ಮದ್ಯ ಪ್ರಿಯರಿಗೆ ಭರ್ಜರಿ ಎಣ್ಣೆ ಭಾಗ್ಯ !ಇಂದಿನಿಂದ ಚಿಲ್ಲರೆ ಹಣಕ್ಕೆ ಸಿಗಲಿದೆ ದುಬಾರಿ ಮದ್ಯ !ಕೇವಲ 99 ರೂ.ಗೆ ಬ್ರಾಂಡೆಡ್ ಕಾಸ್ಟ್ಲಿ ಲಿಕ್ಕರ್ !

Tue, 01 Oct 2024-9:46 am,

ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಮುಖ್ಯಮಂತ್ರಿಗಳು ಕೊನೆಗೂ ಈಡೇರಿಸಿದ್ದಾರೆ. ಆ ಪ್ರಕಾರ ಇಂದಿನಿಂದ ಹೊಸ ಮದ್ಯ ನೀತಿ ಜಾರಿಯಾಗಿದೆ.

ಹೊಸ ನೀತಿಯ ಪ್ರಕಾರ ಇಂದಿನಿಂದ ಗುಣಮಟ್ಟದ ಮದ್ಯದ ಬ್ರ್ಯಾಂಡ್‌ʼಗಳು ಅಗ್ಗದ ದರಕ್ಕೆ ಲಭ್ಯವಾಗಲಿದೆ. ದುಬಾರಿ ಲಿಕ್ಕರ್ ಗಳು ಈಗ ಅಗ್ಗದ ಬೆಲೆಗೆ ಮದ್ಯಪ್ರಿಯರಿಗೆ ಸಿಗಲಿದೆ.   

18 0ಮಿಲಿಯ ಮದ್ಯದ ಬಾಟಲಿ ಯ ಬೆಲೆ ಈಗ 99 ರೂ.ಗೆ ಲಭ್ಯವಿರಲಿದೆ. ಕಳಪೆ ಗುಣಮಟ್ಟದ ಮದ್ಯ ಸಿಗುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪರಿಷ್ಕೃತ ಮದ್ಯ ನೀತಿಗೆ ಅನುಮೋದನೆ ನೀಡಿದ್ದು, ಇಂದಿನಿಂದ ಹೊಸ ನೀತಿ ಜಾರಿಯಾಗಿದೆ.      

ಹೊಸ ಮದ್ಯ ನೀತಿಯಿಂದ ಮದ್ಯ ಪ್ರಿಯರ ಸಂತಸಕ್ಕೆ ಪಾರವೇ ಇಲ್ಲವಾಗಿದೆ. ಇನ್ನು ಮುಂದೆ ಕಾಸ್ಟ್ಲಿ ಲಿಕ್ಕರ್ ಚಿಲ್ಲರೆ ಬೆಲೆಗೆ ಲಭ್ಯವಾಗಲಿದೆ.

ಆಂಧ್ರಪ್ರದೇಶದಲ್ಲಿ ಗುಣಮಟ್ಟದ ಮದ್ಯದ ಬ್ರ್ಯಾಂಡ್‌ʼಗಳು ಲಭ್ಯವಾಗುವಂತೆ ಮಾಡಲು ಚಂದ್ರ ಬಾಬು ನಾಯ್ಡು ಸರ್ಕಾರ  ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.   

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಕೆ ಪಾರ್ಥಸಾರಥಿ ಅವರ ಪ್ರಕಾರ, ಆಂಧ್ರಪ್ರದೇಶದಲ್ಲಿ ಪ್ರಸ್ತುತ 3,736 ಚಿಲ್ಲರೆ ಮಾರಾಟ ಮಳಿಗೆಗಳಿವೆ.ಹೊಸ ವ್ಯವಸ್ಥೆಯಲ್ಲಿ, ಈ ಪರವಾನಗಿಗಳಲ್ಲಿ ಶೇ 10 ರಷ್ಟು ಲೈಸೆನ್ಸ್‌ಗಳನ್ನು ಟಾಡಿ-ಟ್ಯಾಪಿಂಗ್ ಸಮುದಾಯಕ್ಕೆ ಮೀಸಲಿಡಲಾಗುವುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link