ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತವೆ ಅಡುಗೆ ಮನೆಯಲ್ಲಿಯೇ ಸಿಗುವ ಈ ಅದ್ಭುತ ಆಹಾರ ಪದಾರ್ಥಗಳು..!

Thu, 04 Apr 2024-6:17 pm,

ಹಾಗಲ ಕಾಯಿ : ಮಧುಮೇಹಿಗಳಿಗೆ ಹಾಗಲ ಕಾಯಿ ಉತ್ತಮ ಔಷಧಿ. ಇದರಲ್ಲಿರುವ ಪೋಷಕಾಂಶಗಳು ಇನ್ಸುಲಿನ್‌ನಂತಹ ಗುಣಗಳನ್ನು ಹೊಂದಿದ್ದು, ಸಕ್ಕರೆಯನ್ನು ಬಳಸಿಕೊಂಡು ಶಕ್ತಿಯನ್ನಾಗಿ ಪರಿವರ್ತಿಸಿ, ಡಯಾಬಿಟಿಸ್ ಅನ್ನು ನಿಯಂತ್ರಣಕ್ಕೆ ತರುವಲ್ಲಿ ಸಹಾಯ ಮಾಡುತ್ತದೆ.  

ಮೆಂತೆ ಕಾಳುಗಳು : ಮೆಂತೆಯಲ್ಲಿ ಮಧುಮೇಹ ನಿಯಂತ್ರಿಸುವ ಗುಣಗಳಿವೆ. ಇದರಲ್ಲಿರುವ ನಾರು ಮತ್ತು ಇತರ ಆರೋಗ್ಯಕರ ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಮಟ್ಟಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿ ಮೆಂತೆಯಿಂದ ಮಾಡಲ್ಪಟ್ಟ ಅಹಾರಗಳನ್ನು ಸೇವಿಸುವುದು ಒಳ್ಳೆಯದು..  

ಚೆಕ್ಕೆ ಅಥವಾ ದಾಲ್ಚಿನ್ನಿ : ಇವುಗಳು ದೇಹದಲ್ಲಿ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟಗಳು ಕಡಿಮೆ ಮಾಡಲು ಸಹಾಯ ಮಾಡುತ್ತವೆ.. ನಿತ್ಯದ ಅಡುಗೆಯಲ್ಲಿ ದಾಲ್ಚಿನ್ನಿಯನ್ನು ಸೇರಿಸುವ ಮೂಲಕ ಇದರ ಲಾಭ ಪಡೆಯಬಹುದು. 

ನೆಲ್ಲಿಕಾಯಿ : ನೆಲ್ಲಿಕಾಯಿ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಈ ತರಕಾರಿ ರಕ್ತದಲ್ಲಿ ಇನ್ಸುಲಿನ್ ಸಂವೇದನೆ ಯನ್ನು ಹೆಚ್ಚಿಸುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟಗಳು ಕಡಿಮೆಯಾಗಲು ನೆರವಾಗುತ್ತದೆ. ನೆಲ್ಲಿಕಾಯಿಯನ್ನು ಹಸಿಯಾಗಿ ತಿಂದಷ್ಟೂ ಒಳ್ಳೆಯದು.   

ಅರಿಶಿನ ಪುಡಿ : ಆಯುರ್ವೇದದಲ್ಲಿ ಅರಿಶಿನ ಪುಡಿಗೆ ಮಹತ್ವವಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ರಕ್ತದಲ್ಲಿ ಅಧಿಕ ಸಕ್ಕರೆಯ ಮಟ್ಟಗಳನ್ನು ನಿಯಂತ್ರಿಸಲು ನೆರವಾಗುತ್ತವೆ. ಇದರಿಂದಾಗಿ ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ. 

ಕಹಿಬೇವಿನ ಎಲೆಗಳು : ಕಹಿಬೇವು ಇನ್ಸುಲಿನ್ ಪ್ರಮಾಣವನ್ನು ಉತ್ತಮಗೊಳಿಸುತ್ತದೆ. ಈ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಕಹಿಬೇವನ್ನು ಕುದಿಸಿದ ನೀರನ್ನು ಟೀ ರೂಪದಲ್ಲಿ ಸೇವಿಸಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link