Aadhaar ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡಲು ಆಧಾರ್ ಕೇಂದ್ರಕ್ಕೆ ಹೋಗಬೇಕಿಲ್ಲ , ಹೀಗೂ ಮಾಡಬಹುದು

Thu, 22 Jul 2021-9:12 pm,

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮತ್ತು ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಆಧಾರ್ ಕಾರ್ಡ್ ಹೊಂದಿರುವವರಿಗೆ ಮೊಬೈಲ್ ಸಂಖ್ಯೆ ನವೀಕರಣಕ್ಕೆ ಅನುಕೂಲವಾಗುವಂತೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಅಡಿಯಲ್ಲಿ, ಪೋಸ್ಟ್‌ಮ್ಯಾನ್ ಆಧಾರ್ ಕಾರ್ಡ್‌ನ ಮೊಬೈಲ್ ಸಂಖ್ಯೆಯನ್ನು ನವೀಕರಿಸುತ್ತಾರೆ.

ಮನೆ ಬಾಗಿಲಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಸೌಲಭ್ಯವು ವಿಶಾಲವಾದ ನೆಟ್‌ವರ್ಕ್ ವ್ಯವಸ್ಥೆಯಿಂದ  ಸಾಧ್ಯವಾಗುತ್ತದೆ. ಈ ಸೇವೆ 650 ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೆಟ್ವರ್ಕ್, 1.46 ಲಕ್ಷ ಪೋಸ್ಟ್‌ಮೆನ್ ಮತ್ತು ಗ್ರಾಮೀಣ್ ಅಂಚೆ ಸೇವಕರ ಮೂಲಕ ಸಾಧ್ಯವಾಗಲಿದೆ. ಐಪಿಪಿಬಿ ಎಂಡಿ ಮತ್ತು ಸಿಇಒ ಜೆ.ವೆಂಕಟರಾಮು ಪ್ರಕಾರ, ಯುಐಡಿಎಐನ ಮೊಬೈಲ್ ಅಪ್ಡೇಟ್ ಸೇವೆ ಬ್ಯಾಂಕಿಂಗ್ ಸೇವೆಗಳು ಲಭ್ಯವಿಲ್ಲದ ಪ್ರದೇಶಗಳಲ್ಲಿ ವ್ಯಾಪಕವಾದ ಅಂಚೆ ಕಚೇರಿಗಳು, ಪೋಸ್ಟ್ ಮೆನ್ ಮತ್ತು ಜಿಡಿಎಸ್ ಮೂಲಕ ಸಾಧ್ಯವಾಗುತ್ತದೆ. 

ಐಪಿಪಿಬಿ ಪ್ರಸ್ತುತ ಮೊಬೈಲ್ ನವೀಕರಣ ಸೇವೆಯನ್ನು ಮಾತ್ರ ಒದಗಿಸುತ್ತಿದೆ. ಶೀಘ್ರದಲ್ಲೇ ಇದು ತನ್ನ ನೆಟ್‌ವರ್ಕ್ ಮೂಲಕ ಮಕ್ಕಳ ದಾಖಲಾತಿ (Enrolment Service)  ಸೇವೆಯನ್ನು ಸಹ ಪ್ರಾರಂಭಿಸುತ್ತದೆ. 

ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಬದಲಾಯಿಸಿದ್ದರೆ, ಅದನ್ನು ಆಧಾರ್‌ನಲ್ಲಿ ಅಪ್ಡೇಟ್ ಮಾಡಿ. ಯಾವುದೇ ಪರಿಶೀಲನೆ ಪ್ರಕ್ರಿಯೆಗೆ ನೀವು ಆಧಾರ್ ಸಂಖ್ಯೆಯನ್ನು ಬಳಸಿದರೆ, ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಈ ಒಟಿಪಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಗೆ ಬರುತ್ತದೆ.  ಹಳೆಯ ಮೊಬೈಲ್ ಸಂಖ್ಯೆಯಿದ್ದರೆ, ಒಟಿಪಿ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಾ ಸಾಧ್ಯವಾಗುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link