ಇನ್ನು Unknown ನಂಬರ್ ಕಾಲ್ ಗಳು auto ರೆಕಾರ್ಡ್ ಆಗುತ್ತೆ, ಹೇಗೆ ತಿಳಿಯಿರಿ
ಗೂಗಲ್ ಫೋನ್ ಆಪ್ (Google Phone App) ತನ್ನ ಹೊಸ ಅಪ್ ಡೇಟ್ ನಲ್ಲಿ ಇಂತಹ ಕಾಲ್ ಗಳನ್ನು ರೆಕಾರ್ಡ್ ಮಾಡುವ ಪೀಚರ್ ಅಳವಡಿಸಿದೆ.
ಬಹುತೇಕ ಅಂಡ್ರಾಯಿಡ್ ಫೋನ್ ಗಳಲ್ಲಿ ಕಾಲ್ ರೆಕಾಡಿಂಗ್ ಫೀಚರ್ ಇರುವುದಿಲ್ಲ. ಕಾಲ್ ರೆಕಾರ್ಡಿಂಗ್ ಮಾಡಬೇಕಾದರೆ, ಯಾವುದಾದರೂ ಥರ್ಡ್ ಪಾರ್ಟಿ ಆಪ್ ಡೌನ್ ಲೋಡ್ ಮಾಡಬೇಕಾಗುತ್ತದೆ.
ವರದಿಗಳ ಪ್ರಕಾರ, ಸ್ಟಾಕ್ ಆಂಡ್ರಾಯ್ಡ್ ಫೋನ್ ಅಥವಾ ಗೂಗಲ್ ಪಿಕ್ಸೆಲ್ ನಲ್ಲಿ ಮೊದಲಿನಿಂದಲೂ ಕಾಲ್ ರೆಕಾರ್ಡಿಂಗ್ ಫೀಚರ್ ಇದೆ.
ಮೊದಲು Google Phone App ತೆರೆಯಿರಿ. ಈಗ ಇಲ್ಲಿ ಮೆನು ಬಟನ್ ಕ್ಲಿಕ್ ಮಾಡಿ. ಇಲ್ಲಿ ಕಾಲ್ ರೆಕಾರ್ಡಿಂಗ್ ಆಯ್ಕೆಯನ್ನು ನೋಡಬಹುದು. ಅದನ್ನು ಕ್ಲಿಕ್ ಮಾಡಿ. ಈಗ numbers not in your contacts ಮೇಲೆ ಟ್ಯಾಬ್ ಮಾಡಿ. ನಂತರ Always Record ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್‌ನಲ್ಲಿ Unknown ಸಂಖ್ಯೆಯಿಂದ ಕರೆ ಬಂದ ಕೂಡಲೇ ರೆಕಾರ್ಡಿಂಗ್ ಪ್ರಾರಂಭವಾಗುತ್ತದೆ. ಇದಕ್ಕಾಗಿ, ನಿಮ್ಮ ಮೊಬೈಲ್‌ನಲ್ಲಿ ನೋಟಿಫಿಕೇಶನ್ ಕೂಡಾ ಬರುತ್ತದೆ. ಕರೆ ಮಾಡುವವರಿಗೂ ಇಂಥಹದ್ದೇ ನೋಟಿಫಿಕೇಶನ್ ಸಿಗುತ್ತದೆ.