B`day Special: ಬಲು ಸೊಗಸಾಗಿದೆ ರೋಹಿತ್ ಶರ್ಮಾ, ರಿತಿಕಾ ಸಜ್ದೇಹ್ ಪ್ರೇಮಕಥೆ
ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್, ವೃತ್ತಿಯಲ್ಲಿ ಸ್ಫೋರ್ಟ್ಸ್ ಮ್ಯಾನೇಜರ್. ಅವರು ಟೀಮ್ ಇಂಡಿಯಾದ ಈ ಬ್ಯಾಟ್ಸ್ ಮ್ಯಾನ್ ನ Brand Endorsements ಮತ್ತು ಕಾಂಟಾಕ್ಟ್ ಗಳ ಬಗ್ಗೆ ನೋಡಿಕೊಳ್ಳುತ್ತಾರೆ.
ರಿತಿಕಾ ಸಜ್ದೇಹ್ ಡಿಸೆಂಬರ್ 21, 1987ರಲ್ಲಿ ಜನಿಸಿದರು.
ರಿತಿಕಾ ಸಜ್ದೇಹ್ ತಾಯಿಯ ಹೆಸರು ಟೀನಾ ಸಜ್ದೇಹ್ ಮತ್ತು ತಂದೆಯ ಹೆಸರು ಬಾಬಿ ಸಜ್ದೇಹ್. ರಿತಿಕಾಗೆ ಒಬ್ಬ ಸಹೋದರನಿದ್ದು ಅವರ ಹೆಸರು ಕುನಾಲ್ ಸಜ್ದೇಹ್.
ರಿತಿಕಾ ಸಜ್ದೇಹ್ ಗೆ ಟ್ರಾವೆಲ್ ಮಾಡುವುದೆಂರೆ ಬಹಳ ಇಷ್ಟ. ರಾಬರ್ಟ್ ಡೋನಿ ಜ್ಯೂನಿಯರ್ (Robert Downey Jr), ರೆಯಾನ್ ರೆನಾಲ್ಡ್ಸ್ (Ryan Reynolds) ಮತ್ತು ಕ್ರಿಸ್ ಹ್ಯಾಮ್ ವರ್ಥ್ (Chris Hemsworth).ಇವರ ಅಚ್ಚು ಮೆಚ್ಚಿನ ನಟರಾಗಿದ್ದಾರೆ. ಇನ್ನು ಇವರ ನೆಚ್ಚಿನ ಟಿವಿ ಶೋಗಳೆಂದರೆ, ರಿವಾರ್ ಡೆಲ್ (Riverdale) ಮತ್ತು ಆರೋ (Arrow)..
ರಿತಿಕಾ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ (Yuvraj Singh) ಅವರನ್ನು ಅಣ್ಣ ಎಂದು ಕರೆಯುತ್ತಾರೆ. ಒಮ್ಮೆ ಯುವರಾಜ್ ಸಿಂಗ್ ತಮಾಷೆಯಾಗಿಯೇ ರೋಹಿತ್ ಶರ್ಮಾಗೆ ರಿತಿಕಾ ಅವರಿಂದ ದೂರ ಇರುವಂತೆ ಎಚ್ಚರಿಸಿದ್ದರು. ರಿತಿಕಾ ಆ ವೇಳೆ ರೋಹಿತ್ ಶರ್ಮಾ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾದದ್ದು. ನಂತರ ಸುಮಾರು 6 ವರ್ಷಗಳವರೆಗೆ ಇಬ್ಬರೂ ಪ್ರೇಮಿಗಳಾಗಿ ಕಾಳ ಕಳೆದಿದ್ದಾರೆ.
ಐಪಿಎಲ್ ಕ್ರಿಕೆಟ್ ವೇಳೆ ರೋಹಿತ್ ಶರ್ಮಾ ರಿತಿಕಾ ಜೊತೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಬೋರಿವಿಲ್ಲಿ ಸ್ಪೋರ್ಟ್ಸ್ ಗ್ರೌಂಡ್ ಗೆ ರಿತಿಕಾನನ್ನು ಕರೆದುಕೊಂಡು ಹೋಗಿ ಅಲ್ಲೇ ಪ್ರೊಪೋಸ್ ಮಾಡಿದ್ದರು. ಈ ವೇಳೆ ಉಂಗುರ ಕೊಂಡೋಯ್ದಿದ್ದ ರೋಹಿತ್ ಶರ್ಮಾ ಮಂಡಿಯೂರಿ ರಿತಿಕಾ ಮುಂದೆ ಪ್ರೇಮ ನಿವೇದನೆ ಮಾಡಿದ್ದರು.