Nishvika Naidu saree Photos : ಯಾರೆ ನೀನು ಸುಂದರ ಚೆಲುವೆ ಒಬ್ಬಳೇ ನಿಂತಿರುವೆ..!

Thu, 08 Dec 2022-3:06 pm,

ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಟಿ ನಿಶ್ವಿಕಾ ನಾಯ್ಡು ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. 

ʼಆಣೆ ಮಾಡಿ ಹೇಳುತೀನಿʼ ಅಂತ ಕನ್ನಡಿಗರ ಹೃದಯ ಸೆಳೆದ ಚೆಲುವೆ ಗುರು ಶಿಷ್ಯರು ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಗಮನಸೆಳೆದಿದ್ದರು.

ಸೋಷಿಯಲ್‌ ಮೀಡಿಯಾ ಸೇರಿದಂತೆ ರೀಲ್ಸ್‌ನಲ್ಲಿ ʼಆಣೆ ಮಾಡಿ ಹೇಳುತೀನಿʼ ಸಾಂಗ್​ ಸೂಪರ್​ ಹಿಟ್​ ಆಗಿತ್ತು.. ಫೋನ್‌ ಆನ್‌ ಮಾಡಿದ್ರೆ ಎಲ್ಲಾ ಕಡೆ ಸಿಶ್ವಿಕಾ ಕಾಣುತ್ತಿದ್ದರು.

ಇನ್ನು ಗುರು ಶಿಷ್ಯರಲ್ಲಿ ಗೌರಮ್ಮನಂತ್ತಿದ್ದ ಚೆಲುವೆ ನಿಶ್ವಿಕಾ ಏಕಾಎಕಿ ʼದಿಲ್​ ಪಸಂದ್​ʼ ಸಿನಿಮಾದಲ್ಲಿ ಹಾಟ್‌ ಅವತಾರತಾಳಿ ಪಡ್ಡೆ ಹುಡುಗರ ಹೃದಯಕ್ಕೆ ಕನ್ನಹಾಡಿದರು.

ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ಅಭಿನಯಿಸಿದ ನಿಶ್ವಿಕಾ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂತು. ನಿಶ್ವಿಕಾ ಗ್ಲಾಮರ್‌ ಮತ್ತು ನಟನೆ ಸಿನಿಮಾದ ಸೆಂಟರ್‌ ಅಟ್ರ್ಯಾಕ್ಷನ್‌ ಅಂದ್ರೆ ತಪ್ಪಾಗಲ್ಲ.

ಅಲ್ಲದೆ, ದಿಲ್‌ ಪಸಂದ್‌ನಲ್ಲಿ ಮಂಗ್ಲಿ ಹಾಡಿದ ʼರಾಮಾ ರಾಮಾ..ʼ ಹಾಡು ಸೂಪರ್​ ಹಿಟ್​ ಆಗಿದೆ. ಈ ಹಾಡಿನಲ್ಲಿ ನಿಶ್ವಿಕಾ ಸಖತ್‌ ಕ್ಯೂಟಾಗಿ ಕಾಣಿಸಿಕೊಂಡಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link