ವಿರಾಟ್ ಶತಕದ ಮೊದಲ ಬಾಲ್ ವೈಡ್ ಕೊಡಲಿಲ್ಲ ಯಾಕೆ ಗೊತ್ತಾ? 2 ದಿನದ ಬಳಿಕ ಹೊರಬಿತ್ತು ಅಸಲಿ ಕಾರಣ!
2019 ರಲ್ಲಿ, ವಿರಾಟ್ ಹಲವಾರು ಬಾರಿ 50 ರನ್ ದಾಟಿದ್ದರೂ ಸಹ ಶತಕ ತಲುಪಲು ಸಾಧ್ಯವಾಗಿರಲಿಲ್ಲ. ಈಗ ವಿರಾಟ್ ವಿಶ್ವಕಪ್ 2023ರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆದರೆ ಅವರ ಶತಕದ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ವಿರಾಟ್ ಶತಕದ ಮುನ್ನ ಅಂಪೈರ್ ರಿಚರ್ಡ್ ಕೆಟಲ್‌ಬರೋ ಲೆಗ್ ಸ್ಟಂಪ್’ನ ಹೊರಗೆ ಹೋಗುತ್ತಿದ್ದ ಬಾಲ್’ಗೆ ವೈಡ್ ನೀಡದಿರುವುದು.
ವಿರಾಟ್ ಕೊಹ್ಲಿ 97 ರನ್ ಗಳಿಸಿ ಆಡುತ್ತಿದ್ದರು. ಭಾರತಕ್ಕೆ ಗೆಲುವಿಗೆ 2 ರನ್’ಗಳ ಅಗತ್ಯವಿತ್ತು. ಶತಕ ಗಳಿಸಲು ಮೂರು ರನ್’ಗಳ ಅಗತ್ಯವಿತ್ತು. ಎಡಗೈ ಸ್ಪಿನ್ನರ್ ನಸುಮ್ ಅಹ್ಮದ್ ಅವರು ವಿರಾಟ್ ಕೊಹ್ಲಿ ವಿರುದ್ಧ ಲೆಗ್ ಸ್ಟಂಪ್ ಹೊರಗೆ ಚೆಂಡನ್ನು ಬೌಲ್ಡ್ ಮಾಡಿದರು. ವಿರಾಟ್ ನಿರಾಶೆಗೊಂಡರು. ಆದರೆ ಅಂಪೈರ್ ರಿಚರ್ಡ್ ಕೆಟಲ್‌ಬರೋ ಅದನ್ನು ವೈಡ್ ಎಂದು ಘೋಷಿಸಲಿಲ್ಲ. ಎರಡು ಎಸೆತಗಳ ನಂತರ ವಿರಾಟ್ ಸಿಕ್ಸರ್ ಬಾರಿಸುವ ಮೂಲಕ ಏಕದಿನದಲ್ಲಿ 48ನೇ ಶತಕ ಪೂರೈಸಿ ಭಾರತಕ್ಕೆ ಜಯವನ್ನೂ ತಂದುಕೊಟ್ಟರು.
ವಿರಾಟ್ ಕೊಹ್ಲಿ ಶತಕ ಗಳಿಸಲು ಕೆಟಲ್‌ಬರೋ ಬಾಲ್ ವೈಡ್ ನೀಡಲಿಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಇದರಿಂದಾಗಿ ಅಂಪೈರ್ ಟೀಕೆ ಎದುರಿಸುತ್ತಿದ್ದಾರೆ. ಆದರೆ, 2022 ರಲ್ಲಿ ಕ್ರಿಕೆಟ್ ನಿಯಮಗಳಲ್ಲಿ ಮಾಡಿದ ಬದಲಾವಣೆಗಳು ವೈಡ್ ನೀಡದಿರಲು ಪ್ರಮುಖ ಕಾರಣವಾಗಿರಬಹುದು ಎಂಬ ಅಂಶವೂ ಇಲ್ಲಿ ಗಮನಿಸಬೇಕಾದದ್ದು. ಅಂದಹಾಗೆ ಬೌಲರ್’ಗಳಿಗೆ ಸಹಾಯವಾಗಲೆಂದು ಈ ನಿಯಮವನ್ನು ಬದಲಾಯಿಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಅದು ಬ್ಯಾಟ್ಸ್’ಮನ್’ಗೆ ಸಹಾಯ ಮಾಡಿದ್ದು ವಿಶೇಷ.
ವೈಡ್’ಗಳಿಗೆ ಸಂಬಂಧಿಸಿದಂತೆ ಐಸಿಸಿ 2022 ರಲ್ಲಿ ನಿಯಮಗಳನ್ನು ಬದಲಾವಣೆ ತಂದಿದೆ. ಈ ವಿಷಯದ ಬಗ್ಗೆ ಇದುವರೆಗೆ ಅನೇಕರಿಗೆ ತಿಳಿದಿಲ್ಲ.
ಹೊಸ ಐಸಿಸಿ ನಿಯಮಗಳ ಪ್ರಕಾರ, ಚೆಂಡನ್ನು ತಲುಪಿಸುವಾಗ ಬ್ಯಾಟ್ಸ್‌ಮನ್ ನಿಂತಿರುವ ಸ್ಥಳದಿಂದ ಬೌಲರ್ ದೂರದಲ್ಲಿದ್ದರೆ ಚೆಂಡು ವೈಡ್ ಆಗಿರುತ್ತದೆ. ಆದರೆ ಬೌಲರ್ ಚೆಂಡನ್ನು ನೀಡಿದ ನಂತರ ಬ್ಯಾಟ್ಸ್‌ಮನ್ ಚಲಿಸಿದರೆ ಅದು ವೈಡ್ ಆಗುವುದಿಲ್ಲ.
ಆದರೆ ವಿರಾಟ್ ತಮ್ಮ ಸ್ಥಾನವನ್ನು ಬದಲಿಸಿ ದೂರ ಸರಿದಿದ್ದಾರೆ ಎಂದು ನಸುಮ್ ಅಹ್ಮದ್ ಹೇಳಿದ್ದಾರೆ. ಇದೇ ಕಾರಣಕ್ಕೆ ಅಂಪೈರ್ ರಿಚರ್ಡ್ ಕೆಟಲ್‌ಬರೋ ಐಸಿಸಿ ನಿಯಮಗಳ ಪ್ರಕಾರ ವೈಡ್ ನೀಡಿಲ್ಲ.