ವಿಶ್ವಕಪ್ ಇತಿಹಾಸದ ಎಲ್ಲಾ ಟೂರ್ನಿ ಆಡಿದ್ರೂ ಒಂದೇ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ ಈ ಏಕೈಕ ತಂಡ: ಯಾವುದು ಗೊತ್ತಾ?
ವಿಶ್ವಕಪ್ 2023ರಲ್ಲಿ ಈ ಬಾರಿ ಒಟ್ಟು 10 ತಂಡಗಳು ಭಾಗವಹಿಸಿದ್ದು, ಟ್ರೋಫಿ ಎತ್ತಿ ಹಿಡಿಯಲು ಪೈಪೋಟಿ ನಡೆಸುತ್ತಿವೆ. ಅಂದಹಾಗೆ ನಾವಿಂದು ಈ ವರದಿಯಲ್ಲಿ ವಿಶ್ವಕಪ್ ಇತಿಹಾಸದ ಎಲ್ಲಾ ಟೂರ್ನಿ ಆಡಿದ್ರೂ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲದ ಏಕೈಕ ಮತ್ತು ಇದುವರೆಗೆ ಟ್ರೋಫಿ ಎತ್ತಿಹಿಡಿಯದ ತಂಡಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕಳೆದ 12 ಏಕದಿನ ವಿಶ್ವಕಪ್’ಗಳಲ್ಲಿ ಒಟ್ಟು 19 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಕೇವಲ ಆರು ತಂಡಗಳು ಮಾತ್ರ ವಿಶ್ವಕಪ್ ಟ್ರೋಫಿ ಗೆದ್ದಿದೆ. ಅವುಗಳೆಂದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್.
ಇನ್ನು ಈ 13 ತಂಡಗಳಲ್ಲಿ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲದ 5 ತಂಡಗಳು ಮಾತ್ರ ಈ ಬಾರಿ ವಿಶ್ವಕಪ್ ಆಡುತ್ತಿವೆ. ಅವುಗಳೆಂದರೆ ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ.
ಅಂದಹಾಗೆ ವಿಶ್ವಕಪ್ ಇತಿಹಾಸದ 12 ಆವೃತ್ತಿಗಳಲ್ಲಿ ಭಾಗವಹಿಸಿದ್ದರೂ ಸಹ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲದ ತಂಡವೆಂದರೆ ನ್ಯೂಜಿಲೆಂಡ್. 9 ಬಾರಿ ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿದ್ದರೂ ಸಹ ಟ್ರೋಫಿ ಎತ್ತಿಹಿಡಿಯುವಲ್ಲಿ ವಿಫಲವಾಗಿದೆ.
ಬಾಂಗ್ಲಾದೇಶವು ಸಹ ಇದೇ ಪರಿಸ್ಥಿಯಿಯಲ್ಲಿದೆ. 1999 ರಿಂದ ಪ್ರತಿ ODI ವಿಶ್ವಕಪ್ ಆಡುತ್ತಿದ್ದರೂ ಸಹ, ಒಮ್ಮೆಯೂ ಸಹ ಫೈನಲ್ ಪ್ರವೇಶ ಮಾಡಿಲ್ಲ.