ಶಬರಿಮಲೆ ಮಾತ್ರವಲ್ಲ; ದೇಶದ ಈ ಪ್ರಸಿದ್ಧ ದೇವಸ್ಥಾನಗಳಿಗೆ ಕೂಡ ಮಹಿಳೆಯರು ಪ್ರವೇಶಿಸುವಂತಿಲ್ಲ...! ಅಚ್ಚರಿ ಅಂದ್ರೆ ಕರ್ನಾಟಕದಲ್ಲೇ ಇದೆ ಆ ದೇಗುಲ

Tue, 26 Nov 2024-8:51 pm,

ದೇಶದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾಗಿ ದೇವಾಲಯಗಳನ್ನು ಪ್ರವೇಶಿಸಲು ಅವಕಾಶವಿದೆ, ಏಕೆಂದರೆ ದೇವಸ್ಥಾನಗಳಲ್ಲಿ ಎಲ್ಲರೂ ಸಮಾನರು. ಆದರೆ ಭಾರತದ ಕೆಲ ದೇವಾಲಯಗಳಲ್ಲಿ ಅದಕ್ಕೆ ಅವಕಾಶವಿಲ್ಲ. ಒಂದಷ್ಟು ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿಷಿದ್ಧವಾಗಿದ್ದರೆ, ಇನ್ನೂ ಕೆಲವಷ್ಟು ದೇಗುಲಗಳಲ್ಲಿ ಪುರುಷರಿಗೆ ಪ್ರವೇಶವಿರುವಿಲ್ಲ.

ಈ ಪದ್ಧತಿಗೆ ಅನೇಕ ಕಾರಣಗಳಿವೆ. ಇನ್ನು ಕೇರಳದಲ್ಲಿರುವ ಶಬರಿಮಲೆ ದೇಗುಲದ ಹೊರತಾಗಿ, ಮಹಿಳೆಯರ ಪ್ರವೇಶವನ್ನು ನಿಷೇಧಿಸಿರುವ ಅನೇಕ ದೇವಾಲಯಗಳು ದೇಶದಲ್ಲಿವೆ. ಅಂತಹ ಕೆಲವು ದೇವಾಲಯಗಳ ಬಗ್ಗೆ ತಿಳಿಯೋಣ.

ಪದ್ಮನಾಭಸ್ವಾಮಿ ದೇವಸ್ಥಾನ, ಕೇರಳ: ಪದ್ಮನಾಭಸ್ವಾಮಿ ದೇವಾಲಯವು ಕೇರಳ ರಾಜ್ಯದ ತಿರುವನಂತಪುರಂನಲ್ಲಿರುವ ವಿಷ್ಣುವಿನ ಪ್ರಸಿದ್ಧ ದೇವಾಲಯವಾಗಿದೆ. ಭಾರತದ ಪ್ರಮುಖ ವೈಷ್ಣವ ದೇವಾಲಯಗಳಲ್ಲಿ ಒಂದಾಗಿರುವ ಈ ದೇವಾಲಯವು ತಿರುವನಂತಪುರದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದು. ಈ ದೇವಾಲಯವು ಭಗವಾನ್ ವಿಷ್ಣುವಿನ ಭಕ್ತರ ಪ್ರಮುಖ ಪೂಜಾ ಸ್ಥಳವಾಗಿದೆ. ವಿಷ್ಣುವಿನ ಪ್ರತಿಮೆ ಈ ಸ್ಥಳದಲ್ಲೇ ಮೊದಲು ಕಂಡುಬಂದಿತ್ತು ಎಂದು ನಂಬಲಾಗಿದೆ, ಆನಂತರ ಈ ದೇವಾಲಯವನ್ನು ಸ್ಥಾಪಿಸಲಾಯಿತು. ಈ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಇನ್ನು ಈ ದೇವಾಲಯವನ್ನು ಶ್ರೀಮಂತ ದೇವಾಲಯ ಎಂದೂ ಕರೆಯುತ್ತಾರೆ.

ಶಬರಿಮಲೆ ಶ್ರೀ ಅಯ್ಯಪ್ಪ, ಕೇರಳ: ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯವು ಕೇರಳದ ಅತ್ಯಂತ ಪ್ರಾಚೀನ ಮತ್ತು ಭವ್ಯವಾದ ದೇವಾಲಯಗಳಲ್ಲಿ ಒಂದಾಗಿದೆ. ಅಯ್ಯಪ್ಪ ದೇಗುಲಕ್ಕೆ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ದೇವಾಲಯದಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ.

ಕಾರ್ತಿಕೇಯ ದೇವಸ್ಥಾನ, ಪುಷ್ಕರ್, ರಾಜಸ್ಥಾನ: ರಾಜಸ್ಥಾನದ ಪ್ರಸಿದ್ಧ ಯಾತ್ರಾಸ್ಥಳವಾದ ಪುಷ್ಕರ್ ಸಹಲ್ ಬ್ರಹ್ಮನ ಏಕೈಕ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಆದರೆ ಇಲ್ಲಿರುವ ಕಾರ್ತಿಕೇಯ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ.

ಮುಕ್ತಗಿರಿ ಜೈನ ದೇವಾಲಯ, ಮಧ್ಯಪ್ರದೇಶ: ಮುಕ್ತಗಿರಿ ಜೈನ ದೇವಾಲಯವು ಮಧ್ಯಪ್ರದೇಶ ರಾಜ್ಯದ ಕುನಾ ನಗರದಲ್ಲಿದೆ. ಇದು ಜೈನ ಧರ್ಮದ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಿ ಯಾವುದೇ ಮಹಿಳೆ ಈ ದೇವಾಲಯವನ್ನು ಪ್ರವೇಶಿಸುವಂತಿಲ್ಲ. ದೇವಸ್ಥಾನಕ್ಕೆ ಇಂತಹ ವೇಷಭೂಷಣ ಸಂಪೂರ್ಣ ನಿಷೇಧವಿದೆ.

ಮಾವ್ಲಿ ಮಾತಾ ದೇವಸ್ಥಾನ, ಛತ್ತೀಸ್‌ಗಢ: ಈ ದೇವಾಲಯವು ಛತ್ತೀಸ್‌ಗಢದಲ್ಲಿದ್ದು, ಬಹಳ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಾಲಯದ ವಿಶಿಷ್ಟ ಸಂಪ್ರದಾಯದ ಅಡಿಯಲ್ಲಿ, ಮಹಿಳೆಯರಿಗೆ ಇಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ, ಹೀಗಾಗಿ ಮಹಿಳೆಯದು ಈ ದೇವಾಲಯಕ್ಕೆ ಹೊರಗಿನಿಂದ ಮಾತ್ರ ಭೇಟಿ ನೀಡಬಹುದು. 400 ವರ್ಷಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ ಪುರುಷರು ಮಾತ್ರ ಒಳಗೆ ಹೋಗಿ ದರ್ಶನ ಪಡೆಯಬಹುದು.

ಶನಿ ಶಿಂಗ್ನಾಪುರ ದೇವಸ್ಥಾನ, ಮಹಾರಾಷ್ಟ್ರ: ಶನಿ ಶಿಂಗ್ನಾಪುರ ದೇವಾಲಯವು ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿದೆ. ಇಲ್ಲಿಯೂ ಮಹಿಳೆಯರು ಒಳಗೆ ಹೋಗಿ ದರ್ಶನ ಮಾಡುವಂತಿಲ್ಲ ಹಾಗೂ ಹೊರಗಿನಿಂದ ದರ್ಶನ ಪಡೆಯಬೇಕೆಂಬ ನಿಯಮವಿದೆ.

ಅಣ್ಣಪ್ಪ ಬೆಟ್ಟ, ಧರ್ಮಸ್ಥಳ, ಕರ್ನಾಟಕ: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಈ ಬೆಟ್ಟವಿದೆ. ಇಲ್ಲಿಗೆ ಕೂಡ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link