White Hair Remedies: ಬಾಳೆಹಣ್ಣಿನೊಂದಿಗೆ ಈ 2 ವಸ್ತು ಬೆರೆಸಿ ಹಚ್ಚಿದರೆ ಶಾಶ್ವತವಾಗಿ ಕಪ್ಪಾಗುತ್ತೆ ಬಿಳಿ ಕೂದಲು
ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಲು ನೀವು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಉತ್ಪನ್ನಗಳನ್ನು ಬಳಸಿರಬಹುದು. ಆದಾಗ್ಯೂ, ಈ ಸಮಸ್ಯೆಯಿಂದ ಪರಿಹಾರ ದೊರೆತಿಲ್ಲವೆ? ಈ ಬಗ್ಗೆ ಚಿಂತಿಸಬೇಡಿ ಒಂದರ್ಧ ಬಾಳೆಹಣ್ಣು ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲದು.
ಹೌದು, ಕೇವಲ ಅರ್ಧ ಬಾಳೆಹಣ್ಣಿನೊಂದಿಗೆ ಎರಡು ಪದಾರ್ಥವನ್ನು ಬೆರೆಸಿ ಹಚ್ಚಿದರೆ ನಿಮ್ಮ ಬಿಳಿ ಕೂದಲನ್ನು ನಾಲ್ಕೇ ನಿಮಿಷದಲ್ಲಿ ಕಪ್ಪಾಗಿಸಬಹುದು. ಇದಕ್ಕೆ ಅಗತ್ಯವಿರುವ ಸಾಮಾಗ್ರಿಗಳು ಯಾವುವು? ಇದನ್ನು ಹೇಗೆ ಬಳಸುವುದು ಎಂದು ತಿಳಿಯೋಣ...
* ಅರ್ಧ ಬಾಳೆ ಹಣ್ಣು * ಒಂದು ಚಮಚ ಕಪ್ಪು ಹುರುಳಿ ಪುಡಿ * ಒಂದು ಚಮಚ ಆಲಿವ್ ಎಣ್ಣೆ
ಬಾಳೆಹಣ್ಣಿನಲ್ಲಿ ಕೂದಲಿಗೆ ಅಗತ್ಯವಾಡಾ ವಿಟಮಿನ್ ಬಿ 6, ವಿಟಮಿನ್ ಸಿ, ಪೊಟ್ಯಾಸಿಯಮ್, ಫೈಬರ್ ಸಮೃದ್ಧವಾಗಿದ್ದು ಇದು ಕೂದಲನ್ನು ರೇಷ್ಮೆಯಂತೆ ಮೃದುಗೊಳಿಸುತ್ತದೆ. ಅದೇ ರೀತಿ, ಕಪ್ಪು ಹುರುಳಿ ಕೂದಲಿಗೆ ಮೃದುತ್ವ, ಚೈತನ್ಯ ಮತ್ತು ಹೊಳಪನ್ನು ನೀಡುತ್ತದೆ. ಇದಲ್ಲದೆ ಆಲಿವ್ ಎಣ್ಣೆಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಇದು ಪ್ರಯೋಜನಕಾರಿ ಆಗಿದೆ.
ಒಂದು ದೊಡ್ಡ ಬಾಳೆಹಣ್ಣಿನಲ್ಲಿ ಅರ್ಧ ಬಾಳೆಹಣ್ಣನ್ನು ತೆಗೆದುಕೊಂಡು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳುತ್ತದೆ. ನಂತರ ಇದಕ್ಕೆ ಒಂದು ಚಮಚ ಆಲಿವ್ ಎಣ್ಣೆ, ಒಂದು ಚಮಚ ಕಪ್ಪು ಹುರುಳಿ ಪುಡಿ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. ನಂತರ ಹೇರ್ ಡೈ ಅನ್ನು ಕೂದಲಿಗೆ ಅನ್ವಯಿಸಿ.
ಕೂದಲಿನ ಬುಡದಿಂದ ತುದಿಯವರೆಗೆ ಈ ಹೇರ್ ಪ್ಯಾಕ್ ಅನ್ನು ಚೆನ್ನಾಗಿ ಅನ್ವಯಿಸಿ. ಒಂದು ಗಂಟೆಗಳ ಕಾಲ ಹಾಗೆ ಬಿಟ್ಟು ಬಳಿಕ ನಂತರ ತಣ್ಣೀರಿನಿಂದ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ಹೇರ್ ಪ್ಯಾಕ್ ಬಳಸುವುದರಿಂದ ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.