Vastu Shastra: ಕಿಚನ್ ಸಿಂಕ್‌ಗೆ ಸಂಬಂಧಿಸಿದಂತೆ ಎಂದೂ ಈ ತಪ್ಪುಗಳನ್ನು ಮಾಡಬೇಡಿ!

Mon, 20 May 2024-2:10 pm,

ಮನೆಯ ಇತರ ಭಾಗಗಳಂತೆ ಅಡುಗೆ ಮನೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದು ಅಗತ್ಯ. ಇಲ್ಲದಿದ್ದರೆ, ಅಡುಗೆ ಮನೆಯ ವಾಸ್ತು ದೋಷವು ಮನೆಯ ಸದಸ್ಯರಿಗೆ ತೊಂದರೆ ಉಂಟು ಮಾಡಬಹುದು. ಅದರಲ್ಲೂ, ಅಡುಗೆ ಮನೆಯಲ್ಲಿ ಸಿಂಕ್‌ಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನಿರ್ಲಕ್ಷಿಸುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಅವುಗಳೆಂದರೆ... 

ಅಡುಗೆ ಮನೆಯಲ್ಲಿ ಸಿಂಕ್ ಈಶಾನ್ಯ ದಿಕ್ಕಿನಲ್ಲಿ ಇರಬೇಕು. ಇದರಿಂದ ಮನೆಯಲ್ಲಿ ಸುಖ-ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ನೇರವಾಗಿ ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಅಡುಗೆ ಮನೆ ಸಿಂಕ್ ಇರಬಾರದು. ಇದನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ. 

ವಾಸ್ತು ಶಾಸ್ತ್ರದ ಪ್ರಕಾರ, ಅಪ್ಪಿತಪ್ಪಿಯೂ ಸಹ ಮನೆಯ ನೈರುತ್ಯ ದಿಕ್ಕಿನಲ್ಲಿ ಅಡುಗೆ ಮನೆ ಸಿಂಕ್ ಅಳವಡಿಸಬಾರದು. ಇದು ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. 

ಅಡುಗೆ ಮನೆ ಸಿಂಕ್ ಕೆಳಗೆ ಅಥವಾ ಸಿಂಕ್ ಅಕ್ಕಪಕ್ಕದಲ್ಲಿ ಕಸವನ್ನು ಹಾಕಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ಸಿಂಕ್ ನಲ್ಲಿಯಲ್ಲಿ ಯಾವಾಗಲೂ ನಲ್ಲಿ ನೀರು ಜಿನುಗುತ್ತಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಇದರಿಂದ ಮನೆಯಲ್ಲಿ ಹಣಕಾಸಿನ ಬಿಕ್ಕಟ್ಟು ತಲೆದೂರಬಹುದು. 

ಕಿಚನ್ ಸಿಂಕ್‌ನಲ್ಲಿ ಕೈ ತೊಳೆಯಬಾರದು. ಇದು ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿನಾಮ ಬೀರಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link