ನವ ಪಂಚಮ ರಾಜಯೋಗದಿಂದ ತುಂಬುವುದು ಈ ರಾಶಿಯವರ ತಿಜೋರಿ
ಮಂಗಳ ಗ್ರಹ ಮಿಥುನ ರಾಶಿಯಲ್ಲಿದ್ದು, ಶನಿಯು ಕುಂಭ ರಾಶಿಯಲ್ಲಿ ಉದಯಿಸಿದ್ದಾನೆ. ಈ ರೀತಿಯಾಗಿ ಶನಿಯ ಉದಯ ಮತ್ತು ಮಂಗಳ ಸಂಕ್ರಮಣ ಒಟ್ಟಿಗೆ ನವಪಂಚಮ ರಾಜಯೋಗವನ್ನು ರೂಪಿಸುತ್ತಿದೆ. ಈ ವೇಳೆ ಶನಿಯಿಂದ ಐದನೇ ಮನೆಯಲ್ಲಿ ಮಂಗಳನಿದ್ದು, ಶನಿಯು ಮಂಗಳನಿಂದ ಒಂಭ ತ್ತನೇ ಮನೆಯಲ್ಲಿದ್ದಾನೆ. ನವಪಂಚಮ ರಾಜಯೋಗವು ಮೂರು ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದೆ.
ಮೇಷ ರಾಶಿ : ನವಪಂಚಮ ರಾಜಯೋಗವು ಮೇಷ ರಾಶಿಯವರಿಗೆ ಅದೃಷ್ಟದಾಯಕವಾಗಿರಲಿದೆ. ಈ ಯೋಗದಿಂದ ಮೇಷ ರಾಶಿಯವರ ಧೈರ್ಯ ಹೆಚ್ಚಾಗುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಬಹಳ ಸುಲಭವಾಗಿ ನೆರವೇರಲಿದೆ. ಹೊಸ ಕೆಲಸ ಆರಂಭಿಸಬೇಕು ಎಂದಿರುವವರಿಗೆ ಇದು ಸೂಕ್ತ ಸಮಯವಾಗಿರಲಿದೆ. ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭವಾಗಲಿದೆ.
ಕನ್ಯಾ ರಾಶಿ : ನವಪಂಚಮ ರಾಜಯೋಗದಿಂದ ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಳಿದೆ. ವೇತನ ಹೆಚ್ಚಾಗುವ ಸಾಧ್ಯತೆ ಇದೆ. ದೊಡ್ಡ ಕಂಪನಿಯಿಂದ ಉನ್ನತ ಹುದ್ದೆಯ ಆಫರ್ ಬರಬಹುದು. ನಿಮ್ಮ ನಿರೀಕ್ಷೆಗೂ ಮೀರಿದ ಜವಾಬ್ದಾರಿ ನಿಮಗೆ ಒದಗಿ ಬರಬಹುದು. ಆದರೆ ಈ ಜವಾಬ್ದಾರಿಯನ್ನು ನೀವು ಸರಾಗವಾಗಿ ನಿಭಾಯಿಸುತ್ತೀರಿ.
ಕುಂಭ ರಾಶಿ : ನವಪಂಚಮ ರಾಜಯೋಗದಿಂದ ಕುಂಭ ರಾಶಿಯವರ ಕೆಲಸದ ಸ್ಥಳದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಅಭಿವೃದ್ದಿಯಾಗಲಿದೆ. ಜೀವನದಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)