ಮನೆಯ ಈ ಜಾಗದಲ್ಲಿ ಚಪ್ಪಲಿ ಬಿಟ್ಟರೆ ಎದುರಾಗುವುದು ಕಷ್ಟಗಳ ಸರಮಾಲೆ!ಸಾಲದ ಮೇಲೆ ಸಾಲ ಬೆಳೆಯುತ್ತಲೇ ಹೋಗುವುದು!ತಪ್ಪಿದ್ದಲ್ಲ ನಿತ್ಯದ ಜಗಳ ಮನಸ್ತಾಪ
ಮನೆಯಲ್ಲಿ ಎಲ್ಲಿ ಬೇಕೋ ಅಲ್ಲಿ ಶೂ ಚಪ್ಪಲಿಗಳನ್ನು ಬಿಡುವಂತಿಲ್ಲ. ಚಪ್ಪಲಿ ಬಿಡುವುದಕ್ಕೂ ಸರಿಯಾದ ಜಾಗ ದಿಕ್ಕು ಎನ್ನುವುದಿದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮಲಗುವ ಕೋಣೆಯಲ್ಲಿ ಶೂ ಮತ್ತು ಚಪ್ಪಲಿ ಇಡಬಾರದು.ಇದರಿಂದ ವೈವಾಹಿಕ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗಂಡ ಹೆಂಡತಿ ಮಧ್ಯೆ ಸಣ್ಣ ಪುಟ್ಟ ವಿಷಯಗಳಿಗೂ ದೊಡ್ಡ ಜಗಳ ಉಂಟಾಗುತ್ತದೆ.
ತಪ್ಪಿಯೂ ತುಳಸಿ ಗಿಡದ ಬಳಿ ಶೂ ಮತ್ತು ಚಪ್ಪಲಿಗಳನ್ನು ಬಿಡಬಾರದು.ಇದು ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ನಕಾರಾತ್ಮಕತೆಯ ಹರಡುವಿಕೆಗೆ ಕಾರಣವಾಗಬಹುದು.
ಹಿಂದೂ ಧರ್ಮದಲ್ಲಿ, ಬೆಂಕಿ ಮತ್ತು ಆಹಾರ ಎರಡಕ್ಕೂ ವಿಶೇಷ ಸ್ಥಾನಮಾನವಿದೆ. ಹಾಗಾಗಿ ಮನೆಯ ಅಡುಗೆ ಮನೆಯಲ್ಲಿ ಶೂ,ಚಪ್ಪಲಿ ಬಿಡಬಾರದು.
ಹಿಂದೂ ಧರ್ಮದಲ್ಲಿ, ಈಶಾನ್ಯವನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ.ಈ ದಿಕ್ಕಿನಲ್ಲಿ ಬೂಟುಗಳು ಮತ್ತು ಚಪ್ಪಲಿಗಳನ್ನು ಇಡುವುದು ಅಶುಭ. ಇದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದಲ್ಲಿ ಶೂ ಮತ್ತು ಚಪ್ಪಲಿ ಇಡಬಾರದು.ಇದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು.ಇಲ್ಲಿ ಶೂ ಮತ್ತು ಚಪ್ಪಲಿ ಇಡುವುದರಿಂದ ಆರ್ಥಿಕ ತೊಂದರೆ ಉಂಟಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ZEE NEWS ಅದನ್ನು ಖಚಿತಪಡಿಸುವುದಿಲ್ಲ.