ಮದ್ಯಪ್ರಿಯರಿಗೆ ಸಿಹಿಸುದ್ದಿ..! ಎಣ್ಣೆ ರೇಟ್‌ ಫುಲ್‌ ಕಮ್ಮಿ.. ಬಿಯರ್‌ ಅಂತೂ ನೀರು ಸಿಕ್ಕಂತೆ ಸಿಗುತ್ತೆ..

Wed, 11 Sep 2024-7:30 pm,

ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ಮದ್ಯದ ನೀತಿ ರೂಪಿಸುವ ಕುರಿತು ರಚಿಸಲಾದ ಎಪಿ ಕ್ಯಾಬಿನೆಟ್ ಉಪ ಸಮಿತಿಯು ಪ್ರಮುಖ ವಿಷಯವನ್ನು ಬಹಿರಂಗಪಡಿಸಿದೆ.  

ಅಬಕಾರಿ ಸಚಿವ ಕೊಳ್ಳು ರವೀಂದ್ರ ನೇತೃತ್ವದಲ್ಲಿ ನೂತನ ಮದ್ಯ ನೀತಿ ರೂಪಿಸುವ ಕುರಿತು ಸಚಿವರ ಉಪ ಸಮಿತಿ ಸಭೆ ನಡೆಯಿತು.. ಸಚಿವರಾದ ನಾದೆಂದ್ಲ ಮನೋಹರ್, ಕೊಲ್ಲು ರವೀಂದ್ರ, ಸತ್ಯಕುಮಾರ್ ಯಾದವ್, ಕೊಂಡಪಲ್ಲಿ ಶ್ರೀನಿವಾಸ್, ಗೊಟ್ಟಿಪಾಟಿ ರವಿ ಭಾಗವಹಿಸಿದ್ದರು.  

ಪ್ರಸ್ತುತ 6 ರಾಜ್ಯಗಳಲ್ಲಿ ಜಾರಿಯಲ್ಲಿರುವ ಮದ್ಯ ನೀತಿಯ ಕುರಿತು ಅಧಿಕಾರಿಗಳು ನೀಡಿರುವ ವರದಿಯನ್ನು ಸಚಿವರು ಪರಿಶೀಲಿಸಿದರು. ಸದ್ಯದಲ್ಲೇ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.  

ಸಚಿವರ ಉಪ ಸಮಿತಿಯು ಪ್ರಸ್ತುತ ವಿವಿಧ ರಾಜ್ಯಗಳಲ್ಲಿನ ಬಾರ್‌ಗಳು, ಮದ್ಯದ ಅಂಗಡಿಗಳು ಮತ್ತು ಪಾನೀಯ ಕಂಪನಿಗಳು ಅನುಸರಿಸುತ್ತಿರುವ ಕಾರ್ಯವಿಧಾನಗಳನ್ನು ಪರಿಶೀಲಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.  

ಪ್ರಸ್ತುತ ಇರುವ ಮದ್ಯದ ನೀತಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ಹೊಸ ಮದ್ಯ ನೀತಿಯನ್ನು ಸರ್ಕಾರ ತರಲಿದೆ ಎನ್ನಲಾಗಿದೆ.  

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್ ಇಬಿ (ವಿಶೇಷ ಜಾರಿ ಬ್ಯೂರೊ) ರದ್ದುಪಡಿಸುವ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲೇ ಹೊಸ ನೀತಿಯನ್ನು ಪರಿಚಯಿಸಲಾಗುವುದು.  

ನೆರೆಯ ರಾಜ್ಯಗಳಲ್ಲಿ ಮದ್ಯ ನೀತಿಯಂತೆ ಈಗಿರುವ ದರಕ್ಕಿಂತ ಸ್ವಲ್ಪ ಕಡಿಮೆ ಬೆಲೆಗೆ ರಾಜ್ಯದಲ್ಲಿ ಮದ್ಯ ಮಾರಾಟ ಮಾಡಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ವರದಿಯಾಗಿದೆ.  

ಸದ್ಯ ರಾಜ್ಯದಲ್ಲಿ ಬಿಯರ್ ಬೆಲೆ 200ರಿಂದ 220 ರೂ. ಇದೆ.. ಹೊಸ ಮದ್ಯ ನೀತಿ ಜಾರಿಯಾದರೆ ಬಿಯರ್ ಬೆಲೆ ರೂ.130ರಿಂದ ರೂ.150ರವರೆಗೂ ಇರಬಹುದೆಂಬ ಚರ್ಚೆ ನಡೆಯುತ್ತಿದೆ.  

ಹಿಂದಿನ ಸರ್ಕಾರ ಕಳಪೆ ಗುಣಮಟ್ಟದ ಮದ್ಯದಿಂದ ಜನರ ಆರೋಗ್ಯದ ಜೊತೆ ಆಟವಾಡಿದೆ ಎಂದು ಸಚಿವ ಕೊಳ್ಳು ರವೀಂದ್ರ ಆರೋಪಿಸಿದರು.  

ಆದ್ರೆ ಈ ಸುದ್ದಿ ಆಂಧ್ರ ಪ್ರದೇಶದ ಮದ್ಯ ಪ್ರಿಯರಿಗೆ ಖುಷಿ ಕರ್ನಾಟಕದಲ್ಲಿ ಇನ್ನೂ ಎಣ್ಣೆ ರೇಟ್‌ ಕಡಿಮೆ ಮಾಡುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.. ನಿಮ್ಮ ಅದೃಷ್ಟ ಚನ್ನಾಗಿದ್ರೆ ಮುಂದೆ ನೋಡೋಣ.. ಬಿಡಿ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link