ಎಷ್ಟೇ ಕಷ್ಟಬಂದರೂ ಮನೆಯಲ್ಲಿ ಈ 4 ವಸ್ತುಗಳು ಖಾಲಿಯಾಗಲು ಬಿಡಬೇಡಿ: ಬಾಳು ಗೋಳಾಗುವುದು; ಬಡತನ ಹೆಚ್ಚಾಗುತ್ತೆ
ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೂ ವಿಶೇಷ ಮಹತ್ವವಿದೆ. ಹೀಗಾಗಿಯೇ ಮನೆಯಲ್ಲಿ ಯಾವುದೇ ರೀತಿಯ ದೋಷವಿದ್ದರೆ, ನಕಾರಾತ್ಮಕ ಶಕ್ತಿಯು ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲದೆ, ವಾಸ್ತು ದೋಷದಿಂದಾಗಿ ಮನೆಯ ಹಿರಿಯ ವ್ಯಕ್ತಿಯ ಜೀವನದಲ್ಲಿ ಪ್ರಗತಿ, ಸಂತೋಷ ಮತ್ತು ಸಮೃದ್ಧಿಯ ಕೊರತೆ ಇರುತ್ತದೆ.
ಯಾವುದೇ ರೀತಿಯ ವಾಸ್ತು ದೋಷವಿಲ್ಲದ ಮನೆಗಳಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದ ಯಾವಾಗಲೂ ಇರುತ್ತದೆ. ಇನ್ನು ವಾಸ್ತು ಶಾಸ್ತ್ರದಲ್ಲಿನ ನಿರ್ದೇಶನಗಳ ಹೊರತಾಗಿ, ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಕೆಲ ವಸ್ತುಗಳನ್ನು ಯಾವತ್ತೂ ಖಾಲಿಯಾಗಲು ಬಿಡಬಾರದು. ಹೀಗೆ ಮಾಡಿದರೆ, ಪ್ರಗತಿಗೆ ಅಡ್ಡಿಯಾಗುತ್ತದೆ ಎಂಬುದು ನಂಬಿಕೆ.
ಪರ್ಸ್ʼನಲ್ಲಿ ಯಾವಾಗಲೂ ತುಂಬಾ ಹಣ ಇರಬೇಕು ಎಂಬುದು ಅನೇಕರ ಆಸೆ. ವಾಸ್ತು ಪ್ರಕಾರ, ಪರ್ಸ್ ಅನ್ನು ಖಾಲಿ ಇಡಬಾರದು. ಅದರಲ್ಲಿ ಕನಿಷ್ಟ ಒಂದು ರುಪಾಯಿಯನ್ನಾದರೂ ಇಡಬೇಕು. ಪರ್ಸ್ ಖಾಲಿಯಾಗಿದ್ದರೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ಹಣವಲ್ಲದಿದ್ದರೂ, ಗೋಮತಿ ಚಕ್ರ, ಅರಿಶಿನ ಇತ್ಯಾದಿಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತಿಜೋರಿಯಲ್ಲಿ ಇಡಬೇಕು. ವಾಸ್ತುವಿನ ಈ ಪರಿಹಾರದಿಂದ ತಾಯಿ ಲಕ್ಷ್ಮಿ ಯಾವಾಗಲೂ ಸಂತೋಷಪಡುತ್ತಾಳೆ.
ಮನೆಗೆ ಪೂಜಾ ಕೋಣೆ ಅತ್ಯಂತ ವಿಶೇಷವಾದ ಭಾಗವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಕೋಣೆಯಲ್ಲಿ ಇಟ್ಟಿರುವ ನೀರಿನ ಪಾತ್ರೆಯಲ್ಲಿ ನೀರು ಖಾಲಿ ಇಡಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಸ್ವಲ್ಪ ನೀರು, ಗಂಗಾಜಲ ಮತ್ತು ತುಳಸಿ ಎಲೆಗಳನ್ನು ಯಾವಾಗಲೂ ನೀರಿನ ಪಾತ್ರೆಯಲ್ಲಿ ಇಡಬೇಕು. ಈ ಪರಿಹಾರದೊಂದಿಗೆ, ದೇವರ ಆಶೀರ್ವಾದವು ನಿಮ್ಮ ಮನೆ ಮತ್ತು ಸದಸ್ಯರ ಮೇಲೆ ಯಾವಾಗಲೂ ಇರುತ್ತದೆ. ಇದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಖಾಲಿ ಬಕೆಟ್ ಅನ್ನು ಬಾತ್ ರೂಂನಲ್ಲಿ ಇಡಬಾರದು. ಬಾತ್ ರೂಂನಲ್ಲಿ ಇಟ್ಟಿರುವ ಬಕೆಟ್ʼನಲ್ಲಿ ನೀರು ತುಂಬದೇ ಇದ್ದರೆ, ನಕಾರಾತ್ಮಕ ಶಕ್ತಿಗಳು ಬಹುಬೇಗನೆ ಮನೆಗೆ ನುಗ್ಗುತ್ತವೆ. ಇದರ ಹೊರತಾಗಿ, ಬಾತ್ರೂಮ್ನಲ್ಲಿ ಕಪ್ಪು ಅಥವಾ ಮುರಿದ ಬಕೆಟ್ ಅನ್ನು ಎಂದಿಗೂ ಬಳಸಬಾರದು. ಈ ರೀತಿ ಮಾಡುವುದರಿಂದ ಆರ್ಥಿಕ ಸಮಸ್ಯೆಗಳ ಜೊತೆಗೆ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುತ್ತವೆ.
ಅಡುಗೆ ಮನೆಯಲ್ಲಿ ಯಾವತ್ತೂ ಸಹ ಅಕ್ಕಿ, ಉಪ್ಪು ಮತ್ತು ಅರಶಿಣ ಖಾಲಿಯಾಗಬಾರದು. ಇವು ಖಾಲಿಯಾದರೆ ಸಾಲವಾಗುತ್ತದೆ ಎಂದು ಹೇಳಲಾಗುತ್ತದೆ, ಇನ್ನು ವಾಸ್ತು ಪ್ರಕಾರ ಮನೆಗಳಲ್ಲಿ, ಆಹಾರದ ಪಾತ್ರೆ ಯಾವಾಗಲೂ ತುಂಬಿರಬೇಕು. ಇದು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.