Numerology: ನಿಮ್ಮ ಜನ್ಮ ದಿನಾಂಕದಿಂದ ನಿಮ್ಮ ಆರೋಗ್ಯ ಹೇಗಿರುತ್ತೆ ಎಂದು ತಿಳಿಯಬಹುದು!

Thu, 26 Aug 2021-8:51 am,

ಯಾವುದೇ ತಿಂಗಳ 1, 10, 19, 28 ರಂದು ಜನಿಸಿದ ಜನರು ಸೂರ್ಯನಿಂದ ಪ್ರಭಾವಿತರಾಗುತ್ತಾರೆ. ಆದ್ದರಿಂದ ರಾಡಿಕ್ಸ್ ಸಂಖ್ಯೆ 1 ಹೊಂದಿರುವ ಜನರು ಸಾಮಾನ್ಯವಾಗಿ ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ. ಕಾಲಾನಂತರದಲ್ಲಿ, ಈ ಜನರು ಹೈ ಬಿಪಿ, ಬೆನ್ನು ನೋವು, ಮೆದುಳು, ಪಿತ್ತಜನಕಾಂಗ ಮತ್ತು ಹೊಟ್ಟೆಗೆ ಸಂಬಂಧಿಸಿದ ರೋಗಗಳಿಗೆ ಹೆಚ್ಚು ಒಳಗಾಗುತ್ತಾರೆ ಎಂದು ಹೇಳಲಾಗುತ್ತದೆ.

ಯಾವುದೇ ತಿಂಗಳ 2, 11, 20, 29 ರಂದು ಜನಿಸಿದ ಜನರು ರಾಡಿಕ್ಸ್ ಸಂಖ್ಯೆ 2. ಚಂದ್ರನು ಅವರ ಮೇಲೆ ಹೆಚ್ಚು ಪ್ರಭಾವ ಬೀರುತ್ತಾನೆ. ಈ ಜನರು ಅನಗತ್ಯವಾಗಿ ಚಿಂತಿಸುವ ಅಭ್ಯಾಸವನ್ನು ಹೊಂದಿರುತ್ತಾರೆ, ಆದ್ದರಿಂದ ಈ ಜನರು ಒತ್ತಡಕ್ಕೆ ಒಳಗಾಗುತ್ತಾರೆ. ಇದಲ್ಲದೇ, ಹೊಟ್ಟೆ ಅಥವಾ ಜೀರ್ಣಕ್ರಿಯೆಯ ಸಮಸ್ಯೆಗಳು, ಕಳಪೆ ರಕ್ತ ಪರಿಚಲನೆ, ರಕ್ತದ ಕೊರತೆ, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.

3, 12, 21 ಮತ್ತು 30 ನೇ ತಾರೀಖುಗಳಲ್ಲಿ ಜನಿಸಿದ ಜನರ ರಾಡಿಕ್ಸ್ ಸಂಖ್ಯೆ 3. ಅವರು ಗುರು ಗ್ರಹದಿಂದ ಪ್ರಭಾವಿತರಾಗಿದ್ದಾರೆ. ಈ ಜನರು ಎದೆ ಅಥವಾ ಶ್ವಾಸಕೋಶದ ಸಮಸ್ಯೆಗಳು, ಮಧುಮೇಹ, ಸಂಧಿವಾತ, ನರಮಂಡಲ ಮತ್ತು ಚರ್ಮ ರೋಗದಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

4, 13, 22 ಅಥವಾ 31 ರಂದು ಜನಿಸಿದವರು ರಾಡಿಕ್ಸ್ ಸಂಖ್ಯೆ 4 ಅನ್ನು ಹೊಂದಿದ್ದಾರೆ ಮತ್ತು ಅವರು ರಾಹು ಪ್ರಭಾವಕ್ಕೆ ಒಳಗಾಗುತ್ತಾರೆ. ಈ ಜನರ ಆರೋಗ್ಯದಲ್ಲಿ ಆಗಾಗ್ಗೆ ಏರಿಳಿತ ಕಂಡು ಬರುತ್ತದೆ. ಇವರಿಗೆ ಆಸ್ತಮಾ, ಉಸಿರಾಟದ ತೊಂದರೆ, ಆಗಾಗ್ಗೆ ಶೀತ-ಕೆಮ್ಮು, ಮೂತ್ರದ ಸೋಂಕು ಮತ್ತು ರಕ್ತದೊತ್ತಡದ ಸಮಸ್ಯೆಗಳು ಇರಬಹುದು.

ಇದನ್ನೂ ಓದಿ- ಗ್ರಹಗಳ ಸ್ಥಾನದಲ್ಲಿ ಆಗಲಿದೆ ಬಹು ದೊಡ್ಡ ಬದಲಾವಣೆ ; ಈ ಐದು ರಾಶಿಯವರಿಗೆ ಭಾರೀ ಲಾಭ

5, 14 ಅಥವಾ 23 ರಂದು ಜನಿಸಿದ ಜನರು ರಾಡಿಕ್ಸ್ ಸಂಖ್ಯೆ 5 ಅನ್ನು ಹೊಂದಿದ್ದಾರೆ ಮತ್ತು ಈ ಜನರು ಬುಧ ಗ್ರಹದಿಂದ (Budh Grah) ಪ್ರಭಾವಿತರಾಗಿದ್ದಾರೆ. ಈ ಜನರು ಸಹ ಬಹಳಷ್ಟು ಯೋಚಿಸುತ್ತಾರೆ, ಆದ್ದರಿಂದ ಅವರು ಒತ್ತಡ, ನಿದ್ರಾಹೀನತೆ ಮತ್ತು ನರಗಳ ಸಮಸ್ಯೆಗಳಿಗೆ ಬಲಿಪಶುಗಳಾಗುತ್ತಾರೆ. ಇದಲ್ಲದೇ ಅವರಿಗೆ ಚರ್ಮದ ಸಮಸ್ಯೆ, ಕಿಡ್ನಿ ಸಮಸ್ಯೆ, ಫ್ಲೂ, ಶೀತ-ಕೆಮ್ಮು ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ಹೇಳಲಾಗುವುದು.

6, 15 ಅಥವಾ 24 ರಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 6. ಅವರು ಶುಕ್ರ ಗ್ರಹದಿಂದ (Shukra Grah) ಪ್ರಭಾವಿತರಾಗಿದ್ದಾರೆ. ಈ ಜನರಿಗೆ ಮೂಗು-ಗಂಟಲು ಸೋಂಕು, ನರಗಳ ತೊಂದರೆ, ಜ್ವರದ ಸಮಸ್ಯೆಗಳು ಆಗಾಗ್ಗೆ ಕಾಡಬಹುದು. ಈ ಜನರು ವೃದ್ಧಾಪ್ಯದಲ್ಲಿ ಹೃದಯದ ಕಾಯಿಲೆಗಳಿಂದ ಭಾದಿತರಾಗುತ್ತಾರೆ.

ಇದನ್ನೂ ಓದಿ- Mercury Transit: ಬುಧನ ರಾಶಿ ಪರಿವರ್ತನೆ ಈ ರಾಶಿಯವರಿಗೆ ಅದೃಷ್ಟ

7, 16 ಅಥವಾ 25 ರಂದು ಜನಿಸಿದ ಜನರ ರಾಡಿಕ್ಸ್ ಸಂಖ್ಯೆ 7. ಈ ಜನರು ಕೇತು ಗ್ರಹದ ಪ್ರಭಾವದಲ್ಲಿದ್ದಾರೆ ಮತ್ತು ಈ ಜನರಲ್ಲಿ ಅಜೀರ್ಣ, ನರಗಳ ಸಮಸ್ಯೆ ಸಾಮಾನ್ಯವಾಗಿದೆ. ಇದರ ಹೊರತಾಗಿ, ಈ ಜನರು ಯಾವುದೇ ರೀತಿಯ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ವಯಸ್ಸಿನ ಕೊನೆಯ ಹಂತಗಳಲ್ಲಿ, ಅವರು ಕೀಲು ನೋವು, ರಕ್ತ ಪರಿಚಲನೆಯ ಸಮಸ್ಯೆಗಳನ್ನು ಅನುಭವಿಸಬಹುದು.  

8, 17 ಅಥವಾ 26 ರಂದು ಜನಿಸಿದ ಜನರು ರಾಡಿಕ್ಸ್ ಸಂಖ್ಯೆ 8 ಮತ್ತು ಈ ಜನರು ಶನಿ ಗ್ರಹದ ಪ್ರಭಾವದಲ್ಲಿದ್ದಾರೆ. ಈ ಜನರಿಗೆ ಸಾಮಾನ್ಯವಾಗಿ ರಕ್ತದೊತ್ತಡ, ತಲೆನೋವು, ಯಕೃತ್ತು, ಕರುಳಿನಲ್ಲಿ ಸಮಸ್ಯೆಗಳಿಂದ ಬಳಲುತ್ತಾರೆ. ಇದನ್ನು ಹೊರತುಪಡಿಸಿ, ಈ ಜನರ ಹಲ್ಲುಗಳಿಗೆ ಆಗಾಗ್ಗೆ ಸಮಸ್ಯೆ ಉಂಟಾಗುತ್ತದೆ.

9, 18 ಅಥವಾ 27 ರಂದು ಜನಿಸಿದ ಜನರ ರಾಡಿಕ್ಸ್ ಸಂಖ್ಯೆ 9 ಮತ್ತು ಇವರು ಮಂಗಳನ ಪ್ರಭಾವದಲ್ಲಿದ್ದಾರೆ. ಈ ಜನರಿಗೆ ಆಗಾಗ್ಗೆ ಜ್ವರ ಉಂಟಾಗಬಹುದು. ಇದಲ್ಲದೇ, ಇವರಿಗೆ  ಗಂಟಲು, ಮೂತ್ರಪಿಂಡದಲ್ಲಿ ಸಮಸ್ಯೆ ಇರಬಹುದು.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link