ದೀಪಾವಳಿಯಂದು ಮನೆ ಬಾಗಿಲಿಗೆ ತೋರಣ ಕಟ್ಟುವಾಗ ಈ ವಸ್ತು ಕೂಡ ತೂಗುಹಾಕಿ: ತಾಯಿ ಮಹಾಲಕ್ಷ್ಮೀ ಸಿರಿಸಂಪತ್ತಿನ ಸಮೇತ ಸೀದಾ ಮನೆಯೊಳಗೆ ಪ್ರವೇಶಿಸುವಳು
ದೀಪಾವಳಿಯಂದು, ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮನೆಯನ್ನು ಶುಚಿಗೊಳಿಸಿ ಅಲಂಕಾರವನ್ನು ಮಾಡಲಾಗುತ್ತದೆ. ಲಕ್ಷ್ಮಿ ದೇವಿ ಪ್ರವೇಶಿಸುವ ಮನೆಗಳು ಸುಂದರ, ಅಲಂಕೃತ ಮತ್ತು ಸ್ವಚ್ಛವಾಗಿರಬೇಕು ಎಂಬ ನಂಬಿಕೆ ಇದೆ. ಇನ್ನು ಮನೆಗಳನ್ನು ಸೌಂದರ್ಯ ಮತ್ತು ಸ್ವಚ್ಛತೆ ಮುಖ್ಯ ಬಾಗಿಲಿನಿಂದ ಪ್ರಾರಂಭವಾಗುತ್ತದೆ.
ಮನೆಯ ಮುಖ್ಯದ್ವಾರವನ್ನು ಗುಡಿಸಿ, ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ, ನಂತರ ತೋರಣ ಕಟ್ಟುವವರೆಗೆ ಇರುತ್ತದೆ. ಈ ಎಲ್ಲಾ ಅಲಂಕಾರಗಳು, ತಾಯಿ ಲಕ್ಷ್ಮಿ ಮನೆಯ ಮುಖ್ಯ ಬಾಗಿಲಿನಿಂದ ಮನೆಗೆ ಪ್ರವೇಶಿಸುವಾಗ ಸಂತುಷ್ಟಳಾಗಬೇಕು ಎಂಬ ಸದುದ್ದೇಶದಿಂದ ಮಾಡಲಾಗುತ್ತದೆ.
ಇನ್ನು ಮನೆ ಪ್ರವೇಶಿಸುವ ತಾಯಿ ಲಕ್ಷ್ಮಿ, ಸಂತೋಷ ಮತ್ತು ಸಮೃದ್ಧಿಯನ್ನು ವರವಾಗಿ ನೀಡಬೇಕಾದರೆ, ಈ ದೀಪಾವಳಿಯಂದು ಮನೆಯ ಮುಖ್ಯ ಬಾಗಿಲಿನ ಮೇಲೆ ಕಟ್ಟುವ ತೋರಣಕ್ಕೆ ಈ ವಸ್ತುವನ್ನು ಸೇರಿಸಿಕೊಳ್ಳಬೇಕು. ಜೊತೆಗೆ ಕೆಲವೊಂದು ವಿಧಾನಗಳನ್ನು ಅನುಸರಿಸಬೇಕು. ಅವುಗಳ ಬಗ್ಗೆ ಮುಂದಕ್ಕೆ ತಿಳಿಯೋಣ.
ಮನೆಯ ಮುಖ್ಯ ಬಾಗಿಲಿನ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹೂವು ತುಂಬಿದ ನೀರಿನ ಪಾತ್ರೆಯನ್ನು ಇರಿಸಿ. ಇದನ್ನು ಮನೆಯ ಅಲಂಕಾರದಲ್ಲಿ ಮುಖ್ಯ ದ್ವಾರದ ಬಳಿ ಇಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗಿ, ಖಂಡಿತವಾಗಿಯೂ ಮನೆ ಪ್ರವೇಶಿಸುತ್ತಾಳೆ ಎಂದು ಹೇಳಲಾಗುತ್ತದೆ.
ಮನೆಯ ಮುಖ್ಯ ಬಾಗಿಲಿನ ಅಲಂಕಾರದಲ್ಲಿ ॐ ಚಿಹ್ನೆಯನ್ನು ಬಳಸುವುದು ಮುಖ್ಯ. ಕಾಗದ ಮತ್ತು ಲೋಹದಿಂದ ಮಾಡಿದ ಸುಂದರವಾದ ಓಂ ಬರಹಗಳಿ ಮಾರುಕಟ್ಟೆಯಲ್ಲಿ ಕಾಣಬಹುದು. ಅವುಗಳಲ್ಲದಿದ್ದರೂ, ರೋಲಿಯೊಂದಿಗೆ 'ಓಂ' ಅನ್ನು ಬರೆಯಿರಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.
ಮನೆಯ ಮುಖ್ಯ ಬಾಗಿಲಿಗೆ ತೋರಣ ಕಟ್ಟಬೇಕು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ತೋರಣಗಳು ಸಿಗುತ್ತವೆ. ಆದರೆ ಅಂತಹ ತೋರಣಗಳ ಬದಲಾಗಿ ಬಾಳೆ, ಮಾವು ಅಥವಾ ಅಶೋಕ ಎಲೆಗಳಿಂದ ಮಾಡಿದ ತೋರಣವನ್ನು ಕಟ್ಟಿ. ಇವು ಮಂಗಳಕರವಾಗಿದ್ದು ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸುತ್ತವೆ.
ಮನೆಯ ಮುಖ್ಯ ಬಾಗಿಲಿನ ಮೇಲೆ ಸುಂದರವಾದ ಕೈಬರಹದಲ್ಲಿ ಅಥವಾ ಸ್ಟಿಕರ್ ರೂಪದಲ್ಲಿ 'ಶುಭ್ ಲಾಭ್' ಅನ್ನು ಬರೆಯಲು ಮರೆಯದಿರಿ.
ಇದಲ್ಲದೆ, ಮನೆಯ ಮುಖ್ಯ ಬಾಗಿಲಿನ ಮೇಲೆ ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮಿ ದೇವಿಯ ಫೋಟೋ ಅಥವಾ ಸ್ಟಿಕ್ಕರ್ ಅನ್ನು ಹಾಕಿ. ಇದರಿಂದ ತಾಯಿ ಲಕ್ಷ್ಮಿ ಸಂತಸಗೊಳ್ಳುತ್ತಾಳೆ. ಅಂತೆಯೇ ಮಾವಿನ ತೊಗಟೆ, ಕುಂಕುಮ ಅಥವಾ ಬೆಳ್ಳಿಯಿಂದ ಮಾಡಿದ ಸ್ವಸ್ತಿಕವನ್ನು ಹಾಕಲು ಮರೆಯದಿರಿ.
ಮನೆಯ ಮುಖ್ಯ ಬಾಗಿಲಿನಿಂದ ಮನೆಯೊಳಗೆ ಹೋಗುವಂತೆ, ಲಕ್ಷ್ಮಿ ದೇವಿಯ ಪಾದಗಳ ಗುರುತನ್ನು ಅಥವಾ ಅಚ್ಚನ್ನು ಹಾಕಲು ಮರೆಯದಿರಿ. ಇದರ ಜೊತೆಗೆ ಮನೆಯ ಮುಖ್ಯ ಬಾಗಿಲನ್ನು ಹೂವಿನ ರಂಗೋಲಿಯಿಂದ ಅಲಂಕರಿಸಿ. ಇದು ಮನೆಗೆ ಅದೃಷ್ಟವನ್ನು ತರಲು ಮತ್ತು ಮನೆಯನ್ನು ಪರಿಮಳಯುಕ್ತವಾಗಿಸಲು ಸಹಾಯ ಮಾಡುತ್ತದೆ.