`ಈ ಮದುವೆ ನನಗೆ ಬೇಸರ ತರಿಸಿದೆ..`- ಕೊನೆಗೂ ಡಿವೋರ್ಸ್‌ ವದಂತಿಗೆ ಕ್ಲಾರಿಟಿ ಕೊಟ್ಟ ಐಶ್ವರ್ಯಾ ರೈ!? ಸೆನ್ಸೇಷನಲ್‌ ಹೇಳಿಕೆ ವೈರಲ್

Mon, 22 Jul 2024-2:55 pm,

ಸದ್ಯ ಸೆಲೆಬ್ರಿಟಿ ಜಗತ್ತಿನಲ್ಲಿ ಡಿವೋರ್ಸ್ʼನದ್ದೇ ಸದ್ದು ಕೇಳಿಬರುತ್ತಿದೆ. ಅದರಲ್ಲಿ ಒಂದು ಬಾಲಿವುಡ್  ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್‌ ವದಂತಿ. ಅಂದಹಾಗೆ ಇವರಿಬ್ಬರು ಡಿವೋರ್ಸ್‌ ಪಡೆಯುತ್ತಿದ್ದಾರಾ? ಎಂಬುದು ಇನ್ನೂ ದೃಢವಾಗಿಲ್ಲ. ಆದ್ರೆ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ನಿಜವೇನೋ ಎಂಬಂತೆ ಭಾಸವಾಗುತ್ತಿದೆ. 

ಇನ್ನು ಅಭಿಷೇಕ್ ಬಚ್ಚನ್ʼಗೂ ಮುನ್ನ, ಐಶ್ವರ್ಯಾಗೆ ಮೊದಲು ಮದುವೆಯಾಗಿತ್ತು. ಅಂದರೆ ಅದು ಮರದ ಜೊತೆ ನಡೆದ ವಿವಾಹ. ಹೀಗೆಲ್ಲಾ ಸುದ್ದಿ ಭಾರೀ ವೈರಲ್‌ ಆಗಿತ್ತು.   

ಈ ಬಗ್ಗೆ ಐಶ್ವರ್ಯಾ ಒಮ್ಮೆ ಪ್ರತಿಕ್ರಿಯೆ ಕೂಡ ನೀಡಿದ್ದರು. ಮರದೊಂದಿಗಿನ ವಿವಾಹದ ವದಂತಿಗಳು ಆ ಸಂದರ್ಭದಲ್ಲಿ ಭಾರೀ ಸದ್ದು ಮಾಡಿತ್ತು. ಅಂತಿಮವಾಗಿ ಮದುವೆಯಾದ ಒಂದು ವರ್ಷದ ಬಳಿಕ ನಟಿ ಐಶ್ವರ್ಯಾ ರೈ ಖುದ್ದಾಗಿ ಆ ಊಹಾಪೋಹಗಳಿಗೆ ಉತ್ತರಿಸಿದ್ದರು.  

2007ರಲ್ಲಿ ಅಭಿಷೇಕ್ ಬಚ್ಚನ್ ಜೊತೆ ಮದುವೆಯಾಗುವ ಮೊದಲು ಗ್ರಹ ದೋಷಗಳನ್ನು ನಿವಾರಿಸಲು ಪದ್ಧತಿಗಳ ಅನ್ವಯ ಮರದೊಂದಿಗೆ ವಿವಾಹವಾಗಿದ್ದರು ಎಂದು ವದಂತಿಗಳು ಹರಿದಾಡಿತ್ತು. ಅದೊಂದು ಅನಗತ್ಯ ವಿಚಾರವಾಗಿತ್ತು ಎಂದು ಐಶ್ವರ್ಯ ರೈ ಪ್ರತಿಕ್ರಿಯೆ ನೀಡಿದ್ದಾರೆ.  

"ಆ ಸಂದರ್ಭ ತುಂಬಾ ಕಷ್ಟಕರವಾಗಿತ್ತು. ನಾನು ತೀರಾ ಅನಗತ್ಯ ವಿಚಾರ ಎಂದು ನಾನು ಭಾವಿಸಿದ್ದೆ. ಆದರೆ, ಈ ವಿಚಾರ ಪ್ರೈಮ್ ಟೈಮ್, ನ್ಯೂಸ್ ಪ್ರಿಂಟ್, ಮ್ಯಾಗಜೀನ್ ಕವರ್ ಸ್ಟೋರಿ ಎಲ್ಲದರಲ್ಲೂ ಹರಿದಾಡಿದಾಗ ನನಗೆ ಬೇಸರ ತರಿಸಿತ್ತು. ನಾವೆಲ್ಲರೂ ಸಾರ್ವಜನಿಕ ಜೀವನದಲ್ಲಿರುವುದರಿಂದ ಜನರು ನಮ್ಮನ್ನು ನೋಡುತ್ತಾರೆ ಎಂಬುದನ್ನು ತಿಳಿದಿದ್ದೇವೆ. ನಂತರ ಮದುವೆಯ ಬಳಿಕ ಮಾಧ್ಯಮದವರನ್ನು ಭೇಟಿಯಾದ ಮಾವ ಅಮಿತಾಭ್‌ ಬಚ್ಚನ್‌ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು" ಎಂದು ಐಶ್ವರ್ಯ ರೈ ಒಮ್ಮೆ ಪ್ರತಿಕ್ರಿಯಿಸಿದ್ದರು.  

"ಇದೆಲ್ಲಾ ಸುಳ್ಳು ಸುದ್ದಿ, ನಾನು ಯಾವ ಮರದ ಜೊತೆ ಕೂಡ ಮದುವೆ ಆಗಿರಲಿಲ್ಲ. ಇದು ಶಾಕಿಂಗ್ ನ್ಯೂಸ್, ನನಗೆ ಗೊತ್ತಿಲ್ಲ ಇದು ಎಲ್ಲಿಂದ ಆರಂಭವಾಗಿತ್ತು" ಎಂದು ಹೇಳಿದ್ದರು ಐಶ್.‌  

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿವಾಹವಾಗಿ ಪ್ರಸ್ತುತ 17 ವರ್ಷಗಳಾಗಿವೆ. ಈ ದಂಪತಿಗೆ ಆರಾಧ್ಯ ಎಂಬ ಮಗಳು ಕೂಡ ಇದ್ದಾಳೆ. ಆದರೆ ಇತ್ತೀಚಿನ ದಿನಗಳಲ್ಲಿ ಇವರಿಬ್ಬರು ಡಿವೋರ್ಸ್‌ ಪಡೆಯುತ್ತಿದ್ದಾರೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.   

ಇತ್ತೀಚೆಗೆ ವಿಚ್ಛೇದನದ ಕುರಿತ ಪೋಸ್ಟ್ ಒಂದನ್ನು ‘ಲೈಕ್’ ಮಾಡುವ ಮೂಲಕ ಅಭಿಷೇಕ್ ಬಚ್ಚನ್ ಸುದ್ದಿಯಾಗಿದ್ದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link