Marriage Rituals: ಗಂಡನ ಮನೆಗೆ ವಧು ತೆರಳುವಾಗ ತವರಿನಿಂದ ಈ ವಸ್ತುಗಳನ್ನು ಆಕೆಗೆ ಕೊಡಬಾರದು!
ಮದುಮಗಳು ತನ್ನ ಗಂಡನ ಮನೆಗೆ ಹೋಗುವಾಗ, ಆಕೆಯ ತವರಿನಿಂದ ಅಡುಗೆ ಒಲೆಯನ್ನು ನೀಡುತ್ತಾರೆ. ಇದು ಕುಟುಂಬವನ್ನು ಒಡೆಯುವ ಸೂಚಕ ಎಂದು ಹೇಳಲಾಗುತ್ತದೆ.
ವಧುವಿಗೆ ಉಪ್ಪನ್ನು ಸಹ ನೀಡಬಾರದು. ಇದರ ಬದಲಾಗಿ ಸಿಹಿಯನ್ನಿ ನೀಡಬೇಕು. ಸಿಹಿ ನೀಡಿದರೆ, ಹೊಸ ಸಂಬಂಧಗಳಲ್ಲಿ ಬಾಂಧವ್ಯ ಚೆನ್ನಾಗಿರುತ್ತದೆ.
ವಧುವಿಗೆ ಎಂದಿಗೂ ಹಿಟ್ಟಿನ ಜರಡಿ ನೀಡಬೇಡಿ. ಇದು ಸಂತೋಷದ ಜೀವನದಲ್ಲಿ ತೊಂದರೆ ತರಬಹುದು.
ಪೊರಕೆಯನ್ನೂ ಸಹ ನೀಡಬೇಡಿ. ಪೊರಕೆಯಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಪೊರಕೆಯನ್ನು ದಾನ ಮಾಡಬೇಡಿ.
ನಿಮ್ಮ ಮಗಳಿಗೆ ಉಪ್ಪಿನಕಾಯಿಯನ್ನು ಸಹ ಎಂದಿಗೂ ನೀಡಬೇಡಿ. ಇದು ಹೊಸ ಸಂಬಂಧಗಳಲ್ಲಿ ಹುಳುಕು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ.
ಚೂಪಾದ ವಸ್ತುಗಳನ್ನು ಸಹ ವಧುವಿಗೆ ನೀಡಬೇಡಿ. ಇದು ಸಂಬಂಧಗಳಲ್ಲಿ ಮುಳ್ಳು ಚುಚ್ಚಿದ ರೀತಿ ಎಂದು ಪರಿಗಣಿಸಲಾಗುತ್ತದೆ.