ಈ ಪುಟ್ಟ ಹೂವು ಮತ್ತದರ ಎಲೆಯನ್ನು ಸೇವಿಸಿದರೆ ಕೀಲುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗುವುದು !ಕಿಡ್ನಿ ಸ್ಟೋನ್ ಕೂಡಾ ಒಡೆಯುವುದು !
ಧಾರ್ಮಿಕವಾಗಿ ವಿಶೇಷ ಮನ್ನಣೆ ಪಡೆದಿರುವ ಪಾರಿಜಾತದ ಹೂವು ಆರೋಗ್ಯ ಗುಣಗಳನ್ನು ಕೂಡಾ ಹೊಂದಿದೆ.ಇದನ್ನು ಅನೇಕ ಕಾಯಿಲೆಗಳಿಗೆ ಮನೆ ಮದ್ದಿನ ರೂಪದಲ್ಲಿ ಬಳಸಬಹುದು.
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಳವಾದಾಗ ಅದನ್ನು ಕರಗಿಸುವಲ್ಲಿ ಕೂಡಾ ಪಾರಿಜಾತ ವಿಶೇಷ ರೀತಿಯಲ್ಲಿ ಪರಿಣಾಮ ಬೀರುತ್ತದೆ.ಯೂರಿಕ್ ಆಸಿಡ್ ಹೆಚ್ಚಳದಿಂದ ಉಂಟಾಗುವ ಕಿಡ್ನಿ ಸ್ಟೋನ್ ಅನ್ನು ಕೂಡಾ ಕರಗಿಸುವ ಶಕ್ತಿ ಈ ಪುಟ್ಟ ಹೂವಿಗಿದೆ.
ಪಾರಿಜಾತದ ಹೂವು ಮಾತ್ರವಲ್ಲ ಅದರ ಎಲೆ ಕೂಡಾ ಯೂರಿಕ್ ಆಸಿಡ್ ಗೆ ಸಂಜೀವಿನಿ ಇದ್ದ ಹಾಗೆ.ಯೂರಿಕ್ ಆಸಿಡ್ ಕಾರಣದಿಂದ ಕೀಲುಗಳಲ್ಲಿ ಕಾಣಿಸಿಕೊಳ್ಳುವ ನೋವನ್ನು ಇದು ತ್ವರಿತವಾಗಿ ಗುಣಪಡಿಸುತ್ತದೆ.
ಒಂದು ಹಿಡಿಯಾಗುವಷ್ಟು ಪಾರಿಜಾತದ ಹೂವು ಮತ್ತು ಎಲೆಗಳನ್ನು ತೆಗೆದುಕೊಂಡು 2 ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ.ಈ ನೀರು ಅರ್ಧದಷ್ಟಾದ ಮೇಲೆ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಟ್ಟು ನಂತರ ಕುಡಿಯಿರಿ.
ಹೀಗೆ ಮಾಡುತ್ತಾ ಬಂದರೆ ಯೂರಿಕ್ ಆಸಿಡ್ ಕರಗಿ ಮೂತ್ರದ ಮೂಲಕವೇ ದೇಹದಿಂದ ಹೊರ ಹೋಗುವುದು. ಜೊತೆಗೆ ಕಿಡ್ನಿಯಲ್ಲಿರುವ ಕಲ್ಲಿನ ಗಾತ್ರ ಕೂಡಾ ಸಣ್ಣದಾಗಿ ಅದು ಕೂಡಾ ಕಿಡ್ನಿಯಿಂದ ಜಾರಿ ಹೊರ ಹೋಗಲು ಸಹಾಯ ಮಾಡುತ್ತದೆ.
ಇನ್ನು ಯೂರಿಕ್ ಆಸಿಡ್ ಹೆಚ್ಚಾದಾಗ ಕಾಣಿಸಿಕೊಳ್ಳುವ ಕೀಲು ನೋವಿನ ಪರಿಹಾರಕ್ಕೆ ಈ ಹೂವು ಮತ್ತು ಎಲೆಯನ್ನು ಅರೆದು ಪೇಸ್ಟ್ ಮಾಡಿ ಹಚ್ಚಬಹುದು.ಇದು ಕೂಡಾ ಬಹಳಷ್ಟು ಪರಿಣಾಮ ಬೀರುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ZEE NEWS ಇದನ್ನು ಖಚಿತಪಡಿಸುವುದಿಲ್ಲ.