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ.
ತೆಂಗಿನ ಎಣ್ಣೆಯ ಜೊತೆಗೆ ನಿಂಬೆಹಣ್ಣಿನ ರಸವನ್ನು ಬೆರೆಸಿ ತಲೆಗೆ ಹಚ್ಚಬೇಕು. ಹೀಗೆ ಮಾಡಿದ ಒಂದು ಗಂಟೆಯ ನಂತರ ತಲೆಸ್ನಾನ ಮಾಡಬೇಕು. ತೆಂಗಿನೆಣ್ಣೆಯು ಬಿಳಿ ಕೂದಲು ಬೆಳೆಯುವುದನ್ನು ತಡೆಗಟ್ಟುತ್ತದೆ.
ಈರುಳ್ಳಿ ರಸ ಮತ್ತು ನಿಂಬೆಹಣ್ಣಿನ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. 3 ತಿಂಗಳು ಸತತವಾಗಿ 1 ಚಮಚ ಕಪ್ಪು ಎಳ್ಳನ್ನು ತಿನ್ನಬೇಕು ಜೊತೆಗೆ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು.
ಬಾದಾಮಿ ಎಣ್ಣೆ, ನಿಂಬೆರಸ ಮತ್ತು ನೆಲ್ಲಿಕಾಯಿಯ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ತಲೆಗೆ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಮದರಂಗಿ ಎಲೆಯನ್ನು ಚೆನ್ನಾಗಿ ಪೇಸ್ಟ್ ಮಾಡಿ ಅದಕ್ಕೆ 3 ಚಮಚ ನೆಲ್ಲಿ ಪುಡಿ, 1 ಚಮಚ ಕಾಫಿ ಪೌಡರ್, 1 ಚಮಚ ಮೊಸರನ್ನು ಹಾಕಿ. ನಂತರ ಅದನ್ನು ಕೂದಲಿಗೆ ಹಚ್ಚಿ ಅದು ಒಣಗಿದ ಮೇಲೆ ತಲೆಸ್ನಾನ ಮಾಡಿ.
ತೆಂಗಿನೆಣ್ಣೆಗೆ ಕರಿಬೇವಿನ ಎಲೆ ಹಾಕಿ ಕುದಿಸಿ, ಅದು ಆರಿದ ಮೇಲೆ ಅದನ್ನು ತಲೆಗೆ ಹಚ್ಚಿ. ಆಲಿವ್ ಎಣ್ಣೆ ಮತ್ತು ಎಳ್ಳಿನ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಬೇಕು.