Akshaya Tritiya 2024: ಅಕ್ಷಯ ತೃತೀಯದಂದು ಈ 5 ವಸ್ತುಗಳನ್ನು ದಾನ ಮಾಡಿದರೆ ಸಂಪತ್ತು ವೃದ್ಧಿ!
ಪ್ರತಿ ವರ್ಷ ವೈಶಾಖ ಮಾಸ ಶುಕ್ಲ ಪಕ್ಷ ತೃತೀಯ ತಿಥಿಯಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 10, 2024ರ ಶುಕ್ರವಾರದ ದಿನ ಅಕ್ಷಯ ತೃತೀಯ ಇರಲಿದೆ. ಈ ದಿನ ಕೇವಲ ವಸ್ತುಗಳನ್ನು ಖರೀದಿಸುವುದಷ್ಟೇ ಅಲ್ಲ, ಕೆಲವು ವಸ್ತುಗಳನ್ನು ದಾನ ಮಾಡುವುದರಿಂದಲೂ ಶುಭ ಫಲಗಳನ್ನು ಪಡೆಯಬಹುದು ಎಂಬ ನಂಬಿಕೆ ಇದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ಸೇರಿದಂತೆ ಕೆಲವು ವಸ್ತುಗಳನ್ನು ಖರೀದಿಸುವುದನ್ನು ಮಂಗಳಕರ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಈ ದಿನ ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡಿದರೆ ಎಂದಿಗೂ ಆರ್ಥಿಕ ತೊಂದರೆಗಳು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಅಕ್ಷಯ ತೃತೀಯದಲ್ಲಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭ ಎಂದು ತಿಳಿಯೋಣ...
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಷಯ ತೃತೀಯ ದಿನದಂದು ನಿರ್ಗತಿಕರಿಗೆ ಹಾಸಿಗೆಯನ್ನು ದಾನ ಮಾಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ. ಜೀವನದಲ್ಲಿ ಸುಖ ಸಂತೋಷ ತುಂಬಿರುತ್ತದೆ ಎಂದು ನಂಬಲಾಗಿದೆ.
ಅಕ್ಷಯ ತೃತೀಯದ ದಿನ ಅಗತ್ಯವಿರುವವರಿಗೆ ಬಟ್ಟೆಗಳನ್ನು ದಾನ ಮಾಡುವುದರಿಂದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅಷ್ಟೇ ಅಲ್ಲ, ಸಾಲಬಾಧೆಯಿಂದಲೂ ಪರಿಹಾರ ದೊರೆಯುತ್ತದೆ ಎಂದು ನಂಬಲಾಗಿದೆ.
ಅಕ್ಷಯ ತೃತೀಯ ದಿನದಂದು ಶ್ರೀಗಂಧವನ್ನು ದಾನ ಮಾಡುವುದರಿಂದ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಎಂದು ಹೇಳಲಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು ಕುಂಕುಮವನ್ನು ದಾನ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ಸುಖ-ಸಂತೋಷ ನೆಲೆಸುತ್ತದೆ. ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಎನ್ನಲಾಗುತ್ತದೆ.
ಅಕ್ಷಯ ತೃತೀಯ ದಿನದಂದು ಬಾಯಾರಿದವರಿಗೆ ತಣ್ಣೀರು ದಾನ ಮಾಡುವುದರಿಂದ ಅವರ ದಾಹ ನೀಗಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ನಂಬಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.