Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್‌ ಬಾಸ್‌ !

Fri, 16 Aug 2024-2:24 pm,

ಬಿಗ್ ಬಾಸ್‌ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ. ತಮಿಳು ಬಿಗ್‌ ಬಾಸ್‌ ನಿಂದ ಕಮಲ್ ಹಾಸನ್ ಹೊರ ನಡೆದ ಬಳಿಕ ಈ ಸೀಸನ್ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ. ತಮಿಳಿನ ಬಿಗ್ ಬಾಸ್ ಹೊಸ ಹೋಸ್ಟ್ ಯಾರು ಗೊತ್ತಾ? ಗೊತ್ತಾದರೆ ಶಾಕ್ ಆಗುತ್ತೀರಿ.

ಬಿಗ್ ಬಾಸ್ ಸೀಸನ್ 8 ಕ್ಕೆ ಎಲ್ಲವೂ ಸಿದ್ಧವಾಗಿದೆ. ತೆಲುಗು ಮತ್ತು ತಮಿಳು ಎರಡೂ ಸೀಸನ್‌ಗಳು ಕೆಲವು ದಿನಗಳ ವ್ಯತ್ಯಾಸದೊಂದಿಗೆ ಪ್ರಾರಂಭವಾಗಲಿವೆ. ಆದರೆ ತೆಲುಗು ಸೀಸನ್‌ನ ಹೋಸ್ಟ್ ಆಗಿ ಕಿಂಗ್ ನಾಗಾರ್ಜುನ ಮುಂದುವರಿಯಲಿದ್ದರೆ, ತಮಿಳು ಬಿಗ್ ಬಾಸ್ ಹೋಸ್ಟ್ ಮಾಡುತ್ತಿದ್ದ ಕಮಲ್ ಹಾಸನ್ ಹೊರಬಂದಿದ್ದಾರೆ. 

ಬಿಗ್ ಬಾಸ್ ಶೋ ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಬಹಳ ಸಮಯದಿಂದ ನಡೆಯುತ್ತಿದ್ದರೆ, ಇದು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ 7 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿದೆ.

ತಮಿಳಿನಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಿದ್ದ ಸ್ಟಾರ್ ಹೀರೋ ಕಮಲ್ ಹಾಸನ್ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮ ನಡೆಸಲು ನಿರಾಕರಿಸಿದ್ದಾರೆ. ಅವರಿಗೆ ಇತರ ಕಮಿಟ್‌ಮೆಂಟ್‌ಗಳಿದ್ದ ಕಾರಣ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.

ಕಮಲ ಹಾಸನ್ ಅವರ ಬದಲು ಯಾರು ಹೋಸ್ಟ್ ಮಾಡುತ್ತಾರೆ? ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಆಯೋಜಕರು ಅಧಿಕೃತ ಘೋಷಣೆ ಮಾಡದಿದ್ದರೂ ಸ್ಟಾರ್ ಹೀರೋಗಳ ಹೆಸರು ವೈರಲ್ ಆಗುತ್ತಿದೆ. 

ಅದರಲ್ಲಿ ತಮಿಳಿನ ರೊಮ್ಯಾಂಟಿಕ್ ಹೀರೋ ಸಿಂಬು ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಅವರೇ ಫಿಕ್ಸ್ ಎಂದುಕೊಂಡವರೂ ಇದ್ದಾರೆ. ಆದರೆ ಎಲ್ಲರ ನಿರೀಕ್ಷೆಯನ್ನು ತಲೆಕೆಳಗು ಮಾಡುವಂತೆ ಬಿಗ್ ಬಾಸ್ ಸೀಸನ್ 8ನ್ನು ಮಹಿಳೆಯೊಬ್ಬರು ನಡೆಸಿಕೊಡುತ್ತಾರೆ ಎಂಬ ಹೊಸ ಚರ್ಚೆ ಈಗ ಹುಟ್ಟಿಕೊಂಡಿದೆ.

ಲೇಡಿ ಸೂಪರ್ ಸ್ಟಾರ್ ನಯನತಾರಾ ಈ ಬಾರಿಯ ಬಿಗ್‌ ಬಾಸ್‌ ಹೋಸ್ಟ್‌ ಎಂಬ ವದಂತಿ ಶುರುವಾಗಿದೆ. ಸಂಘಟಕರು ಈಗಾಗಲೇ ನಯನತಾರಾ ಅವರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ನಯನತಾರಾ ಕೂಡ ಇದಕ್ಕೆ ಒಪ್ಪಿಕೊಂಡಿದ್ದಾರೆಂಬ ಗುಮಾನಿ ಹಬ್ಬಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link