Neelakurinji Flowers : ರಾಜ್ಯದಲ್ಲಿ 12 ವರ್ಷಗಳಿಗೊಮ್ಮೆ ಅರಳುವ `ನೀಲಕುರಿಂಜಿ ಹೂವು` :ಈ ಅಪರೂಪದ ಹೂವಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ!
ಹೆಲಿ-ಟ್ಯಾಕ್ಸಿ ಸಂಸ್ಥೆಯು ದೃಶ್ಯ ಸತ್ಕಾರದ ವೈಮಾನಿಕ ದೃಶ್ಯವನ್ನ ಸೆರೆ ಹಿಡಿಯಲಾಗಿದೆ. ಬೆಂಗಳೂರು ಮೂಲದ ಹೆಲಿ-ಟ್ಯಾಕ್ಸಿ ಸಂಸ್ಥೆ ತುಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಹೂವಿನ ತಾಣಕ್ಕೆ ರೂ 2,30,000 ವೆಚ್ಚದಲ್ಲಿ ಟ್ರಿಪ್ ನೀಡುತ್ತಿದೆ.
(ಚಿತ್ರ ಮೂಲ: ಟ್ವಿಟರ್@ಅಂಕಿತ್ ಕುಮಾರ್_ಐಎಫ್ಎಸ್)
ಸಂತಾನಪರ ಪಂಚಾಯತ್ ವ್ಯಾಪ್ತಿಯ ಇಡುಕ್ಕಿಯ ಶಲೋಮಕುನ್ನು (ಶಲೋಮ್ ಬೆಟ್ಟಗಳು) ಕೂಡ ನೀಲಿ ನೀಲಕುರಿಂಜಿ ಹೂವುಗಳಿಂದ ಕಂಗೊಳಿಸುತ್ತಿವೆ. ಈ ಬಾರಿ 10 ಎಕರೆಗೂ ಹೆಚ್ಚು ನೀಲಕುರಿಂಜಿ ಹೂವುಗಳು ಶಲೋಮಕುನ್ನು ಆವರಿಸಿದೆ.
(ಚಿತ್ರ ಮೂಲ: ANI)
ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ ರಾಜ್ಯದಲ್ಲಿ ಸುಮಾರು 45 ಜಾತಿಯ ನೀಲಕುರಿಂಜಿ ಹೂವುಗಳ ಜಾತಿಗಳಿವೆ, ವಿವಿಧ ಜಾತಯಾ ಹೂವುಗಳನ್ನ ವಿವಿಧ ರೀತಿಯಲ್ಲಿ ಪಟ್ಟಿ ಮಾಡಲಾಗಿದೆ. ಪ್ರತಿಯೊಂದು ಜಾತಿಯ ಹವು ಆರು, ಒಂಬತ್ತು, 11, ಅಥವಾ 12 ವರ್ಷಗಳ ಮಧ್ಯಂತರದಲ್ಲಿ ಅರಳುತ್ತದೆ.
(ಚಿತ್ರ ಮೂಲ: ಟ್ವಿಟರ್)
ಸ್ಥಳೀಯವಾಗಿ ಕುರಿಂಜಿ ಎಂದು ಕರೆಯಲ್ಪಡುವ ನೀಲಕುರಿಂಜಿ ಹೂವುಗಳು ಅಥವಾ ಸ್ಟ್ರೋಬಿಲಾಂಥೆಸ್ ಕುಂಥಿಯಾನ 1,300 ರಿಂದ 2,400 ಮೀಟರ್ ಎತ್ತರದಲ್ಲಿ ಬೆಳೆಯುತ್ತವೆ. ಪೊದೆ ಸಾಮಾನ್ಯವಾಗಿ 30 ರಿಂದ 60 ಸೆಂ.ಮೀ ಎತ್ತರವಿರುತ್ತದೆ.
(ಚಿತ್ರ ಮೂಲ: ಟ್ವಿಟರ್@ಅಂಕಿತ್ ಕುಮಾರ್_ಐಎಫ್ಎಸ್)
ಪಶ್ಚಿಮ ಘಟ್ಟದ ಮಾಂಡಲಪಟ್ಟಿ ಬೆಟ್ಟಗಳು, ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ನೀಲಕುರಿಂಜಿ ಹೂವುಗಳನ್ನು ನೋಡಲು ಈಗ ರಾಜ್ಯದಾದ್ಯಂತ ಪ್ರವಾಸಿಗರು ಬರುತ್ತಿದ್ದಾರೆ.
(ಚಿತ್ರ ಮೂಲ: ANI)