ಜೀವನದಲ್ಲಿ ಹಣಕಾಸಿಗೆ ಸಂಬಂಧಿಸಿದ ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿ

Tue, 05 Sep 2023-1:42 pm,

ದುಡಿಯುವ ಸಮಯದಲ್ಲಿಯೇ ನಿವೃತ್ತಿ ಬದುಕಿನ ಬಗ್ಗೆ ಯೋಚಿಸಿ, ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ. ಒಂದೊಮ್ಮೆ ನೀವು ಕೆಲಸ ಮಾಡುವಾಗ ನಿಮ್ಮ ನಿವೃತ್ತಿಗಾಗಿ ಯೋಜಿಸದಿದ್ದರೆ, ಭವಿಷ್ಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಹಿಂದೆಲ್ಲಾ ಹಿರಿಯರು ತಿಪ್ಪೆಗೆ ಎಸೆದರೂ ಲೆಕ್ಕವಿಡುವಂತೆ ಸಲಹೆ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆದಾಯ ಹೆಚ್ಚಾದಂತೆ ಖರ್ಚುಗಳು ಕೂಡ ಹೆಚ್ಚಾಗುತ್ತಿವೆ. ಆದರೆ, ನೀವು ನಿಮ್ಮ ಮನೆಯ ಖರ್ಚನ್ನು ನಿರ್ವಹಿಸಲು ಮಾತ್ರವಲ್ಲ ನಿಮ್ಮ ವೈಯಕ್ತಿಕ ಖರ್ಚುಗಳನ್ನು ನಿರ್ವಹಿಸಲು ಕೂಡ ಬಜೆಟ್ ರೂಪಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ, ಮಿತಿ ಮೀರಿದ ಖರ್ಚು ನಿಮ್ಮನ್ನು ಹಣಕಾಸಿನ ಸಂಕಷ್ಟಕ್ಕೆ ಸಿಲುಕಿಸಬಹುದು. 

ಕೆಲವರು ಪ್ರಸ್ತುತ ಹಣ ಉಳಿತಾಯದ ದೃಷ್ಟಿಯಿಂದ ವಿಮೆಗಳಲ್ಲಿ ಹೂಡಿಕೆಯನ್ನು ತಪ್ಪಿಸುತ್ತಾರೆ. ಆದರೆ, ಪ್ರತಿಯೊಬ್ಬರೂ ಕೂಡ ಭವಿಷ್ಯದ ಸುರಕ್ಷತೆಯ ದೃಷ್ಟಿಯಿಂದ ಜೀವ ವಿಮೆ ಮತ್ತು ಆರೋಗ್ಯ ವಿಮೆಗಳಂತಹ ವಿಮಾ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಕೂಡ ತುಂಬಾ ಅಗತ್ಯ. ವಿಮೆಯನ್ನು ಪಡೆಯುವ ಮೂಲಕ, ನೀವು ಜೀವನದಲ್ಲಿ ಹಠಾತ್ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುತ್ತೀರಿ. 

ಸದ್ಯದ ಹಣಕಾಸಿನ ಆವಶ್ಯಕತೆಗಳನ್ನು ಪೂರೈಸಲು ಹಲವರು  ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಬೇರೆಯವರಿಂದ ಸಾಲ ಪಡೆಯುವುದಕ್ಕಿಂತ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದು ಒಂದರ್ಥದಲ್ಲಿ ಒಳ್ಳೆಯದೇ. ಇದರಲ್ಲಿ ನೀವು ಕ್ಯಾಶ್‌ಬ್ಯಾಕ್ ಸೇರಿದಂತೆ ಇತರ ಪ್ರಯೋಜನಗಳ ಜೊತೆಗೆ 40-50 ದಿನಗಳವರೆಗೆ ಹಣವನ್ನು ಬಡ್ಡಿರಹಿತವಾಗಿ ಬಳಸುವ ಆಯ್ಕೆಯನ್ನು ಪಡೆಯುತ್ತೀರಿ. ಆದರೆ ನೀವು ನಿಗದಿತ ಸಮಯದಲ್ಲಿ ಬಿಲ್ ಪಾವತಿಸದಿದ್ದರೆ ಹಣಕಾಸಿನ ಸಮಸ್ಯೆಗಳು ಹೆಚ್ಚಾಗುತ್ತವೆ. 

ನೀವು ತಿಂಗಳಿಗೆ ಎಷ್ಟೇ ಹಣ ಸಂಪಾದಿಸಿದರೂ ಕೂಡ ಉಳಿತಾಯ ಮಾಡದಿದ್ದರೆ ಭವಿಷ್ಯದಲ್ಲಿ, ವಯಸ್ಸಾದ ಕಾಲದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸೀಳುಕುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ, ಎಂದಿಗೂ ಕೂಡ ಉಳಿತಾಯವನ್ನು ನಿರ್ಲಕ್ಷಿಸಬೇಡಿ. ಆರ್ಥಿಕ ತಜ್ಞರ ಪ್ರಕಾರ, ಪ್ರತಿ ತಿಂಗಳು ನಿಮ್ಮ ಸಂಬಳದ ಕನಿಷ್ಠ 20% ಉಳಿಸಬೇಕು ಎಂದು ಹೇಳಲಾಗುತ್ತದೆ. ವೃದ್ದಾಪ್ಯದಲ್ಲಿ ಒತ್ತಡ ಮುಕ್ತ ಜೀವನವನ್ನು ನಡೆಸಲು ನಿಮ್ಮ ಆದಾಯದ ಒಂದು ಭಾಗವನ್ನು ತಪ್ಪದೇ ಉಳಿತಾಯ ಮಾಡಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link