ಸಂಬಂಧ ಸುಮಧುರವಾಗಿರಬೇಕಾದರೆ ಸಂಗಾತಿ ಬಳಿ ಯಾವತ್ತೂ ಈ ಪ್ರಶ್ನೆಗಳನ್ನು ಕೇಳಲೇ ಬೇಡಿ
ನಿಮ್ಮೊಂದಿಗೆ ಸಂಬಂಧವನ್ನು ಹೊಂದಿರುವ ವ್ಯಕ್ತಿಯು, ಇದಕ್ಕೂ ಮೊದಲು ಬೇರೆ ಸಂಬಂಧದಲ್ಲಿ ಇದ್ದಿರಲೇ ಬೇಕೆಂದಿಲ್ಲ. ಆ ಹುಡುಗ ಅಥವಾ ಹುಡುಗಿ ಮೊದಲ ಬಾರಿಗೆ ನಿಮ್ಮನ್ನೇ ಪ್ರೀತಿಸುತ್ತಿರಬಹುದು. ಅಥವಾ ಹಿಂದೆ ಅವರ ಜೀವನದಲ್ಲಿ ಗೆಳೆಯ ಅಥವಾ ಗೆಳತಿ ಇದ್ದರೂ ಅದರ ಬಗ್ಗೆ ಚರ್ಚೆ ಮಾಡಬೇಡಿ. ಇಂತಹ ಪ್ರಶ್ನೆಗಳು ನಿಮ್ಮ ಸಂಬಂಧವನ್ನು ಅಪಾಯಕ್ಕೆ ಸಿಲುಕಿಸುತ್ತದೆ.
ತಮ್ಮ ವೇತನದ ಬಗ್ಗೆ ಪ್ರಶ್ನೆಗಳನ್ನು ಯಾರೂ ಇಷ್ಟಪಡುವುದಿಲ್ಲ. ಇದನ್ನು ಕೇಳುವುದು ಇಂದಿನ ದಿನಗಳಲ್ಲಿ ಅಸಭ್ಯತೆಯ ಸಂಕೇತವೆಂದು ಪರಿಗಣಿಸಲಾಗಿದೆ. ಹಾಗಾಗಿ ನಿಮ್ಮ ಸಂಗಾತಿಯಲ್ಲಿ ಇಂತಹ ಪ್ರಶ್ನೆಗಳನ್ನು ಎಂದಿಗೂ ಕೇಳಬೇಡಿ.
ನಿಮ್ಮ ಸಂಗಾತಿಯ ಸ್ನೇಹಿತರನ್ನು ಭೇಟಿ ಮಾಡುವ ಬಗ್ಗೆ ಮಾತನಾಡುತ್ತಿದ್ದರೆ, ಅದನ್ನು ಮಾಡಬೇಡಿ. ಯಾಕೆಂದರೆ ನಿಮ್ಮ ಉತ್ಸಾಹ ಬೇರೆಯೇ ರೀತಿಯ ಪರಿಣಾಮ ಬೀರಬಹುದು. . ನೀವು ನಿಮ್ಮ ಸಂಗಾತಿಗಿಂತ ಅವರ ಸ್ನೇಹಿತರ ಕಡೆ ಒಲವು ಹೊಂದಿದ್ದೀರಿ ಎಂಬ ತಪ್ಪು ಕಲ್ಪನೆ ಮೂಡಬಹುದು.
ನಿಮ್ಮ ಸಂಗಾತಿಯು ಅವರ ಮನೆಯ ವಿಚಾರದ ಬಗ್ಗೆ ಅವರಾಗಿಯೇ ಏನನ್ನೂ ಹೇಳದಿದ್ದರೆ, ಯಾವುದೇ ಪ್ರಶ್ನೆಗಳನ್ನು ಕೇಳಬೇಡಿ. ಪ್ರತಿಯೊಬ್ಬ ವ್ಯಕ್ತಿಯ ಮನೆಯ ಸಂದರ್ಭಗಳು ಮತ್ತು ಸಮಸ್ಯೆಗಳು ವಿಭಿನ್ನವಾಗಿರುತ್ತವೆ.
ನಿಮ್ಮ ಸಂಗಾತಿಗಾಗಿ ಖರ್ಚು ಮಾಡಿಯೇ ಮಾಡಿರುತ್ತೀರಿ. ಶಾಪಿಂಗ್ ವೇಳೆ, ಹೊರಗೆ ಊಟ ತಿಂಡಿ ಮಾಡುವ ವೇಳೆ ಖರ್ಚು ಮಾಡಿರಬಹುದು. ಹಾಗಂತ ಸಂಗಾತಿಯ ಮೇಲೆ ಮಾಡಿದ ಖರ್ಚನ್ನು ಯಾವತ್ತೂ ಲೆಕ್ಕ ಹಾಕಬೇಡಿ. ಈ ಬಗ್ಗೆ ಪ್ರಸ್ತಾಪಿಸಬೇಡಿ. ಇದು ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.