2025ರಲ್ಲಿ ಈ ರಾಶಿಯವರಿಗೆ ಗುರು ಬಲ: ಕೂಡಿ ಬರಲಿದೆ ಕಂಕಣ ಭಾಗ್ಯ, ಸುಖ ಸಂಪತ್ತಿಗೆ ಕೊರತೆಯೇ ಇಲ್ಲ..!
ಮದುವೆ ಮಾತ್ರವಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಗ್ರಹ ಎಲ್ಲಾ ಶುಭಕಾರ್ಯಗಳ ಸೂಚಕ. ಹಾಗಾಗಿ ನಿಮ್ಮ ಜಾತಕಗಳಲ್ಲಿ ಶುಕ್ರ ಗ್ರಹ ಉತ್ತಮ ಸ್ಥಾನದಲ್ಲಿದ್ದರೆ ಹಾಗು ಗುರು ಗ್ರಹದ ಕೃಪೆ ಇರುವವರಿಗೆ ಮದುವೆ ಯೋಗ ಕೂಡಿಬರುತ್ತದೆ ಎನ್ನಲಾಗುತ್ತದೆ.
2025ರಲ್ಲಿ ಕೆಲವು ರಾಶಿಯವರಿಗೆ ಶುಕ್ರನ ವಿಶೇಷ ಆಶೀರ್ವಾದದ ಜೊತೆಗೆ ಗುರು ಬಲವೂ ಇದೆ. ಈ ಹಿನ್ನೆಲೆಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2025ರಲ್ಲಿ ಕೆಲವು ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಅವರು ಮದುವೆ ಆಗುವುದು ಪಕ್ಕಾ ಎನ್ನಲಾಗುತ್ತದೆ.
ವೃಷಭ ರಾಶಿ: 2025ರ ವರ್ಷ ವೃಷಭ ರಾಶಿಯ ಯುವಕ-ಯುವತಿಯರಿಗೆ ವಿವಾಹವಾಗಲು ಅತ್ಯಂತ ಸೂಕ್ತ ವರ್ಷವಾಗಿದೆ. ಅತ್ಯಂತ ಶುಭದಾಯಕವೂ ಆಗಿದೆ. ದೀರ್ಘ ಕಾಲದಿಂದ ವಧು-ವರನನ್ನು ಹುಡುಕುತ್ತಿರುವ ವೃಷಭ ರಾಶಿಯವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಕಂಕಣ ಭಾಗ್ಯ ಕೂಡಿಬರಲಿದೆ. ಅಲ್ಲದೆ ವೃಷಭ ರಾಶಿಯ ಜನರಿಗೆ ಸುಖ-ಶಾಂತಿ-ಸಮೃದ್ಧಿಗಳನ್ನು ತಂದೊಡ್ಡಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿಯ ಯುವಕ-ಯುವತಿಯರಿಗೆ 2025ರ ಆರಂಭದಲ್ಲಿ ಅತ್ಯಂತ ಒಳ್ಳೆಯ ಕಾಲ. ಈ ಸಂದರ್ಭದಲ್ಲಿ ಕನ್ಯಾ ರಾಶಿಯ ಯುವಕ-ಯುವತಿಯರು ವದು-ವರರನ್ನು ಹುಡುಕಲು ಶುರುಮಾಡಿದರೆ ಕೂಡಲೇ ಕಂಕಣಭಾಗ್ಯ ದೊರೆಯುವ ಸಾಧ್ಯತೆ ಇದೆ. ಕನ್ಯಾ ರಾಶಿಯ ಇತರರು ಬೇರೆ ರೀತಿಯ ಶುಭ ಕಾರ್ಯಗಳನ್ನು ಮಾಡುವುದಕ್ಕೂ ಇದು ಸೂಕ್ತ ಕಾಲವಾಗಿದೆ.
ತುಲಾ ರಾಶಿ: ತುಲಾ ರಾಶಿಯ ಹುಡುಗ-ಹುಡುಗಿಯರಿಗೂ 2025 ಬಹಳ ಒಳ್ಳೆಯ ವರ್ಷ. ತುಲಾ ರಾಶಿಯವರು 2025ರಲ್ಲಿ ಮದುವೆಯಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಪ್ರೀತಿ ಮತ್ತು ಸುಖದಿಂದ ಇರುತ್ತಾರೆ. ಅಲ್ಲದೆ ತುಲಾ ರಾಶಿಗೆ ಸೇರಿದವರು ಬೇರೆ ಯಾವುದೇ ವ್ಯಾಪಾರ-ವ್ಯವಹಾರ ಮಾಡುವುದಕ್ಕೂ 2025 ಪ್ರಾಶಸ್ತ್ಯವಾದ ವರ್ಷವಾಗಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರಿಗೆ ಹೊಸ ವರ್ಷದ ಆರಂಭದಿಂದಲೇ ಶುಭಕಾಲ ಶುರುವಾಗುತ್ತದೆ. ಅವರು ವರ್ಷಪೂರ್ತಿ ವಿವಾಹವೂ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು ಎಲ್ಲವೂ ಕೈಗೂಡುವ ಸಾಧ್ಯತೆ ಇರುತ್ತದೆ. ಹೊಸ ಉದ್ಯಮ-ವ್ಯಾಪಾರ-ವ್ಯವಹಾರ ಆರಂಭಿಸಬಹುದು. ಅದೇ ರೀತಿ ವೃಶ್ಚಿಕ ರಾಶಿಯವರು ಹೊಸ ನೌಕರಿಯನ್ನೂ ಹುಡುಕಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ 2025ನೇ ವರ್ಷ ವಿವಾಹ ಯೋಗವನ್ನು ಕರುಣಿಸಲಿದೆ. ಮೀನಾ ರಾಶಿಯವರಿಗೆ ಮಂಗಳ ಮತ್ತು ಗುರು ಗ್ರಹಗಳ ಕೃಪೆ ದೊರೆಯುವುದರಿಂದ ವಿವಾಹವಾಗಲು ಎಲ್ಲಾ ರೀತಿಯಲ್ಲೂ ಅವಕಾಶಗಳು ಪ್ರಾಪ್ತವಾಗುತ್ತವೆ. ಬಹಳ ದಿನಗಳಿಂದ ಮದುವೆ ಆಗಲು ಪ್ರಯತ್ನಿಸುತ್ತಿರುವವರಿಗೆ 2025ರಲ್ಲಿ ಅದೃಷ್ಟ ಕುಲಾಯಿಸಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.