ಅತ್ತೆ ಐಶ್ವರ್ಯಾ ರೈ ಬಚ್ಚನ್ʼರನ್ನೇ `ಹೊರಗಿನವಳು` ಎಂದ್ರಾ ಅಮಿತಾಬ್ ಮೊಮ್ಮಗಳು.! ಅಭಿಷೇಕ್ ಪತ್ನಿ ಮನೆಯಿಂದ ದೂರವಿರೋದು ನಿಜಾನಾ?
ಐಶ್ವರ್ಯಾ ರೈ ಬಚ್ಚನ್ ಅವರ ಸೊಸೆ ಅಂದರೆ ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಮಗಳು ನವ್ಯಾ ನವೇಲಿ ನಂದ ಅವರ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನವ್ಯಾ ನವೇಲಿ ನಂದ ‘ವಾಟ್ ದಿ ಹೆಲ್ ನವ್ಯಾ’ ಹೆಸರಿನ ಪಾಡ್‌ಕಾಸ್ಟ್ ನಡೆಸುತ್ತಾರೆ. ಈ ಶೋಗೆ ಬಚ್ಚನ್ ಕುಟುಂಬದ ಅನೇಕರು ಬಂದು ಹೋಗಿದ್ದಾರೆ.
‘ವಾಟ್ ದಿ ಹೆಲ್ ನವ್ಯಾ 2’ ಶೋ ನವ್ಯಾ ತಾಯಿ ಶ್ವೇತಾ ಹಾಗೂ ಅಜ್ಜಿ ಜಯಾ ಬಚ್ಚನ್ ಈ ಬಾರಿ ಅತಿಥಿಗಳಾಗಿ ಆಗಮಿಸಿದ್ದರು.
ಈ ಶೋಗೆ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್ ಅಥವಾ ಅಮಿತಾಬ್ ಬಚ್ಚನ್ ಅವರನ್ನು ಕರೆಸುವ ಬಗ್ಗೆ ಕೇಳಲಾಗಿದೆ. ಇದಕ್ಕೆ ನವ್ಯಾ ಉತ್ತರ ವೈರಲ್ ಆಗುತ್ತಿದೆ.
ವಾಟ್ ದಿ ಹೆಲ್ ನವ್ಯಾ 3 ನೇ ಸೀಸನ್ ನಡೆಸಿದರೆ ನಾನು ಅವರನ್ನು ಕರೆಯುವೆ. ಕೇವಲ ಕುಟುಂಬದವರು ಮಾತ್ರವಲ್ಲ ಹೊರಗಿನವರನ್ನೂ ಕರೆಯುತ್ತೇನೆ. ಬೇರೆ ಬೇರೆ ಕ್ಷೇತ್ರದವರ ಅನುಭವ ತಿಳಿದುಕೊಳ್ಳಲು ಮಜಾ ಬರುತ್ತದೆ ಎಂದಿದ್ದಾರೆ.
ನವಾ ಅವರ ಈ ಮಾತನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಐಶ್ವರ್ಯಾ ರೈ ಬಚ್ಚನ್ ಅವರನ್ನೇ "ಹೊರಗಿನವರು" ಎಂದಿದ್ದು ಎಂಬ ಮಾತು ಕೇಳಿಬರುತ್ತಿದೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮಧ್ಯೆ ಯಾವುದೂ ಸರಿ ಇಲ್ಲ ಎನ್ನಲಾಗುತ್ತಿದೆ. ಬಚ್ಚನ್ ಕುಟುಂಬದವರು ಕೂಡ ಐಶ್ವರ್ಯನಾ ಹೊರಗಿನವರ ರೀತಿ ನೋಡುತ್ತಿದ್ದಾರೆ ಎನ್ನಲಾಗಿದೆ.