ಮುಂದಿನ ಎರಡು ವರ್ಷಗಳಲ್ಲಿ ಫಿಕ್ಸ್ ರಿಟರ್ನ್ ಬೇಕೆಂದಿದ್ದರೆ ಇಲ್ಲಿ ಹೂಡಿಕೆ ಮಾಡಿ
2 ವರ್ಷದ ಎಫ್‌ಡಿಗಳ ಮೇಲೆ ಎಸ್‌ಬಿಐ ವಾರ್ಷಿಕವಾಗಿ 5.10 ಶೇಕಡಾ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ, ಈ ದರಗಳು 5.60 ಶೇಕಡಾ. ಈ ಬಡ್ಡಿ ದರಗಳು ಜನವರಿ 8, 2021 ರಿಂದ ಅನ್ವಯವಾಗುವಂತೆ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯಿಸುತ್ತವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 2-ವರ್ಷದ FD ಗಳ ಮೇಲೆ ವಾರ್ಷಿಕ ಶೇ .5.00 ಬಡ್ಡಿದರವನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ, ಈ ದರಗಳು 5.50 ಶೇಕಡಾವಾಗಿರುತ್ತದೆ . ಈ ಬಡ್ಡಿದರಗಳು ಆಗಸ್ಟ್ ಒಂದರಿಂದ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತವೆ.
HDFC ಬ್ಯಾಂಕ್ 2-ವರ್ಷದ FD ಗಳ ಮೇಲೆ 4.90 ಶೇಕಡಾ ವಾರ್ಷಿಕ ಬಡ್ಡಿಯನ್ನು ಪಾವತಿಸುತ್ತಿದೆ. ಹಿರಿಯ ನಾಗರಿಕರಿಗೆ ಬಡ್ಡಿದರಗಳು 5.40ಶೇಕಡಾವಾಗಿರುತ್ತದೆ. ಈ ಬಡ್ಡಿ ದರಗಳು 21 ಮೇ 2021 ರಿಂದ ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತವೆ.
ಐಸಿಐಸಿಐ ಬ್ಯಾಂಕ್ 2-ವರ್ಷದ ಎಫ್‌ಡಿಗಳಿಗೆ ವರ್ಷಕ್ಕೆ 5.00 ಶೇಕಡಾ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ, ಈ ಬಡ್ಡಿ ದರವು 5.50 ಶೇಕಡಾವಾಗಿರುತ್ತದೆ. ಈ ದರಗಳು 21 ಅಕ್ಟೋಬರ್ 2020 ರಿಂದ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತವೆ.
ನೀವು ಯಾವುದೇ ಬ್ಯಾಂಕಿನಲ್ಲಿ 5 ವರ್ಷಗಳವರೆಗೆ ಎಫ್‌ಡಿ ಮಾಡಿದರೆ, ನೀವು ಸೆಕ್ಷನ್ 80 ಸಿ ಯಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬಹುದು. ಆದಾಗ್ಯೂ, ಎಫ್‌ಡಿಯಿಂದ ಪಡೆದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಇದರಲ್ಲಿ, ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆಯ ಮೇಲೆ ತೆರಿಗೆ ಉಳಿಸಬಹುದು.