ಈ ವಸ್ತುಗಳನ್ನು ಎಂದಿಗೂ ಖಾಲಿ ಇಡಲೇ ಬೇಡಿ !ದರಿದ್ರ ಲಕ್ಷ್ಮೀ ವಕ್ಕರಿಸಿ ಬಿಡುತ್ತಾಳೆ !ಮನೆಗಳಲ್ಲಿ ಇದನ್ನು ಖಾಲಿ ಬಿಡುವುದೇ ಹೆಚ್ಚು !ನೀವೂ ಒಮ್ಮೆ ಚೆಕ್ ಮಾಡಿಕೊಳ್ಳಿ
ಹೊಸ ವರ್ಷದಿಂದಲಾದರೂ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಇರಬೇಕು ಎಂದು ಬಯಸುವುದಾದರೆ ಕೆಲವು ವಾಸ್ತು ನಿಯಮಗಳನ್ನು ಅನುಸರಿಸಬೇಕು. ಅದರ ಪ್ರಕಾರ ಮನೆಯಲ್ಲಿರುವ ಐದು ವಸ್ತುಗಳನ್ನು ಎಂದಿಗೂ ಖಾಲಿ ಇಡಲೇ ಬಾರದು.
ತಿಜೋರಿಯನ್ನು ಎಂದಿಗೂ ಖಾಲಿ ಇಡಬೇಡಿ. ಅದರಲ್ಲಿ ಅಲ್ಪ ಪ್ರಮಾಣದ ಹಣ ಅಥವಾ ಒಂದು ಸಣ್ಣ ತುಂಡಾದರೂ ಬಂಗಾರದ ಒಡವೆ ಇಡಲೇ ಬೇಕು. ಶಂಖ, ಕವಡೆ ಅಥವಾ ಗೋಮತಿ ಚಕ್ರವನ್ನು ಸಹ ಅದರಲ್ಲಿ ಇಡಬಹುದು.
ಮನೆಯ ಕೋಣೆಯಲ್ಲಿ ಅಥವಾ ದೇವರ ಮಂಟಪದಲ್ಲಿ ಇಡುವ ನೀರಿನ ಚೊಂಬು ಯಾವತ್ತೂ ಖಾಲಿ ಇರಲೇಬಾರದು. ಮನುಷ್ಯರಂತೆ ದೇವರಿಗೂ ಕಾಲಕಾಲಕ್ಕೆ ಬಾಯಾರಿಕೆಯಾಗುತ್ತದೆ ಎನ್ನುವುದು ನಂಬಿಕೆ.ಪ್ರತಿ ದಿನ ಪೂಜೆ ಮಾಡಿದ ನಂತರ ತುಳಸಿ ಎಲೆ ಸೇರಿಸಿ ಮಂಟಪದ ಮುಂದೆ ನೀರು ಇಡಲೇ ಬೇಕು.
ಮನೆಯಲ್ಲಿ ಅಕ್ಕಿ ಡಬ್ಬ ಪೂರ್ತಿಯಾಗಿ ಖಾಲಿಯಾಗಲು ಬಿಡಬಾರದು. ಖಾಲಿಯಾಗುವ ಮುನ್ನವೇ ಅದಕ್ಕೆ ಅಕ್ಕಿ ತುಂಬಿಸಬೇಕು. ಡಬ್ಬ ಪೂರ್ತಿ ತುಂಬಿರಲೇ ಬೇಕು ಎಂದೇನಿಲ್ಲ, ಆದರೆ ಸಂಪೂರ್ಣ ಬರಿದಾಗಬಾರದು.
ಮನೆಯ ಬಾತ್ ರೂಂನಲ್ಲಿರುವ ಸ್ನಾನದ ಬಕೆಟ್ ಅನ್ನು ತಪ್ಪಿಯೂ ಖಾಲಿ ಇಡಬಾರದು.ಖಾಲಿ ಬಕೆಟ್ ಯಾವಾಗಲೂ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಅದರಲ್ಲಿ ಸ್ವಲ್ಪವಾದರೂ ನೀರು ಇಟ್ಟಿರಬೇಕು. ಬಾತ್ ರೂಂನಲ್ಲಿ ನೀಲಿ ಬಣ್ಣದ ಬಕೆಟ್ ಇಡುವುದು ಶುಭ.
ಪರ್ಸ್ ಅನ್ನು ಎಂದಿಗೂ ಖಾಲಿ ಬಿಡಬೇಡಿ.ವಾಸ್ತು ಶಾಸ್ತ್ರದ ಪ್ರಕಾರ, ಖಾಲಿ ಪರ್ಸ್ ಬಡತನ ಮತ್ತು ಒತ್ತಡವನ್ನು ತರುತ್ತದೆ. ಇದರಿಂದಾಗಿ ಜೀವನದಲ್ಲಿ ಮುಂದೆ ಸಾಗುವ ಬದಲು ಮನುಷ್ಯ ಹಿಮ್ಮೆಟ್ಟಲು ಆರಂಭಿಸುತ್ತಾನೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.