ಏನೂ ಬೇಡ! ಬರೀ ಕುಳಿತು ಕುಳಿತೇ ತೂಕ ಇಳಿಸಬಹುದು, ಹೇಗ್ ಗೊತ್ತಾ?
ದೇಹದ ತೂಕ ಹೆಚ್ಚಾಗಿ, ಡೊಳ್ಳಾಗಿರುವ ಹೊಟ್ಟೆ ಕರಗುತ್ತಿಲ್ಲ ಎಂದು ನೀವೂ ಕೊರಗುತ್ತಿದ್ದೀರಾ...
ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ... ನೀವು ಕುಳಿತಲ್ಲಿಯೇ ಸಣ್ಣ ಪುಟ್ಟ ಚಲನೆಗಳ ಮೂಲಕ ತೂಕ ಇಳಿಸಿ, ಹೊಟ್ಟೆಯನ್ನೂ ಕರಗಿಸಬಹುದು.
ನೀವು ಕುಳಿತ ಭಂಗಿಯಲ್ಲಿ ಕೆಲವು ವ್ಯಾಯಾಮಗಳನ್ನು ಮಾಡಿ ಹೊಟ್ಟೆ ಕರಗಿಸಬಹುದು.
ಖುರ್ಚಿಯಲ್ಲಿ ಕುಳಿತು ಕೈಗಳನ್ನು ಮೇಲಕ್ಕೆ ಎತ್ತಿ ಬಳಿಕ ನಿಧಾನವಾಗಿ ಬಗ್ಗುತ್ತಾ ನಿಮ್ಮ ಕಾಲುಗಳನ್ನು ಸ್ಪರ್ಶಿಸಿ. ನಿತ್ಯ 15 ನಿಮಿಷ ಇದನ್ನು ಪುನರಾವರ್ತಿಸುವುದರಿಂದ ಕಿಬ್ಬೊಟ್ಟೆ ಸ್ನಾಯುಗಳಿಗೆ ವ್ಯಾಯಾಮವಾಗಿ ಹೊಟ್ಟೆ ಕರಗುತ್ತದೆ.
ನೆಲದ ಮೇಲೆ ಆರಾಮವಾಗಿ ಕುಳಿತು ಬಟರ್ ಫ್ಲೈ ಅಥವಾ ಚಿಟ್ಟೆಯ ಭಂಗಿಯಲ್ಲಿ ಚಿಟ್ಟೆ ರೆಕ್ಕೆಗಳನ್ನು ಚಲಿಸುವಂತೆ ಮೊಣಕಾಲನ್ನು ಮೇಲಕ್ಕೆ ಕೆಳಕ್ಕೆ ಸರಿಸಿ. ಇದು ತೂಕ ಇಳಿಕೆಗೆ ತುಂಬಾ ಲಾಭದಾಯಕವಾಗಿದೆ.
ಇದರ ಜೊತೆಗೆ ನೀವು ಕುಳಿತುಕೊಳ್ಳುವ ಭಂಗಿಯ ಬಗ್ಗೆ ನಿಗಾವಹಿಸಿ. ಎಲ್ಲೇ ಕೂರುವಾಗಲೂ ನೇರವಾಗಿ (ಬೆನ್ನು ಭಾಗದಂತೆ) ಕುಳಿತುಕೊಳ್ಳುವುದರಿಂದ ಹೆಚ್ಚುವರಿಯಾಗಿ ಸುಮಾರು 350 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ನೀರು ಕುಡಿಯುವಾಗ ಕುಳಿತೇ ನೀರು ಕುಡಿಯಬೇಕು. ಜೊತೆಗೆ ನೀವು ಟೀ-ಕಾಫಿ ಕುಡಿಯುವಂತೆ ಒಂದೊಂದೇ ಗುಟುಕು ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದು ತೂಕ ನಷ್ಟಕ್ಕೆ ಅದರಲ್ಲೂ ಹೊಟ್ಟೆಯಲ್ಲಿ ಶೇಖರವಾಗಿರುವ ಕೊಬ್ಬಿಣ ನಷ್ಟಕ್ಕೆ ತುಂಬಾ ಸಹಕಾರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.