ಹೊಸ ನಿಯಮದಂತೆಯೇ ಸರ್ಕಾರಿ ನೌಕರರ ವೇತನ ಹೆಚ್ಚಳ ! ಮೂಲ ವೇತನ 26 ಸಾವಿರಕ್ಕೆ ಏರಿಕೆ
7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಇನ್ನು ಕೆಲವೇ ತಿಂಗಳುಗಳಲ್ಲಿ ಹೊಸ ವೇತನ ಆಯೋಇಗ ಜಾರಿಯಾಗಬೇಕು. ಅಥವಾ ವೇತನ ನಿಯಮದಲ್ಲಿ ಬದಲಾವಣೆಯಾಗಬೇಕು. 8ನೇ ವೇತನ ಆಯೋಗವೇ ರಚನೆಯಾಗಲಿದೆ ಎನ್ನುವ ಮಾತು ಭಾರೀ ಜೋರಾಗಿ ಕೇಳಿ ಬರುತ್ತಿದೆ.
ಮುಂದಿನ ವರ್ಷದ ಅಂದರೆ 2024 ರ ಜನವರಿಯಲ್ಲಿಯೇ 8ನೇ ವೇತನ ಆಯೋಗದ ಘೋಷಣೆಯಾಗಲಿದೆ ಎನ್ನಲಾಗಿದೆ. ಇದೀಗ ಜುಲೈ ತುಟ್ಟಿಭತ್ಯೆ ಹೆಚ್ಚಳವಾಗಿದ್ದು, ಮುಂದಿನ ಡಿಎ ಜನವರಿ 2024 ರಲ್ಲಿ ಏರಿಕೆಯಾಗಬೇಕಿದೆ.
ಜನವರಿಯಲ್ಲಿ ಡಿಎ ಶೇಕಡಾ 4 ರಷ್ಟು ಹೆಚ್ಚಿದರೆ, ಒಟ್ಟು ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪುತ್ತದೆ. ಹೀಗಾದರೆ ವೇತನ ಪರಿಷ್ಕರಣೆ ಮಾಡಬೇಕು. ವೇತನವನ್ನು ಪರಿಷ್ಕರಿಸಲು ಹೊಸ ವೇತನ ಆಯೋಗ ರಚನೆಯಾಗಬೇಕು ಅಥವಾ ವೇತನ ನಿಯಮದಲ್ಲಿ ಬದಲಾವಣೆಯಾಗಬೇಕು.
ವರದಿಗಳ ಪ್ರಕಾರ, 8 ನೇ ವೇತನ ಆಯೋಗ ಜಾರಿಯಾದಲ್ಲಿ ಪ್ರತಿ ವರ್ಷ ವೇತನವನ್ನು ಪರಿಷ್ಕರಣೆಯಾಗುತ್ತದೆ. ಪ್ರಸ್ತುತ, ಪ್ರತಿ 10 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತದೆ.
8 ನೇ ವೇತನ ಆಯೋಗದ ಪ್ರಕಾರ ಉದ್ಯೋಗಿಗಳ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗಬಹುದು. ಅಂದರೆ ನೌಕರರ ಕನಿಷ್ಠ ವೇತನ ಶೇ.44.44ರಷ್ಟು ಏರಿಕೆಯಾಗುತ್ತದೆ ಎನ್ನಲಾಗಿದೆ. ಈ ಪ್ರಕಾರ ಮೂಲ ವೇತನ 18 ಸಾವಿರದಿಂದ 26 ಸಾವಿರಕ್ಕೆ ಹೆಚ್ಚಾಗುತ್ತದೆ.