BBK11: ಈ ಬಾರಿ ಸುದೀಪ್ ಬದಲು ರಿಷಬ್‌ ಶೆಟ್ಟಿ ಬಿಗ್‌ ಬಾಸ್‌ ಕನ್ನಡ 11 ನಿರೂಪಣೆ ಮಾಡಲಿದ್ದಾರಾ?‌

Fri, 09 Aug 2024-2:32 pm,

ಕಿರುತೆರೆ, ಬೆಳ್ಳಿತೆರೆ, ಮಾಧ್ಯಮ, ರಾಜಕೀಯ, ಸಾಮಾಜಿಕ, ಸೋಶಿಯಲ್‌ ಮೀಡಿಯಾ ವಿವಿಧ ಕ್ಷೇತ್ರದಲ್ಲಿ ಪಾಪುಲರ್‌ ಆದ ಒಂದಷ್ಟು ಜನ ಸ್ಪರ್ಧಿಗಳಾಗಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗಲಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಆರಂಭಕ್ಕೆ ಸ್ಪರ್ಧಿಗಳ ಹಡುಕಾಟ ನಡೆಯುತ್ತಿದೆ. ಅಕ್ಟೋಬರ್‌ ನಲ್ಲಿ ಹೊಸ ಸೀಸನ್‌ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. 

ಈ ನಡುವೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 11  ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ಮತ್ತೊಂದು ವಿಚಾರವೂ ವೈರಲ್ ಆಗುತ್ತಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ನಿರೂಪಕರ ಬಗ್ಗೆ ವಿವಿಧ ಸಂಗತಿಗಳು ಹರಿದಾಡುತ್ತಿವೆ. ಕಳೆದ 10 ಸೀಸನ್‌ಗಳನ್ನು ಕಿಚ್ಚ ಸುದೀಪ್‌ ನಡೆಸಿಕೊಟ್ಟಿದ್ದಾರೆ. 

ಆದರೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ನಿರೂಪಕರು ಬದಲಾಗಲಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಸುದೀಪ್‌ ಈ ಬಾರಿ ಬಿಗ್‌ ಬಾಸ್‌ ಹೋಸ್ಟ್‌ ಮಾಡುವುದು ಅನುಮಾನ ಎನ್ನಲಾಗುತ್ತಿದೆ.

ಈ ಬಾರಿ ನಟ ಸುದೀಪ್‌ ಬದಲು ನಟ ರಿಷಬ್‌ ಶೆಟ್ಟಿ ಬಿಗ್‌ ಬಾಸ್‌ ಕನ್ನಡ ಶೋ ನಡೆಸಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಬಿಗ್ ಬಾಸ್‌ ತಂಡವಾಗಲಿ, ಕಿಚ್ಚ ಸುದೀಪ್ ಮತ್ತು ರಿಷಬ್‌ ಶೆಟ್ಟಿ ಯಾವುದೇ ಮಾಹಿತಿ ನೀಡಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link