Top-5 Best Selling Cars: ಅತಿಹೆಚ್ಚು ಮಾರಾಟವಾಗುತ್ತಿರುವ ಟಾಪ್ 5 ಕಾರುಗಳು

Thu, 19 Oct 2023-11:53 am,

ಮಾರುತಿ ಸುಜುಕಿ ಬಲೆನೊ 2023ರ ಸೆಪ್ಟೆಂಬರ್ ತಿಂಗಳಿನಲ್ಲಿ 18,417 ಯುನಿಟ್‌ಗಳ ಮಾರಾಟದೊಂದಿಗೆ ಅತಿಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ಆದರೆ ಸೆಪ್ಟೆಂಬರ್ 2022ರಲ್ಲಿ ಇದರ ಒಟ್ಟು ಮಾರಾಟವು 19,369 ಯುನಿಟ್‌ಗಳಾಗಿರುವುದರಿಂದ ವಾರ್ಷಿಕ ಆಧಾರದ ಮೇಲೆ ಮಾರಾಟದಲ್ಲಿ ಶೇ.5ರಷ್ಟು ಕುಸಿತ ಕಂಡುಬಂದಿದೆ. ಇದರ ಬೆಲೆ 6.61 ಲಕ್ಷ ರೂ.ದಿಂದ ಪ್ರಾರಂಭವಾಗುತ್ತದೆ.

ಮಾರುತಿ ವ್ಯಾಗನ್ ಆರ್ ಸೆಪ್ಟೆಂಬರ್ 2023ರಲ್ಲಿ 2ನೇ ಸ್ಥಾನದಲ್ಲಿದೆ, ಇದರ ಒಟ್ಟು ಮಾರಾಟವು 16,250 ಯುನಿಟ್ ಆಗಿದೆ. ಇದರರ್ಥ ಸೆಪ್ಟೆಂಬರ್ 2022ರಲ್ಲಿ ಇದರ ಒಟ್ಟು ಮಾರಾಟವು 20,078 ಯುನಿಟ್‌ಗಳಾಗಿರುವುದರಿಂದ ವಾರ್ಷಿಕ ಆಧಾರದ ಮೇಲೆ ಮಾರಾಟವು ಶೇ.19ರಷ್ಟು ಕುಸಿದಿದೆ.

ಟಾಟಾ ನೆಕ್ಸಾನ್ ಸೆಪ್ಟೆಂಬರ್ 2023ರಲ್ಲಿ 3ನೇ ಸ್ಥಾನದಲ್ಲಿದೆ, ಇದರ ಒಟ್ಟು ಮಾರಾಟ 15,325 ಯುನಿಟ್‌ಗಳು. ಇದರರ್ಥ ಸೆಪ್ಟೆಂಬರ್ 2022ರಲ್ಲಿ ನೆಕ್ಸಾನ್‌ನ ಒಟ್ಟು ಮಾರಾಟವು 14,518 ಯುನಿಟ್‌ಗಳಾಗಿರುವುದರಿಂದ ಅದರ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ.6ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಮಾರುತಿ ಸುಜುಕಿ ಬ್ರೆಝಾ ಸೆಪ್ಟೆಂಬರ್ 2023ರಲ್ಲಿ 4ನೇ ಅತ್ಯುತ್ತಮ ಮಾರಾಟವಾದ ಕಾರಾಗಿದ್ದು, ಒಟ್ಟು 15,001 ಯುನಿಟ್‌ಗಳು ಮಾರಾಟವಾಗಿವೆ. ಇದು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ (15,445 ಯುನಿಟ್‌ಗಳು ಮಾರಾಟ) ಶೇ.3ರಷ್ಟು ಕಡಿಮೆಯಾಗಿದೆ. ಆದರೆ ಬ್ರೆಝಾ 4ನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮಾರುತಿ ಸ್ವಿಫ್ಟ್ 5ನೇ ಸ್ಥಾನದಲ್ಲಿದ್ದು, ಸೆಪ್ಟೆಂಬರ್ 2023ರಲ್ಲಿ ಒಟ್ಟು 14,703 ಯುನಿಟ್‌ಗಳು ಮಾರಾಟವಾಗಿವೆ. ಸೆಪ್ಟೆಂಬರ್ 2022ರಲ್ಲಿ ಒಟ್ಟು 11,988 ಯುನಿಟ್‌ಗಳನ್ನು ಮಾರಾಟವಾಗಿದ್ದರಿಂದ ಇದರ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ.23ರಷ್ಟು ಹೆಚ್ಚಳವನ್ನು ದಾಖಲಿಸಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link