ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಈ ರಾಶಿಯವರ ಬಾಳಲ್ಲಿ ಹರಿಯುವುದು ಅದೃಷ್ಟದ ಹೊನಲು.! ಸಿಗುವುದು ಭರಪೂರ ಯಶಸ್ಸು
ಮೇಷ ರಾಶಿ :ಮೇಷ ರಾಶಿಯವರ ಸಂಬಂಧಗಳು ಬಲಗೊಳ್ಳಲಿವೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರುವುದು. ಸಂತಾನ ಭಾಗ್ಯ ಕೂಡಾ ಈ ಬಾರಿ ಒದಗಿ ಬರುವುದು. ಈ ಆದಾಯವೂ ಉತ್ತಮವಾಗಿರುತ್ತದೆ. ಆಸ್ತಿಗಳನ್ನು ಖರೀದಿಸಲು ಅವಕಾಶವಿದೆ.
ಮಿಥುನ ರಾಶಿ :ಮಿಥುನ ರಾಶಿಯವರಿಗೆ 2023 ಹೊಸ ಭರವಸೆಯನ್ನೇ ಹೊತ್ತು ತರಲಿದೆ. ಸಾಲದಿಂದ ಮುಕ್ತಿ ಸಿಗಲಿದೆ. ಈ ವರ್ಷ ಮನೆ, ವಾಹನ ಖರೀದಿ ಯೋಗವಿದೆ. ಅದರಲ್ಲೂ ಏಪ್ರಿಲ್ ನಂತರದ ಅವಧಿಯು ಬಹಳ ಮಂಗಳಕರವಾಗಿರುತ್ತದೆ.
ತುಲಾ ರಾಶಿ :ತುಲಾ ರಾಶಿಯವರು 2023 ರಲ್ಲಿ ವರ್ಷ ಪೂರ್ತಿ ಸಂತೋಷದಿಂದ ಇರುತ್ತಾರೆ. ವೃತ್ತಿಜೀವನದಲ್ಲಿ ಮುನ್ನಡೆಯುವ ಅವಕಾಶ ಲಭಿಸುವುದು. ಆರ್ಥಿಕ ಲಾಭವಾಗುವುದು. ಮನೆಯಲ್ಲಿ ಆನಂದಡ ವಾತಾವರನ ಇರುತ್ತದೆ. ಸ್ವಂತ ಮನೆಯ ಆಸೆ ಈಡೇರುವುದು.
ಧನು ರಾಶಿ :2023 ರಲ್ಲಿ, ಧನು ರಾಶಿಯವರು ಮಾಡುವ ಪ್ರತಿ ಕೆಲಸದಲ್ಲಿ ಅದೃಷ್ಟ ಕೈ ಹಿಡಿಯಲಿದೆ. ಹಲವು ವರ್ಷಗಳ ನಂತರ ಈ ವರ್ಷ ನೆಮ್ಮದಿಯ ಬದುಕು ಕಾಣುವಿರಿ. ವ್ಯಾಪಾರದಲ್ಲಿ ಪ್ರಗತಿ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಈ ವರ್ಷ ಭೂಮಿ ಮತ್ತು ಮನೆ ಖರೀದಿಯ ಕನಸು ನನಸಾಗುವುದು.
(ಸೂಚನೆ: ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)